ಮಕ್ಕಳ ಅನ್ನಕ್ಕೆ ಕನ್ನ ಹಾಕಿದ, ಪುಣ್ಯಾತ್ಮರು .!! ಕಾಳಸಂತೆಗೆ ಬಿಸಿಯೂಟ ಪದಾರ್ಥಗಳು, ಪ್ರಕರಣ ದಾಖಲು.!!

0
146

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಅಹಾರ ಸರಬರಾಜು ಗೋದಾಮಿನಿಂದ ಸೋಮವಾರ ಸಾಯಂಕಾಲದ ಸಮಯದಲ್ಲಿ ಎರಡು ಆಟೋಗಳಲ್ಲಿ ಅಕ್ಕಿ,ತೊಗರಿ ಬೇಳೆ ,ಎಣ್ಣೆಯನ್ನು ಮತ್ತಿತರ ಪದಾರ್ಥಗಳನ್ನು ತೆಗೆದುಕೊಂಡು ಹೊಗುವ ಸಮಯದಲ್ಲಿ, ಮಕ್ಕಳಿಗೆ ಕಡಿಮೆ ಪ್ರಮಾಣದಲ್ಲಿ ಪದಾರ್ಥಗಳನ್ನು ತೆಗೆದುಕೊಂಡು ಹೋಗುವುದನ್ನು ಗಮನಿಸಿ ಆಟೋಗಳನ್ನು, ಹಿಡಿದು ಪೋಲಿಸರಿಗೆ ಕೊಟ್ಟಿದ್ದಾರೆ.

ಮಧ್ಯಾಹ್ನ ಬಿಸಿಯೂಟ,ಪದಾರ್ಥಗಳನ್ನು ರಾಜ್ಯ ಸರ್ಕಾರದಿಂದ ಸರಬರಾಜು ಮಾಡುವ ಗುತ್ತಿಗೆದಾರರು ತಮ್ಮ ವಾಹನಗಳಲ್ಲಿ ಶಾಲೆಗಳಿಗೆ ಸರಬರಾಜು ಮಾಡಬೇಕು ಅನ್ನುವ ಕಂಡಿಷನ್ ಇರುತ್ತದೆ.

ಆದರೆ ನೇರವಾಗಿ ಖಾಸಿಗಿ ವಾಹನಗಳ ಗಳ ಮೂಲಕ ತೆಗೆದುಕೊಂಡು ಹೊಗುವಂತೆಯೂ ಇಲ್ಲ.

ಗುತ್ತಿಗೆದಾರರು ಇಲ್ಲದೆ ಇದ್ದರು, ಅಧಿಕಾರಿಗಳು ನೇರವಾಗಿ ಶಿಕ್ಷಣ ಅಧಿಕಾರಿಗಳು, ತೆಗೆದುಕೊಂಡು ಹೊಗುವ ಸಂದರ್ಭಗಳು ಇದ್ದಾವೆ.

ಸಿರುಗುಪ್ಪದಿಂದ,ನಡವಿ,ಅಗಲೂರು ಹೊಸಹಳ್ಳಿ, ಶಾಲೆಗಳಿಗೆ ,ಪದಾರ್ಥಗಳನ್ನು ತೆಗೆದುಕೊಂಡು ಹೊಗುವ ಆಟೋಗಳನ್ನು,ಶಿವಪ್ರಸಾದ್ ಗೌಡ,ಎನ್ನುವ ಬೆನಾಮಿ, ಗುತ್ತಿಗೆದಾರರು,ಈ ಹಿಂದೆ ರಾಜ್ಯ ಸರ್ಕಾರದಿಂದ ಸರಬರಾಜುಮಾಡುವ,ದೊಡ್ಡ ಬಸವನಗೌಡ,ಎನ್ನುವ,ಅಧಿಕೃತ ಗುತ್ತಿಗೆದಾರರಿಂದ,ರಾಜಕಾರಣಿಗಳ ಸಹಾಯದಿಂದ ಒಪ್ಪಂದವನ್ನು ಮಾಡಿಕೊಂಡು,ಸರಬರಾಜು ಮಾಡುತ್ತ ಇದ್ದರು ಅನ್ನುವ, ಮಾಹಿತಿ ಕೇಳಿ ಬಂದಿದೆ.

ಅದರಲ್ಲಿ ಸೋಮವಾರ, ಬಿಸಿಯೂಟದ ತಾಲೂಕಿನ ಅಧಿಕಾರಿ, ಆಟೋಗಳಲ್ಲಿ ಕಡಿಮೆ ಪದಾರ್ಥಗಳನ್ನು ಹಾಕಿಕೊಂಡು ಹೊಗುವುದನ್ನು ಗಮನಿಸಿದ್ದಾರೆ.

ತಕ್ಷಣವೇ ಅವರು ನೇರವಾಗಿ ಆಟೋಗಳನ್ನು ತೆಗೆದುಕೊಂಡು ಪೋಲಿಸ್ ಠಾಣೆಗೆ ಒಪ್ಪಿಸಿ ತನಿಖೆ ಮಾಡುವಂತೆ, ದೂರು ನೀಡಿದ್ದಾರೆ.

ಮಂಗಳವಾರ ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸಿದರೆ,ಕಡಿಮೆ ಪದಾರ್ಥಗಳು ಇದ್ದವು ಅನ್ನವುದು ಕಂಡುಬಂದಿದೆ.

ಸಂಬಂಧಿಸಿದ ಅಧಿಕಾರಿ ಪದ್ಮನಾಭ ರಾವ್ ಅವರ ಮೇಲೆ ಪ್ರಕರಣ ದಾಖಲೆ ಅಗಿದೆ. *ಇದಕ್ಕೆ ಅಸಲಿ ಸೂತ್ರ ದಾರರು ಬೇರೆ ಬೇರೆ ಇದ್ದಾರೆ.? ಇದರ ಹಿಂದೆ ದೊಡ್ಡ ಮಟ್ಟದ ಜಾಲ ಇದೇ.

ಗೋದಾಮಿನಿಂದ ಹಿಡಿದು,ಬಿಸಿಯೂಟಕ್ಕೆ “ಕನ್ನ” ಹಾಕುವ ಪ್ರಭಾವಿ ನಾಯಕರ ಪಡೆ ಇದೆ.!!

ಇದರಲ್ಲಿ ಅನೇಕರ ಕೈವಾಡ ಇದೇ ಅನ್ನುವ ಅನುಮಾನಗಳು ಇದ್ದಾವೆ.!!

ಕಂಪ್ಯೂಟರ್ ಗುಮಾಸ್ತರಿಂದ ಹಿಡಿದು,ಅಧಿಕೃತ ಗುತ್ತಿಗೆದಾರರ ಕೈವಾಡ ಇರಬಹುದು.??.

ಪ್ರತಿ ತಿಂಗಳು ಕಾಳಸಂತೆಗೆ ಕಳಿಸುವ ವ್ಯವಹಾರದಲ್ಲಿ ಕೆಲವರಿಗೆ, ಮಾಮೂಲು,ಮುಟ್ಟುತ್ತದೆ, ಅನ್ನುವ ಕೆಲ ಅನುಮಾನಗಳನ್ನು, ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.

ಈ ಪ್ರಕರಣದಲ್ಲಿ ಅಮಾಯಕ ಅಧಿಕಾರಿಯನ್ನು ಬಲಿಪಶುವು ಮಾಡಿದ್ದಾರೆ ಅನ್ನುವ ಮಾತುಗಳು ಕೇಳಿಬರುತ್ತಿದ್ದವು, ಅಚ್ಚರಿ ಮೂಡಿಸುತ್ತದೆ.

ಈ ಪ್ರಕರಣವನ್ನು ಸ್ಟೇಷನ್ ಮಟ್ಟದಲ್ಲಿ ಮುಚ್ಚಿ ಹಾಕುವ ಪ್ರಯತ್ನಗಳು ನಡೆದವು, ಅದರೇ ಕೆಲ ಅಧಿಕಾರಿಗಳನ್ನು ಭಯಪಡಿಸಿ,ಕಾಳಸಂತೆ ದಂದೆಗೆ ಅನುಕೂಲ ಮಾಡಿಕೊಳ್ಳುವ ಪ್ರಯತ್ನಗಳು ಮಾಡಿದ್ದಾರೆ ಅನ್ನುವ ಸಂದೇಹಗಳು ಹುಟ್ಟಿಕೊಂಡಿವೆ.

ಇನ್ನೂ ಪೂರ್ತಿ ವಿವರಗಳು,ಮುಂದಿನ ದಿನಗಳಲ್ಲಿ ಬಯಲಿಗೆ ಬರುತ್ತವೆ.coming soon.!!

(ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ)

LEAVE A REPLY

Please enter your comment!
Please enter your name here