ಸಾರ್ವಜನಿಕರಿಂದ ಆಹಾರ ಇಲಾಖೆಗೆ ಹಿಡಿಶಾಪ.! ಸರ್ವರ್‌ ಕಾಟ: ಪಡಿತರ ಚೀಟಿದಾರರ ಪರದಾಟ..!!

0
402

ಕೊಟ್ಟೂರು: ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್ ಇಲ್ಲದೆ ಕಂಗೆಟ್ಟಿದ್ದ ಸಾರ್ವಜನಿಕರಿಗೆ ಆಹಾರ ಇಲಾಖೆ ಹೊಸ ದಿನಾಂಕ ನಿಗದಿಪಡಿಸಿದೆ ಸೆ.1ರಿಂದ 10 ರವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಪಡಿತರ ಚೀಟಿ ತಿದ್ದುಪಡಿಗೆ ಜನರು ಸೈಬರ್ ಸೆಂಟರ್ ಗಳಿಗೆ ಹೋದರೆ ಸರ್ವರ್ ಇಲ್ಲದೆ ಜನರು ಗಂಟೆಗಟ್ಟಲೆ ಕಾದು ಸುಸ್ತಾಗಿ ಹೋಗಿದ್ದಾರೆ.

ಆಗಸ್ಟ್ 18ರಿಂದ 21ರವರೆಗೆ ತಿದ್ದುಪಡಿಗೆ ವಲಯವಾರು ಅವಕಾಶ ನೀಡಲಾಗಿತ್ತು. ಆದರೆ ತಿದ್ದುಪಡೆಗೆ ಒಂದು ದಿನವೂ ಸರ್ವರ್ ಇರಲಿಲ್ಲ. ಎಷ್ಟೋ ಮಂದಿ ತಿದ್ದುಪಡಿಗಾಗಿ ಗ್ರಾಮ ಒನ್, ಕರ್ನಾಟಕ ಒನ್, ಸೈಬರ್ ಸೆಂಟರ್ ಗಳಿಗೆ ಸುತ್ತಿ ವಾಪಸ್ ಆಗಿದ್ದರು. ಆ. 23 ರಂದು ಮತ್ತೆ ತಿದ್ದುಪಡೆಗೆ ಅವಕಾಶ ನೀಡಿದರು ಮತ್ತದೇ ಸಮಸ್ಯೆ ತಲೆದೋರಿತ್ತು.

ಏಪ್ರಿಲ್ ನಲ್ಲಿ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೊಂಡ ಬಳಿಕ ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಅವಕಾಶ ವಾಪಸ್ ಪಡೆಯಲಾಯಿತು. ಚುನಾವಣಾ ಮುಗೀತು ಹೊಸ ಸರ್ಕಾರ ಅಧಿಕಾರವಹಿಸಿ ನಾಲ್ಕೈದು ತಿಂಗಳಾಗುತ್ತಾ ಬಂದರು ಇನ್ನೂ ಪಡಿತರ ಚೀಟಿ ತಿದ್ದುಪಡಿ ವ್ಯವಸ್ಥೆಯನ್ನು ಪುನರ್ ಆರಂಭಿಸರಲಿಲ್ಲ. ಇದರಿಂದ ಕುಟುಂಬದ ಹೊಸ ಸದಸ್ಯರನ್ನು ಪಡಿತರ ಚೀಟಿಗೆ ಸೇರ್ಪಡೆಗೆ ಮಾಡುವುದಕ್ಕೆ ತುಂಬಾ ತೊಂದರೆಯಾಗಿದೆ. ಅದು ಅಲ್ಲದೆ ಗೃಹಲಕ್ಷ್ಮಿ ಯೋಜನೆಯಲ್ಲಿ ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ಗುರುತಿಸಿರುವ ಮಹಿಳೆ ಯೋಜನೆ ಫಲಾನುಭವಿ ಆಗುತ್ತಾರೆ ಆದ್ದರಿಂದ ಪಡಿತರ ಚೀಟಿ ತಿದ್ದುಪಡೆಗೆ ಹಲವು ಮಂದಿ ಸೈಬರ್ ಸೆಂಟರ್ ಗಳಿಗೆ ಅಲೆದಾಡಿ ಸಾಕಾಗಿ ಹೋಗಿದೆ ಎಂದು ಗೃಹಿಣಿ ಮರಿಯಮ್ಮ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

ಏನಿದು ಸರ್ವರ್ ಸಮಸ್ಯೆ? :
ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸರ್ವರ್ ಪಾತ್ರ ಪ್ರಮುಖವಾಗಿದೆ. ಈ ಹಿನ್ನಲೆ ಸರ್ವರ್ ಮೇಲೆ ತೀವ್ರ ಒತ್ತಡ ಬೀಳುವುದರಿಂದ ಈ ಸಮಸ್ಯೆ ಕಂಡು ಬಂದಿದೆ. ಪಡಿತರ ವಿತರಣಾ ವ್ಯವಸ್ಥೆ ಪ್ರಾರಂಭಿಸುವುದು ಪ್ರತಿ ತಿಂಗಳ 10ರ ಬಳಿಕವಾದ ಕಾರಣ ಈ ಬಾರಿ ಸೆಪ್ಟೆಂಬರ್ 1ರಿಂದ 10ರವರೆಗೆ ರಾಜ್ಯಾದ್ಯಂತ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

■ಸರ್ವರ್ ಸಮಸ್ಯೆ ಮನಗಂಡ ಆರೋಗ್ಯ ಇಲಾಖೆಯು ಸೆ. 1ರಿಂದ 10ರವರೆಗೆ ಪಡಿತರ ಚೀಟಿ ತಿದ್ದುಪಡಿಗೆ ದಿನಾಂಕ ವಿಸ್ತರಿಸಲಾಗಿದೆ. ಈ ಸಮಯದಲ್ಲಿ ಪಡಿತರ ವಿತರಣಾ ವ್ಯವಸ್ಥೆ ಇಲ್ಲದೆ ಇರುವುದರಿಂದ ಈ ಬಾರಿ ಸಮಸ್ಯೆಯಾಗಿದೆ.ಈ ಸರ್ವರ್ ಸಮಸ್ಯೆಯು ರಾಜ್ಯದ್ಯಂತ ಸಮಸ್ಯೆವಾಗಿದೆ.

  • ಬಿ.ಮಂಜುನಾಥ.
    ಆಹಾರ ನಿರೀಕ್ಷಕರು ಕೊಟ್ಟೂರು.

■ಪಡಿತರ ಚೀಟಿಗೆ ನನ್ನ ಸೊಸೆಯ ಹೆಸರು ಸೇರಿಸುವುದಕ್ಕೆ ಹಲವು ಬಾರಿ ಸೈಬರ್ ಸೆಂಟರ್ ಗಳಿಗೆ ಸುತ್ತಾಡಿ ಸಾಕಾಗಿ ಹೋಗಿದೆ ಆಹಾರ ಇಲಾಖೆ ಸೂಕ್ತ ವ್ಯವಸ್ಥೆ ಮಾಡಿಕೊಂಡು ತಿದ್ದುಪಡಿ ಘೋಷಣೆ ಮಾಡಬೇಕು ಸಾರ್ವಜನಿಕರು ಇಲ್ಲಿಂದ ಅಲ್ಲಿಗೆ ಓಡಾಡುವ ಪರಿಸ್ಥಿತಿ ಉಂಟಾಗಿದೆ.
-ಶಾರದಮ್ಮ
ಫಲಾನುಭವಿ ಕೊಟ್ಟೂರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here