ಶಟಲ್ ಬ್ಯಾಟ್ಮಿಂಟನ್ ವಿದ್ಯಾರ್ಥಿಗಳು ವಿಭಾಗಿ ಮಟ್ಟಕ್ಕೆ ಆಯ್ಕೆ

0
113

ಕೊಟ್ಟೂರು: ವಿಜಯನಗರ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲ ಬಾಲಕಿಯರ ಶಟಲ್ ಬ್ಯಾಟ್ಮಿಂಟನ್ ಪಂದ್ಯಾವಳಿ ಕೊಟ್ಟೂರಿನ ಶುಕ್ರವಾರ ಕ್ರೀಡಾಂಗಣದಲ್ಲಿ ನಡೆಸಲಾಯಿತು.

ಈ ಕ್ರೀಡಾಕೂಟದ ಪ್ರಾಯೋಜಕತ್ವವನ್ನು ವಿಸ್ಡಮೇರಾ ಶಾಲೆಯ ವಹಿಸಿದ್ದು ಕ್ರೀಡಾಕೂಟದಲ್ಲಿ ಮೈದುರ್ ಶಶಿಧರ, ಟಿ ಕರಬಸಪ್ಪ ,ಹಾಗೂ ಅಧ್ಯಕ್ಷರು ಆದ ಶ್ರೀ ಅಸನ್ ರವರ ಮುಂದಾಳತ್ವದಲ್ಲಿ ನಡೆಸಲಾಯಿತು.

ವಿಜಯನಗರ ಜಿಲ್ಲಾಮಟ್ಟದ ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಬಾಲ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಕ್ರೀಡಾಕೂಟಗಳು  ನಡೆದಿದ್ದು.

ಈ ಕ್ರೀಡಾಕೂಟದ ಫಲಿತಾಂಶ ಈ ಕೆಳಗಿನಂತಿದೆ

ಬಾಲಕಿಯರ ಪ್ರಾಥಮಿಕ ವಿಭಾಗದ ಪ್ರಥಮ ಸ್ಥಾನ ಹಗರಿಬೊಮ್ಮನಹಳ್ಳಿ,
ಬಾಲಕಿಯರ ಪ್ರಾಥಮಿಕ ವಿಭಾಗದ ದ್ವಿತೀಯ ಸ್ಥಾನ ಹೂವಿನಹಡಗಲಿ,
ಪ್ರಾಥಮಿಕ ಬಾಲಕರ ಪ್ರಥಮ ಸ್ಥಾನ ಹೂವಿನಹಡಗಲಿ, ಪ್ರಾಥಮಿಕ ಬಾಲಕರ ದ್ವಿತೀಯ ಸ್ಥಾನ ಹರಪನಹಳ್ಳಿ,
ಪ್ರೌಢಶಾಲೆ ಬಾಲಕರ ವಿಭಾಗ ಪ್ರಥಮ ಸ್ಥಾನ ಹಗರಿಬೊಮ್ಮನಹಳ್ಳಿ,
ಪ್ರೌಢಶಾಲೆ ಬಾಲಕರ ದ್ವಿತೀಯ ಸ್ಥಾನ ಕೂಡ್ಲಿಗಿ, ಪ್ರೌಢಶಾಲೆ ಬಾಲಕಿಯರ ವಿಭಾಗ ಪ್ರಥಮ ಸ್ಥಾನ ಕೂಡ್ಲಿಗಿ,
ಪ್ರೌಢಶಾಲೆ ಬಾಲಕಿಯರ ದ್ವಿತೀಯ ಸ್ಥಾನ ಹಗರಿಬೊಮ್ಮನಹಳ್ಳಿ,

ಈ ಪಂದ್ಯಾವಳಿಗಳಲ್ಲಿ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಪ್ರಥಮ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಪ್ರೌಢಶಾಲಾ ಬಾಲಕಿಯರ ಪ್ರೌಢಶಾಲಾ ಬಾಲಕರ ಪ್ರಥಮ ಸ್ಥಾನ ಪಡೆದು ವಿಭಾಗಿ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಈ ಸಂದರ್ಭದಲ್ಲಿ ಮೈದೂರು ಶಶಿಧರ್ ಟಿ ಕರಿಬಸಪ್ಪ ಹಾಗೂ ಹಸನ್ ಪಿ ಅಧ್ಯಕ್ಷರು ವಿಸ್ಡಮ್ ಎರಾ ಪ್ರಾಥಮಿಕ ಶಾಲೆಯ ಗೋಪಾಲಕೃಷ್ಣಮುಖ್ಯ ಗುರುಗಳು ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಲ್ಲಾ ಶಿಕ್ಷಕ ವರ್ಗದವರು ಹಾಗೂ ಜಿಲ್ಲೆಯ ಎಲ್ಲಾ ದೈಹಿಕ ಶಿಕ್ಷಕರು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here