ಜಮೀನುಗಳಿಗೆ ಓಡಾಡುಲೂ ರಸ್ತೆ ಗುರುತಿಸುವ ಕಾರ್ಯ ಪೂರ್ಣ.!

0
133

ಕೊಟ್ಟೂರು:ಜೂನ್:09:- ತಾಲೂಕಿನ ತೂಲಹಳ್ಳಿ ಕಂದಾಯ ಗ್ರಾಮಕ್ಕೆ ಸೇರಿದ ಹನುಮನಹಳ್ಳಿ ಗ್ರಾಮದ ರೈತರು ಹನುಮನಹಳ್ಳಿಯಿಂದ -ಮಾಗಡಿ (ಜಗಳೂರು ತಾಲೂಕು) ರಸ್ತೆ ಎಂದು ನಕ್ಷೆಯಲ್ಲಿರುವ ದಾಖಲಾಗಿರುವ ರಸ್ತೆಯಲ್ಲಿ ರೈತರು ತಮ್ಮ ತಮ್ಮ ಜಮೀನುಗಳಿಗೆ ಓಡಾಡುತ್ತಿದ್ದು, ಸ ನಂ 567 ಜಮೀನಿನ ಪಟ್ಟಾದಾರರು ನಕಾಶೆಯಲ್ಲಿರುವ ರಸ್ತೆಯನ್ನು ಗುರುತಿಸಿಕೊಂಡು ಓಡಾಡುವಂತೆ ತಡೆಹಿಡಿದಿದ್ದರು.

ಹನುಮನಹಳ್ಳಿ ಮತ್ತು ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ರೈತರು ದಾರಿ ಗುರುತಿಸಿ ಸಮಸ್ಯೆಯನ್ನು ಬಗೆಹರಿಸಿ ದಾರಿ ಗುರುತಿಸಿಕೊಡುವಂತೆ ವಿನಂತಿಸಿಕೊಂಡ ಮೇರೆಗೆ ಕೊಟ್ಟೂರಿನ ಪಿ.ಎಸ್.ಐ ವಿಜಯಕೃಷ್ಣ ಮತ್ತು ಸಿಬ್ಬಂದಿ, ತೂಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ, ಶಶಿಧರ ಪಿಡಿಒ, ಹನುಮನಹಳ್ಳಿ ಗ್ರಾಮದ ಮುಖಂಡರಾದ ಬಸವರಾಜ, ರಮೇಶ ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ, ತಾಲೂಕು ಭೂಮಾಪಕರು ಭರಮಪ್ಪ, ಗ್ರಾಮ ಲೆಕ್ಕಿಗರಾದ ಸಿದ್ದೇಶ, ಮುಖಂಡರಾದ ನಾಗರಕಟ್ಟೆ ರಾಜಣ್ಣ, ರೈತ ಮುಖಂಡರಾದ ಭರಮಪ್ಪ ಹಾಗೂ ಹನುಮನಹಳ್ಳಿ ಗ್ರಾಮಸ್ಥರೊಂದಿಗೆ ತಹಶೀಲ್ದಾರರು, ಕೊಟ್ಟೂರು ಇವರು ಸ್ಥಳ ಪರಿಶೀಲಿಸಿದರು.

ಎಲ್ಲರ ಸಮಕ್ಷಮದಲ್ಲಿ ವಿಚಾರಣೆ ಮಾಡಿ, ಸಾರ್ವಜನಿಕರಿಂದ ಮಾಹಿತಿಪಡೆದು ಗ್ರಾಮಸ್ಥರ ಮನವಿಯಂತೆ ಓಡಾಡಲು ದಾರಿಯನ್ನು ನಕಾಶೆಯಲ್ಲಿರುವಂತೆ ಗುರುತಿಸಿಕೊಡಲಾಯಿತು.

ಮಳೆಗಾಲದಲ್ಲಿ ಜಮೀನುಗಳಿಂದ ಹಳ್ಳದ ಕಡೆ ಹರಿದುಹೋಗುವ ನೀರಿನಿಂದ ರಸ್ತೆ ಹದಗೆಟ್ಟಿದ್ದು, ಗ್ರಾಮ ಪಂಚಾಯಿತಿ ಪಿಡಿಒ ರವರಿಗೆ ತುರ್ತಾಗಿ ದುರಸ್ಥಿ ಮಾಡಿಸಿಕೊಡುವಂತೆ ಸ್ಥಳದಲ್ಲಿ ಸೂಚಿಸಿ ಸಮಸ್ಯೆಯನ್ನು ಬಗೆಹರಿಸಲಾಯಿತು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here