ಬರ ಅಧ್ಯಯನ ತಂಡದ ಎದುರು ರೈತನ ಸಂಕಷ್ಟ ತೋಡಿಕೊಂಡ ಪರಿ

0
47

ಕೊಟ್ಟೂರು : ತಾಲೂಕಿನ ಮಲ್ಲನಾಯಕನಹಳ್ಳಿಯ ರೈತ ದೊಡ್ಡಮನಿ ಶಾಮಣ್ಣ ಶನಿವಾರ ತಿಮ್ಮಲಾಪುರ ಕ್ರಾಸ್‌ನಲ್ಲಿನ ತನ್ನ ಹೊಲದಲ್ಲಿ ಬೆಳೆ ಪರಿಶೀಲನೆ ಕೈಗೊಂಡ ಬರ ಅಧ್ಯಯನ ತಂಡದ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಡಿ.ರಾಜಶೇಖರನ್ ಅವರಿಗೆ ತನ್ನ ಕೃಷಿ ಚಟುವಟಿಕೆಯಲ್ಲಿನ ಈ ವರ್ಷವೂ ಸಾಲ ಸೂಲ ಮಾಡಿ ತನಗಿರುವ ೧೨ ಎಕರೆ ಹೊಲದಲ್ಲಿ ಮೆಕ್ಕೆಜೋಳ, ರಾಗಿ, ಈರುಳ್ಳಿ ಬೆಳೆಗಳ ಬಿತ್ತನೆ ಮಾಡಿದ್ವಿ, ಒಂದೂ ಬೆಳೆನೂ ಬೆಳೆಯಲಾರದೆ ನೀರಿಲ್ಲದೆ ಒಣಗಿ ಹೋಗಿ ಲಕ್ಷಾಂತರ ರೂಗಳ  ನಷ್ಟವನ್ನು ವಿವರಿಸಿ ತನಗಿರುವ ನಾಲ್ಕು ಮಕ್ಕಳನ್ನು ಈ ನಷ್ಟದೊಂದಿಗೆ ಸಾಕಬೇಕಿದೆ . ಮಳೆ ಸಂಪೂರ್ಣ ಕೈಕೊಟ್ಟು ವಿಪರೀತ ತೊಂದರೆ ಅನುಭವಿಸುತ್ತಿರಿವೆ.ಎಂದು ಅಳಲನ್ನು ತೋಡಿಕೊಂಡ ರೈತರ ಪರಿ ಇದಾಗಿತ್ತು.

ರೈತನಿಗೆ ಧ್ವನಿಗೆಗೂಡಿಸಿದ ರೈತ ಸಂಘದ ಎನ್.ಭರ್ಮಣ, ಕೊಟ್ರೇಶ್, ಮತ್ತಿತರರು ದನ ಕರುಗಳಿಗೆ ಕುಡಿಯುವ ನೀರಿಲ್ಲ ಇಂತಹ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಸೂಕ್ತ ಪರಿಹಾರ ನೀಡಿ ನಮ್ಮ ರೈತರ ರಕ್ಷಣೆಗೆ ಬರಬೇಕೆಂದು ಅವರು ತಂಡವನ್ನು ಕೋರಿಕೊಂಡರು.

ಪಕ್ಕದಲ್ಲಿನ ವನಜಾಕ್ಷಮ್ಮ ಎಂಬ ರೈತ ಮಹಿಳೆಯ ಜಮೀನಿಗೆ ಭೇಟಿ ನೀಡಿದ ತಂಡ ಅಲ್ಲಿ ಬೆಳೆದಿದ್ದ ಮೆಕ್ಕೇಜೋಳ ರಾಗಿ ಬೆಳೆಗಳು ಸಂಪೂರ್ಣ ಒಣಗಿ ಹೋಗಿರುವುದಲ್ಲದೆ ಸಂಪೂರ್ಣ ನಷ್ಟವಾಗಿರುವುದನ್ನು ಮನಗಂಡು ರೈತ ಮಹಿಳೆ ಕುಟುಂಬ ನಿರ್ವಹಣೆ ಭವಣೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಹಿರಿಯ ಅಧಿಕಾರಿ ಆರ್.ಠಾಕರೆ, ಮೋತಿ ರಾಮ್, ರಾಜ್ಯದ ಅಧಿಕಾರಿ ಕರಿಗೌಡ , ಜಿ.ಪಂ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಸದಾಶಿವ ಪ್ರಭು ,ಕೃಷಿ ಇಲಾಖೆ ಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ , ಜಿಲ್ಲಾ ಕೃಷಿ ನಿರ್ದೇಶಕಿ ಮಂಜುಳಾ, ಎ.ಡಿ.ಸುನಿಲ್ ಕುಮಾರ್, ತಹಶೀಲ್ದಾರ ಅಮರೇಶ್ ಜಾಲಿಹಾಳ್, ಇಓ ರವಿಕುಮಾರ್, ಎಡಿ ವಿಜಯಕುಮಾರ್, ಎಪಿಎಂಸಿ ಕಾರ್ಯದರ್ಶಿ ವೀರಣ್ಣ, ಕೃಷಿ ಕೇಂದ್ರದ ಅಧಿಕಾರಿ ಶಾಮಸುಂದರ್, ಕೊಟ್ಟೂರು ಪೊಲೀಸ್ ಠಾಣೆಯ ಪಿಎಸ್ಐ ಗೀತಾಂಜಲಿ ಸಿಂಧೆ , ಸಿಬ್ಬಂದಿ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here