ಶಾಲಾ ಮಕ್ಕಳಿಗೆ ಲಸಿಕಾ ಅಭಿಯಾನದಡಿ ಟಿ.ಡಿ ಲಸಿಕೆ ನೀಡಿಕೆಗೆ ಚಾಲನೆ,

0
179

ಸಂಡೂರು: ನ: 10: ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಲಸಿಕಾ ಅಭಿಯಾನದಡಿ ಟಿ.ಡಿ ಲಸಿಕೆ ನೀಡಿಕೆಗೆ ಚಾಲನೆ ನೀಡಲಾಯಿತು,

ಶಾಲೆಯ ಮುಖ್ಯ ಶಿಕ್ಷಕ ಬಂದೇನವಾಜ್ ಅವರು ಮಾತನಾಡಿ ಶಾಲಾ ಮಕ್ಕಳಿಗೆ ಟೆಟಾನಸ್ ಮತ್ತು ಡಿಪ್ತೀರಿಯಾ ಲಸಿಕೆ ನೀಡುತ್ತಿರುವುದು ಉತ್ತಮ ಕಾರ್ಯ, ಮಕ್ಕಳು ಆಟವಾಡುವಾಗ ಗಾಯ ಮಾಡಿಕೊಳ್ಳುವುದು ಸಾಮಾನ್ಯ, ಲಸಿಕೆ ನೀಡುತ್ತಿರುವುದರಿಂದ ಟೆಟಾನಸ್ ಬರದಂತೆ ರಕ್ಷಣೆ ಮಾಡಲು ಲಸಿಕೆ ಅವಶ್ಯಕ, ಹಾಗೆ ವೈಯಕ್ತಿಕ ಸ್ವಚ್ಛತೆಗೆ ಗಮನ ಕೊಡುವಂತೆ ಮಕ್ಕಳಿಗೆ ಕಿವಿ ಮಾತು ಹೇಳಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಹತ್ತು ಮತ್ತು ಹದಿನಾರು ವರ್ಷದಲ್ಲಿ ಮಕ್ಕಳಿಗೆ ಟಿ.ಡಿ ಚುಚ್ಚುಮದ್ದು ನೀಡಲಾಗುತ್ತದೆ, ಸರ್ಕಾರದ ಆದೇಶದಂತೆ ನವಂಬರ್ ತಿಂಗಳಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ಲಸಿಕೆ ನೀಡಲಾಗುವುದು,ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ನೋಡಿ ಕೊಳ್ಳಲಾಗುವುದು ಎಂದು ತಿಳಿಸಿದರು,
ಆರೋಗ್ಯ ಸುರಕ್ಷಾಧಿಕಾರಿ ಭಾಗ್ಯಲಕ್ಷ್ಮಿ ಅವರು ಮಕ್ಕಳಿಗೆ ಟಿ.ಡಿ ಚುಚ್ಚುಮದ್ದು ನೀಡಿದರು,

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಎಸ್ ಕೃಷ್ಣ ವೇಣಿ, ಇ.ಕೃಷ್ಣವೇಣಿ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಆಶಾ ಕಾರ್ಯಕರ್ತೆ ಪದ್ಮಾ,ರಾಜೇಶ್ವರಿ, ವಿಜಯಶಾಂತಿ, ಶ್ರೀದೇವಿ, ತೇಜಮ್ಮ, ಗೋವಿಂದಮ್ಮ, ಕಾವೇರಿ,ಹುಲಿಗೆಮ್ಮ, ರೇಖಾ, ವೆಂಕಟಲಕ್ಷ್ಮಿ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here