ನಿಡುಗುರ್ತಿ, ಕೊಂಡಾಪುರ ಹೊಸ & ಹಳೆಜೋಗಿಕಲ್ಲು ಕೆಪಿಎಸ್ ಶಾಲೆಯ ಕೊರೊನಾ ಪಾಸಿಟಿವ್ ವಿದ್ಯಾರ್ಥಿಗಳಿಗೆ ಹೋಮ್ ಐಸೋಲೇಶನ್

0
612

ಸಂಡೂರು ಜ 31: ನಿಡುಗುರ್ತಿ, ಕೊಂಡಾಪುರ, ಹೊಸ ಮತ್ತು ಹಳೆ ಜೋಗಿಕಲ್ಲು ಗ್ರಾಮದ ವಿದ್ಯಾರ್ಥಿಗಳು ಬಂಡ್ರಿ ಶಾಲೆಯಲ್ಲಿ ಓದುತ್ತಿದು ಅಲ್ಲಿ ಕೋವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಕಂಡುಬಂದ ಹಿನ್ನಲೆಯಲ್ಲಿ ಈ ಗ್ರಾಮಗಳ 12 ವಿದ್ಯಾರ್ಥಿಗಳು ಪಾಸಿಟಿವ್ ಅಗಿದ್ದಾರೆ, ಆ ಮಕ್ಕಳಿಗೆ ಟ್ರಿಯೇಜ್ (ಚಿಕಿತ್ಸಾ ಸರದಿ ನಿರ್ಧಾರ) ಮಾಡಲು ಉದ್ಬವ್ ಎಮ್.ಎಮ್.ಯು ಟೀಮ್ ನಿಯೋಜಿಸಲಾಗಿದ್ದು, ತಂಡವು ಇಂದು ಗ್ರಾಮಗಳಿಗೆ ಬೇಟಿಕೊಟ್ಟು ಅವರ ಆರೋಗ್ಯ ವಿಚಾರಿಸಿ, ಪಲ್ಸ್ ರೇಟ್, ಆಕ್ಸಿಜನ್ ಲೆವೆಲ್, ಟೆಂಪರೇಚರ್ ಚೆಕ್ ಮಾಡಿ ಹೋಮ್ ಐಸೋಲೇಷನ್ ಮಾಡಲಾಗಿದೆ,

ಕೋವಿಡ್ ರೋಗಲಕ್ಷಣಗಳು ಸಾಮಾನ್ಯವಾಗಿದ್ದು ಮೆಡಿಸಿನ್ ಕಿಟ್ ಅದೈರ್ಯ ಪಡಬೇಡಿ,ಆತ್ಮ ಸ್ಥೈರ್ಯ ಹೆಚ್ಚಿಸಿಕೊಳ್ಳಿ, ಪೌಷ್ಟಿಕ ಆಹಾರ ಸೇವಿಸಿ, ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ, ಮಾಸ್ಕ್ ಹಾಕಿಕೊಳ್ಳಿ, ಇತರರಿಂದ ಅಂತರ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಲಾಗಿದೆ,
ಯಾವುದೇ ಮಗುವಿಗೂ ಅಪಾಯದ ಸೂಚನೆಗಳು ಇರುವುದಿಲ್ಲ,

ಈ ಸಂದರ್ಭದಲ್ಲಿ ಬಂಡ್ರಿಯ ಉದ್ಬವ್ ಮೊಬೈಲ್ ಮೆಡಿಕಲ್ ಯುನಿಟ್ ನ ಕೋಅರ್ಡಿನೆಟರ್ ಮತ್ತು ಫಾರ್ಮಸಿ ಅಧಿಕಾರಿ ವರವೇಶ್, ಶುಶ್ರೂಷಣಾಧಿಕಾರಿ ವಿಮಲಾಕ್ಷಿ, ಪವಿತ್ರ, ಆಸೀಪ್, ಆಶಾ ಪೆಸಿಟೆಟರ್ ಪಾಪಮ್ಮ, ಕಾರ್ಯಕರ್ತೆಯರಾದ ಸಾವಿತ್ರಿ, ವಿನೋದ, ಅಂಜಿನಮ್ಮ ಇತರರು ಸಹಕಾರ ನೀಡಿದ್ದರು.

LEAVE A REPLY

Please enter your comment!
Please enter your name here