ಯಶವಂತನಗರ 6ನೇ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳಿಗೆ ಚಾಕೋಲೇಟ್, ಬಲೂನು ನೀಡಿ ಸ್ವಾಗತ..!!

0
235

ಸಂಡೂರು:ನ:10:- ಸುಮಾರು ಒಂದೂವರೆ ವರ್ಷಗಳ ನಂತರ ಸಂಡೂರು ತಾಲೂಕಿನ ಯಶವಂತನಗರದಲ್ಲಿ ದಿನಾಂಕ:08.11.2021ರಂದು 6ನೇ ಅಂಗನವಾಡಿ ಆರಂಭವಾಯಿತು, ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ, ಪುಟಾಣಿ ಮಕ್ಕಳಿಗೆ ಯಶವಂತನಗರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ,ಸದಸ್ಯರು,ಬಿಲ್ ಕಲೆಕ್ಟೇರ್ ಚಾಕೋಲೇಟ್, ಬಲೂನ್, ಗುಲಾಬಿ ಹೂ ನೀಡಿ ಪ್ರೀತಿಯಿಂದ ಸ್ವಾಗತಿಸಿದರು.

ಯಶವಂತನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6ನೇ ಅಂಗನವಾಡಿ ಕೇಂದ್ರದಲ್ಲಿ ಬಲೂನು, ತಳಿರು ತೋರಣಗಳಿಂದ ಸಿದ್ಧಪಡಿಸಿದ್ದ ಮತ್ತು ಕರೋನಾ ನಿಯಮಗಳನ್ನು ಪಾಲನೆಯನ್ನು ಅನುಸರಿಸುತ್ತಾ ಕೇಂದ್ರದ ಆರಂಭದ ಒಂದು ದಿನದ ಹಿಂದೆ ಕೇಂದ್ರಕ್ಕೆ ಸ್ಯಾನಿಟೈಸರ್ ನ್ನು ಸಿಂಪರಣೆಯನ್ನು ಮಾಡಲಾಗಿದ್ದು,ಕೇಂದ್ರ ಸಂಪೂರ್ಣ ಸ್ವಚ್ಛತೆಯಿಂದ ಕೂಡಿತ್ತು ಅಂಗನವಾಡಿ ಕೇಂದ್ರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹನುಮಂತಪ್ಪ ಹಾಗೂ ಸದಸ್ಯರು ಭಾಗವಹಿಸಿದ್ದರು.

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಆಗಮನಕ್ಕೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳು, ಸಿದ್ಧತೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪಂಚಾಯತಿ ಕಾರ್ಯದರ್ಶಿಯಾದ ಹನುಮಂತಪ್ಪ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ಹಾಜರಾಗುವ ಎಲ್ಲರಿಗೂ ಅರ್ಧಗಂಟೆಗೊಮ್ಮೆ ಒಂದು ಸಾರಿ ಸೋಪಿನಿಂದ ಕೈತೊಳೆಯುವಂತೆ ತಿಳಿಸಿದರು ಹಾಗೇ ಗ್ರಾಮ ಪಂಚಾಯತಿ ಸದಸ್ಯರಾದ ಬುಡೇನ್ ಇವರು ಮಕ್ಕಳಿಗೆ ಪ್ರತಿದಿನ ಮಾಸ್ಕನ್ನು ಧರಿಸಿಕೊಂಡು ಸಮಯಕ್ಕೆ ಸರಿಯಾಗಿ ಬರುವಂತೆ, ಹಾಗೇ ಮತ್ತೊಬ್ಬ ಸದಸ್ಯರಾದ ಮಾಲಾನ್ ಕೇಂದ್ರಕ್ಕೆ ಬರುವ ಮಕ್ಕಳಿಗೆ ಮಕ್ಕಳ ಪೋಷಕರು ಅವರನ್ನು ಸ್ವಚ್ಚವಾಗಿ ಇರುವಂತೆ ನೋಡಿಕೊಂಡು ಕೇಂದ್ರಕ್ಕೆ ಕಳಿಸಬೇಕೆಂದು ತಿಳಿಸಿದರು

ಹಾಗೇ 6ನೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾದ ಟಿ. ಕವಿತಾ ಅವರು ಮಾತನಾಡಿ ಮಕ್ಕಳು ಮತ್ತು ಪೋಷಕರು ಕೇಂದ್ರಕ್ಕೆ ಉತ್ಸಾಹದಿಂದ ಆಗಮಿಸುತ್ತಿದ್ದು,ಗ್ರಾಮ ಪಂಚಾಯಿತಿ ಆಡಳಿತದಿಂದ ಮತ್ತು ಸದಸ್ಯರು ಹಾಗೂ ಸ್ಥಳೀಯರಿಂದ ಉತ್ತಮ ಸಹಕಾರ ದೊರೆತಿದ್ದು, ಇಂದು ಜಿಲ್ಲೆಯ ಎಲ್ಲಾ 1191 ಅಂಗನವಾಡಿಗಳು ಆರಂಭಗೊಂಡಿದ್ದು, ಎಲ್ಲಾ ಕೇಂದ್ರಗಳಲ್ಲಿ ಮಕ್ಕಳ ಸುರಕ್ಷತೆಗೆ ಗರಿಷ್ಠ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪೋಷಕರು ಯಾವುದೇ ಆತಂಕವಿಲ್ಲದೇ ಪ್ರತಿದಿನ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುವಂತೆ ಮನವಿಯನ್ನು ಮಾಡಿದರು

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾದ ಹನುಮಂತಪ್ಪ ಗ್ರಾಮ ಪಂಚಾಯತಿ ಸದಸ್ಯರುಗಳಾದ ಬುಡೇನ್, ಮಾಲನ್ ಮತ್ತು ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಕುಮಾರಸ್ವಾಮಿ ಮತ್ತು ಮಕ್ಕಳ ಪೋಷಕರು ಇದ್ದರು

LEAVE A REPLY

Please enter your comment!
Please enter your name here