ನಿಂಬಳಗೇರೆ ಕೆ.ಜೆ.ವಿ.ಎಸ್ ನಡೆ- ಶಾಲೆ ಕಡೆ ಎಂಬ ವೈಜ್ಞಾನಿಕ ಕಾರ್ಯಕ್ರಮ

0
206

ಕೊಟ್ಟೂರು: ನಿಂಬಳಗೆರೆ ಗ್ರಾಮದ  ಬಿಕೆವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕೂಡ್ಲಿಗಿ ವತಿಯಿಂದ ಕೆ.ಜೆ.ವಿ.ಎಸ್ ನಡೆ- ಶಾಲೆ ಕಡೆ”ಎಂಬ ವೈಜ್ಞಾನಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಕೆ ಜೆ ವಿ ಎಸ್ ಅಧ್ಯಕ್ಷರಾದ ಶ್ರೀಯುತ ಜಿ ಜಗದೀಶ್ ಇವರು ಪ್ರಾಸ್ತಾನಿಕವಾಗಿ ಮಾತನಾಡಿ ನಮ್ಮ ಸಮಿತಿ ವತಿಯಿಂದ ವೈಜ್ಞಾನಿಕ ಸಾಹಿತ್ಯ, ಚಿತ್ರಕಲೆ, ಆರೋಗ್ಯ ವಿಜ್ಞಾನ, ಚಿಂತನೆ, ರಸಪ್ರಶ್ನೆ ಹಾಗೂ ಸಮಾಜದಲ್ಲಿರುವ ಕಂದಾಚಾರಗಳನ್ನು ತೊಲಗಿಸುವಂತಹ ಕಾರ್ಯಕ್ರಮಗಳನ್ನು ನಮ್ಮ ತಂಡದ ಮೂಲಕ ಮಾಡಲಾಗುತ್ತದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದು ಸಮಾಜ ತಿದ್ದುವ ಕೆಲಸವನ್ನು ಮಾಡಬೇಕೆಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘದ ಕಾರ್ಯದರ್ಶಿಗಳು ಹಾಗೂ ಕೆ ಜೆ ವಿ ಎಸ್ ಜಿಲ್ಲಾ ಸಂಯೋಜಕರು ಶ್ರೀ ಬಿ ಬಿ ಶಿವಾನಂದ ಇವರು ಸಮಾಜದಲ್ಲಿ ಎಲ್ಲಿಯವರೆಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳದೆ ನಂಬುತ್ತೇವೆಯೋ ಅಲ್ಲಿವರೆಗೂ ಮೋಸ ಮಾಡುವವರು ಇರುತ್ತಾರೆ.  ಮೂಡನಂಬಿಕೆ ಬೆಳೆಸುವಂತಹ ವ್ಯಕ್ತಿಗಳ ಮಾತನ್ನು ಕೇಳದೆ ಸದಾ ಜಾಗೃತರಾಗಿರಬೇಕೆಂದು ಹೇಳಿದರು.

ಸಮಿತಿಯ ಸದಸ್ಯರಾದ ಶ್ರೀ ನವೀನ್ ಕುಮಾರ್ ಶಿಕ್ಷಕರು ಇವರು ವಿಜ್ಞಾನ ಹೇಗೆ ಹುಟ್ಟಿತು?  ವಿಜ್ಞಾನ ಜೀವನಕ್ಕೆ ಎಷ್ಟು ಅವಶ್ಯಕ?   ಜೀವನದಲ್ಲಿ ಹಣ, ಆಸ್ತಿ ಮುಖ್ಯವಲ್ಲ. ಯಾರಲ್ಲಿ ಜ್ಞಾನ ಇರುತ್ತದೆಯೋ ಅವರು ಸ್ಥಿರವಾಗಿ ಉಳಿಯುತ್ತಾರೆ ಎಂದು ಹೇಳಿದರು.

ಸಮಿತಿಯ ಕಾರ್ಯದರ್ಶಿಗಳು ಹಾಗೂ ಶಿಕ್ಷಕರಾದ ಕೆ ಕುಮಾರಸ್ವಾಮಿ ಇವರು  ಮನುಷ್ಯನ ಆರೋಗ್ಯಕ್ಕೆ ಆಹಾರ ಮತ್ತು ಜೀವನಶೈಲಿ ಮಹತ್ವ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.

ಸಮಿತಿಯ ಉಪಾಧ್ಯಕ್ಷಣಿ ಶ್ರೀಮತಿ ಜಿ ವಿನುತ  ಶಿಕ್ಷಕರು ಇವರು  ಮೋಜಿನ ಗಣಿತದ ಮೂಲಕ ವಿದ್ಯಾರ್ಥಿಗಳನ್ನು ಹಾಗೂ ನೆರೆದ ಜನಸ್ತೋಮವನ್ನು ವಿಸ್ಮಯಗೊಳಿಸಿದರು.

ಸಮಿತಿಯ ಸದಸ್ಯರಾದ ಬಸವರಾಜ್ ಗೌಡ್ರು ಶಿಕ್ಷಕರು ಇವರು  ವಿದ್ಯಾರ್ಥಿಗಳು ತಮ್ಮ ಆರೋಗ್ಯಕ್ಕಾಗಿ’ಯೋಗ’ ಕಲಿಯಿರಿ.  ಪತಂಜಲಿ ಯೋಗ ಸಂಸ್ಥೆಯವರು ಉಚಿತ ಯೋಗ ಆನ್ಲೈನ್ ಶಿಬಿರವನ್ನು ಮಾಡುವ ಸಂದರ್ಭದಲ್ಲಿ ಸರ್ವರು ಪ್ರಯೋಜನ ಪಡೆಯಲು ತಿಳಿಸಿದರು.

ಸದ್ರಿ ಶಾಲೆಯ ಶಿಕ್ಷಕರು ಹಾಗೂ ಸಮಿತಿಯ ಖಜಾಂಚಿಗಳು  ಆದಂತಹ ಶ್ರೀಯುತ ರವಿಪ್ರಸಾದ್ (ನಮ್ಮ ಭಾಗದ ಹುಲಿಕಲ್ ನಟರಾಜ್)  ಇವರು ಸಮಾಜ  ದ್ರೋಹಿಗಳಾದ ಪವಾಡ ಪುರುಷರ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಹೊರಹಾಕುವಂತಹ ‘ಪವಾಡ ರಹಸ್ಯ ಬಯಲು  ಕಾರ್ಯಕ್ರಮ’ದಲ್ಲಿ ನೀರಿನಲ್ಲಿ  ದೀಪವನ್ನು ಉರಿಸುವುದು,  ತೆಂಗಿನಕಾಯಿ ಒಳಗಡೆ ರಕ್ತವನ್ನು ತರಿಸುವುದು, ಹೂ/ ಬಂಗಾರದ ಚೈನ್ ತರಿಸುವುದು ಮುಂತಾದ ಪವಾಡಗಳನ್ನು ಮಾಡಿ ತೋರಿಸಿ ಅದರ ಹಿಂದಿರುವ ವೈಜ್ಞಾನಿಕ ತಿಳುವಳಿಕೆಯನ್ನು ಹೇಳಿದರು. ಇಂತಹ ಮೂಢನಂಬಿಕೆಗಳನ್ನು ನಂಬಿ ಮೋಸ ಹೋಗಬಾರದೆಂದು ಹಾಗೂ ‘ಶೂನ್ಯದಿಂದ ಏನನ್ನು ಸೃಷ್ಟಿಸಲು  ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಖಜಾಂಚಿಗಳಾದ ಶ್ರೀ ಬಿ ಪತ್ರೇಶ್  ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಬಿ ಶಿವಪುತ್ರ ಗೌಡ ಶಿಕ್ಷಕರು ಸರ್ವರನ್ನು ಸ್ವಾಗತಿಸಿದರು. 

ಕಾರ್ಯಕ್ರಮದಲ್ಲಿ ಬಯಲ ತುಂಬರಗುದ್ದಿ ಪ್ರೌಢಶಾಲಾ ಮುಖ್ಯ ಗುರುಗಳಾದ ಶ್ರೀ ನಾಗರಾಜ್ ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಂ ಜಿ ಪ್ರಕಾಶ್ ಸದಸ್ಯರಾದ  ಶ್ರೀ ಸಿದ್ದೇಶ್,  ಶ್ರೀ ವೀರಭದ್ರಪ್ಪ, ಶಿಕ್ಷಕರಾದ ಶ್ರೀ ಎಸ್ ವಿದ್ಯಾರಣ್ಯ,   ಶ್ರೀ ಎಲ್ ದಯಾನಂದ , ಶ್ರೀ ಬುಳ್ಳಪ್ಪ,ಶ್ರೀ ಎಮ್.ಬಿ.ನಾಗರಾಜ, ಶ್ರೀ ಗುರುಬಸವರಾಜ್, ಶ್ರೀಮತಿ ಮಂಗಳ ಗೌರಿ, ಶ್ರೀ ಸರ್ಪ ಭೂಷಣ, ಶ್ರೀ ಸಿದ್ದೇಶ್ ಪಟೇಲ್, ಶ್ರೀ ಮಲ್ಲಪ್ಪ, ಶ್ರೀ ರೇವಣಸಿದ್ದಯ್ಯ, ಶ್ರೀಮತಿ ಅಂಜಿನಮ್ಮ, ಶ್ರೀ ಕರಿಯಣ್ಣ,ಶ್ರೀ ವೀರಭದ್ರಪ್ಪ. ಕೆ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here