ಮೂರನೇ ಅಲೆ ಸಾಮಾನ್ಯ ನೆಗಡಿ ಕಾಯಿಲೆಯಂತಾಗಿದೆ, ಭಯ ಪಡುವ ಅವಶ್ಯಕತೆ ಇಲ್ಲ : ಡಾ ಪೂಜಾ, ‌

0
499

ಸಂಡೂರು:ಜ:೨೧: ‌‌‌ತೋರಗಲ್ಲು ಕ್ಲಸ್ಟರ್ ನ ಪಾಸಿಟಿವ್ ಚಿಕಿತ್ಸಾ ಸರದಿ ನಿರ್ಧಾರದ ಕರ್ತವ್ಯಕ್ಕೆ ಸ್ಕ್ವಾಡ್ ವೆಸ್ ಮೊಬೈಲ್ ಮೆಡಿಕಲ್ ಯುನಿಟ್ ನ್ನು ನಿಯೋಜನೆ ಮಾಡಿದ ನಿಮಿತ್ಯ ಪಾಸಿಟಿವ್ ಪ್ರಕರಣಗಳ ಆರೋಗ್ಯ ವಿಚಾರಣೆ ಮಾಡಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿವೆ, ಯಾರಿಗೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿಲ್ಲ, ಮೂರನೇ ಅಲೆಯ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ, ಎಚ್ಚರಿಕೆಯಿಂದ ಇರಬೇಕು, ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು, ವೈದ್ಯರ ತಂಡ ಮನೆ ಪಾಸಿಟಿವ್ ಇರುವವರ ಬಾಗಿಲಿಗೆ ಬಂದು ನಿಮ್ಮ ಆರೋಗ್ಯದ ಕಾಳಜಿ ವಹಿಸಲಿದ್ದಾರೆ ಜನರು ಇದಕ್ಕೆ ಸ್ಪಂದಿಸಬೇಕು, ಅಕ್ಕ ಪಕ್ಕದ ಮನೆಯವರ ಆಡಿ ಕೊಳ್ಳುವುದರ ಬಗ್ಗೆ ಬಿಟ್ಟು ತಮ್ಮ ತಮ್ಮ ಕುಟುಂಬವನ್ನು ಕೋವಿಡ್ ನಿಂದ ರಕ್ಷಿಸಿಕೊಳ್ಳುವ ಬಗ್ಗೆ ಗಮನ ಕೊಡಲು ತಿಳಿಸಿದರು, ಏಳು ದಿನಗಳು ಮನೆಯಲ್ಲೆ ಇರಿ, ಪೂರ್ಣ ಚಿಕಿತ್ಸೆ ಪಡೆಯಿರಿ, ಸೋಂಕು ಇತರರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿ, ಕೋವಿಡ್ ನಿಯಮಗಳನ್ನು ಮೀರಬಾರದು ಎಂದು ಸೂಚಿಸಿದರು,

ಈ ಸಂದರ್ಭದಲ್ಲಿ ಸ್ಕ್ವಾಡ್ ವೆಸ್ ಮೊಬೈಲ್ ಮೆಡಿಕಲ್ ಯುನಿಟ್ ನ ವೈದ್ಯರಾದ ಡಾ.ಪೂಜಾ, ಫಾರ್ಮಸಿ ಅಧಿಕಾರಿ ವಿನಯ್,ಶುಶ್ರೂಷಣಾಧಿಕಾರಿ ಲಕ್ಷ್ಮಿ, ಆರೋಗ್ಯ ಸುರಕ್ಷಾಧಿಕಾರಿ ರಶ್ಮಿ, ನೌಶಾದ್ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here