17.02.2024 ರಿಂದ 23.02.2024 ರವರೆಗೆ ಕಡ್ಡಾಯವಾಗಿ ಸಂವಿಧಾನ ಜಾಗೃತಿ ಜಾಥ ನಡೆಸಿ; ಗಿರಿಜಾಶಂಕರ್

0
56

ಸಂಡೂರು: ಫೆ: 9: ಸಂವಿಧಾನವನ್ನು ತಿಳಿದು ಅದರ ಮಹತ್ವವನ್ನು ಅರಿಯುವ ಮಹತ್ವದ ಉದ್ದೇಶದಿಂದ 75ನೇ ಗಣರಾಜ್ಯೋತ್ಸವದ ನಿಮಿತ್ತ ಸರಕಾರ ಸಂವಿಧಾನ ಜಾಗೃತ ಜಾಥಾ ಹಮ್ಮಿಕೊಂಡಿದ್ದು ಇದರ ಪ್ರಯುಕ್ತ ಇದೇ ತಿಂಗಳ 17ನೇ ತಾರೀಖಿನಿಂದ 23 ನೇ ತಾರೀಖಿನವರೆಗೆ ತಾಲೂಕಿನ 26 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸಲಿದ್ದು ಪ್ರತಿಯೊಬ್ಬ ನಾಗರಿಕರು ಸಂಘ ಸಂಸ್ಥೆಯ ಪದಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಗಿರಿಜಾ ಶಂಕರ್ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ಬಳ್ಳಾರಿ ಇವರು ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ಅಡಳಿತ ಹಾಗೂ ಉಪಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥವು ಸಂಡೂರು ತಾಲೂಕಿನ ವಿವಿಧ 26 ಗ್ರಾಮ ಪಂಚಾಯತಿ ಗೆ ದಿನಾಂಕ 17.02.2024ರಿಂದ 23.02.2024 ರವರೆಗೆ ಕಡ್ಡಾಯವಾಗಿ ನಡೆಸುವ ಮೂಲಕ ಜಾಗೃತಿಯನ್ನು ಉಂಟುಮಾಡಬೇಕಾದ ಅತಿ ಅವಶ್ಯಕತೆ ಇದ್ದು ಎಲ್ಲರೂ ಭಾಗಿಯಾಗಿ ಎಂದರು.

ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಷಡಕ್ಷರಯ್ಯ ಮಾತನಾಡಿ ಸಂಡೂರು ತಾಲೂಕು ಅತ್ಯಂತ ಹಿಂದುಳಿದ ತಾಲೂಕು ಸಂವಿಧಾನದ ಮೂಲ ಅಂಶಗಳನ್ನು ತಿಳಿಸುವ ನಿಟ್ಟಿನಲ್ಲಿ ಈ ಒಂದು ಸುಸಂದರ್ಭವನ್ನ ಬಳಸಿಕೊಳ್ಳೋಣ ಸಂವಿಧಾನವನ್ನು ತಿಳಿದುಕೊಳ್ಳುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಥಾದಲ್ಲಿ ಪಾಲ್ಗೊಂಡು ಸಂವಿಧಾನದ ಜಾಗೃತಿ ಮೂಡಿಸುವಲ್ಲಿ ಕೈ ಸಹಕರಿಸಬೇಕು ಅಲ್ಲದೆ ಸ್ತಬ್ದ ಚಿತ್ರ ಹಾದುಹೋಗುವ ಮಾರ್ಗ 17-02-2024 ತೋರಣಗಲ್ಲು-ಕುರೇಕುಪ್ಪ-ವಡ್ಡು-ತಾಳೂರು18-02-2024ಬನ್ನಿಹಟ್ಟಿ-ಯು.ರಾಜಾಪುರ-ಅಂತಾಪುರ-ವಿಠಲಾಪುರ-ಮೆಟ್ರಿಕಿ 19-02-2024 ತಾರಾನಗರ-ಭುಜಂಗನಗರ-ನರಸಿಂಗಾಪುರ-ದೇವಗಿರಿ-ಕೃಷ್ಣಾನಗರ 20-02-2024 ಸಂಡೂರು ಪಟ್ಟಣ 21-02-2024 ಸುಶೀಲಾ ನಗರ-ಯಶವಂತನಗರ-ಬಂಡ್ರಿ-ನಿಡಗುರ್ತಿ 22-02-2024 ಹೆಚ್.ಕೆ.ಹಳ್ಳಿ-ಕಾಳಿಂಗೇರಿ-ಅಗ್ರಹಾರ- ಸೋವೆನಹಳ್ಳಿ 23-02-2024 ಚೋರನೂರು-ಬೊಮ್ಮಘಟ್ಟ-ಯರ್ರಯ್ಯನಹಳ್ಳಿ-ಗೊಲ್ಲಲಿಂಗಮ್ಮನಹಳ್ಳಿಗೆ ಸಾಗುವ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್ ಮಾಹಿತಿ ನೀಡಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಜಾಥ ಬರುವ ದಿನ ವೇದಿಕೆ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನ. ಮತ್ತು ಅದರ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುವುದು ಹಾಗೂ ಡಾ.ಬಿ ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ನಾಟಕ ರೂಪದಲ್ಲಿ ವಿದ್ಯಾರ್ಥಿಗಳು ಪ್ರಸ್ತುತಪಡಿಸುವರು ಎಂದರು.

ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ಷಡಕ್ಷರಯ್ಯ, ಶಿಕ್ಷಣ ಇಲಾಖೆಯ ಬಿಇಓ ಐ.ಆರ್.ಅಕ್ಕಿ. ಸಮಾಜ ಕಲ್ಯಾಣ ಇಲಾಖೆಯ ವೆಂಕಟೇಶ್, ಪ.ಪಂ ಕಲ್ಯಾಣ ಇಲಾಖೆಯ ರವಿ ಕಡ್ಲಬಾಳ್, ಬಿಸಿಎಂ ಇಲಾಖೆಯ ಸಂಗಮೇಶ್ , ಶಿಶು ಅಭಿವೃದ್ಧಿ ಇಲಾಖೆಯ ಎಳೆನಾಗಪ್ಪ. ಹಾಗೂ ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here