ಪ್ಲಾಸ್ಟಿಕ್ ಮುಕ್ತ ಪ್ರವಾಸಿತಾಣ ನಮ್ಮ ಗುರಿ: ಗುಡ್ ಸಮರ್ಟ್ಟಿನ್ ತಂಡ.

0
135

ಸಂಡೂರು:ಜೂನ್:27:-ವಿಜಯನಗರ ಕಾಲದಲ್ಲೆ ಲೋಹಗಳ ಬಳಕೆ ಮತ್ತು ಮಾರಾಟದಲ್ಲಿ ಹೆಸರುವಾಸಿಯಾಗಿದ್ದ ತಾಲೂಕು ಅಕ್ರಮ ಗಣಿಗಾರಿಕೆ ಮತ್ತು ಅತಿಯಾದ ಗಣಿಗಾರಿಕೆಯಿಂದ ತುಂಬಾ ನಲುಗಿ ಹೋಗಿತ್ತು.

ನಾಲ್ಕೈದು ವರ್ಷಗಳಿಂದ ಈಚೆಗೆ ಸಂಡೂರಿನ ಅರಣ್ಯ ಸಂಪದ್ಭರಿತವಾಗತೊಡಗಿದೆ. ಭೈರವ ತೀರ್ಥ, ಭೀಮ ತೀರ್ಥ ಹರಿಶಂಕರ, ಗಂಡಿನರಸಿಂಹ ಸ್ವಾಮಿ, ರಾಮನ ಮಲೆ ಅರಣ್ಯ ಪ್ರದೇಶ ಮತ್ತು ಸ್ವಾಮಿ ಮೇಲೆ ಅರಣ್ಯ ಪ್ರದೇಶಗಳಲ್ಲಿ ಐತಿಹಾಸಿಕ ಮತ್ತು ಸುಂದರ ಪ್ರವಾಸಿ ತಾಣಗಳು ನೆಲೆನಿಂತಿದ್ದು ರಾಜ್ಯ ಹೊರರಾಜ್ಯದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಪ್ರವಾಸಿ ತಾಣಗಳ ವೀಕ್ಷಣೆ ಮತ್ತು ಚಾರಣದ ಸಂದರ್ಭದಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ ಗಳ ಬಳಕೆ ಹೆಚ್ಚಾಗಿ ಮಾಡುತ್ತಿದ್ದು ಅಲ್ಲಿನ ಸುಂದರ ಪರಿಸರ ಹಾಳಾಗಲು ಕಾರಣರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಅನೇಕ ಪರಿಸರ ಪ್ರಿಯರು , ಸಂಘಟನೆಗಳು ಸೇರಿಕೊಂಡು ಕಾರ್ಯಪ್ರವೃತ್ತವಾಗಿವೆ.

ಸ್ವಚ್ಛ ಪರಿಸರ ಮತ್ತು ಪ್ಲಾಸ್ಟಿಕ್ ಮುಕ್ತ ತಾಣಗಳ ನಾಗಿಸುವುದು ನಮ್ಮ ಗುರಿ ರಜಾದಿನಗಳಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಅಲ್ಲಿನ ಘನತ್ಯಾಜ್ಯ ವಸ್ತು ಗಳಾದ ಪ್ಲಾಸ್ಟಿಕ್ ನಿರ್ಮಿತ ಬಾಟಲಿಗಳು, ಗುಟ್ಕಾ ಚೀಟುಗಳು ಪ್ಲಾಸ್ಟಿಕ್ ಬ್ಯಾಗ್ ಗಳು, ಖಾಲಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಸ್ವಚ್ಛತೆಯನ್ನು ಭಾನುವಾರ ಭೈರವ ತೀರ್ಥದಲ್ಲಿ ಆರಂಭಿಸಿದ್ದಾಗಿ, ಲೋಕಾಯುಕ್ತ ಇನ್ಸ್ಪೆಕ್ಟರ್ ಮಹಮ್ಮದ್ ರಫಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ jsw mince vp ಪ್ರಕಾಶ್, ಮನ್ಸೂರ್ ಅಲಿ ಶರೀಫ್, ಸಂಜಯ್ ಶರ್ಮ, ಅರ್ಜುನ್, ತಂಡದ ಇತರ ಸದಸ್ಯರು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಮುಕ್ತ ಪ್ರವಾಸಿತಾಣಗಳನ್ನು ಮಾಡುವಲ್ಲಿ ಮತ್ತು ಪರಿಸರವನ್ನು ಸಂರಕ್ಷಿಸುವಲ್ಲಿ ಗುಡ್ ಸಮರ್ಟ್ಟಿನ್ ತಂಡವನ್ನು ಯುವಕರು ವಿದ್ಯಾರ್ಥಿಗಳು ಸೇರಿಕೊಳ್ಳಬಹುದು ಎಂಬುದಾಗಿ ಪೊಲೀಸ್ ಅಧಿಕಾರಿ ಅಭಿಪ್ರಾಯ ಪಡುತ್ತಾರೆ.

ಸುಂದರ ಪ್ರವಾಸಿ ತಾಣಗಳ ರಕ್ಷಣೆ, ಅಪಾಯಕಾರಿ ಜಾಗದಲ್ಲಿ ನಿಂತು ಫೋಟೋ ತೆಗೆದುಕೊಳ್ಳುವಾಗ ಪ್ರಾಣ ಹಾನಿ ಆಗದಂತೆ ತಡೆಗಟ್ಟುವುದು , ಕುಡಿತ ಮೋಜು-ಮಸ್ತಿಗೆ ಬ್ರೇಕ್ ಹಾಕಲು ಸಂಬಂಧಪಟ್ಟ ಇಲಾಖೆಗಳು ಮುಂದಾಗ ಬೇಕೆಂಬುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.

LEAVE A REPLY

Please enter your comment!
Please enter your name here