ಮಡಿವಾಳ ಮಾಚಿದೇವರ ಜಯಂತಿ ಆಚರಣೆ

0
134

ಬಳ್ಳಾರಿ,ಫೆ.01: ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ಸೋಮವಾರ ಸರಳವಾಗಿ ಆಚರಿಸಲಾಯಿತು.
ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಕನ್ನಡ ಮತ್ತು ಸಂಸ್ಕø್ರತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣನವರ್ ಅವರು 12ನೇ ಶತಮಾನದಲ್ಲಿ ಸಮಾನತೆಯ ಕ್ರಾಂತಿಗೆ, ಸಮ ಸಮಾಜದ ನಿರ್ಮಾಣಕ್ಕಾಗಿ ದುಡಿದವರಲ್ಲಿ ಮಡಿವಾಳ ಮಾಚಿದೇವ ಶರಣರು ಕೂಡ ಒಬ್ಬರು. ಮೇಲು-ಕೀಳು ಎನ್ನುವುದನ್ನು ಜನರಲ್ಲಿ ಕಿತ್ತು ಹಾಕುವ ಕಾರ್ಯವನ್ನು ಮಡಿವಾಳ ಮಾಚಿದೇವರು ಮಾಡಿದ್ದಾರೆ. ಅವರ ಕಾಯಕ , ಅವರ ವಚನಗಳು ಇತರರಿಗೆ ಮಾದರಿ, ಇಂದಿನ ಯುವ ಜನತೆ ಶರಣರ ಬದುಕಿನ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು.

ಸಮಾನತೆಯ ಸಮಾಜ ಮತ್ತು ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಇವರ ಬದುಕೇ ಒಂದು ಮಾರ್ಗದರ್ಶನ. ಶರಣರ ವಿಚಾರಧಾರೆಗಳನ್ನು ನೆನೆಯುವ ಕೆಲಸ ಮಾಡುವ ಮುಖಾಂತರ ಇಂದಿನ ಯುವ ಸಮೂಹಕ್ಕೆ ಅವರ ಬದುಕಿನ ಬಗ್ಗೆ ತಿಳಿಸುವ ಕೆಲಸ ಆಗುತ್ತಿದೆ. ಕೊವಿಡ್ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗ ಸೂಚಿ ಅನ್ವಯ ಈ ಬಾರಿ ಸರಳವಾಗಿ ಜಯಂತಿಯನ್ನು ಆಚರಿಸಲಾಗಿದೆ. ಮುಂದಿನ ವರ್ಷ ತುಂಬಾ ಅದ್ದೂರಿಯಾಗಿ ಜಯಂತಿಯನ್ನು ಆಚರಿಸಲಾಗುವುದು ಎಂದರು.
ಸಮುದಾಯದ ಮುಖಂಡರಾದ ಅನಿಲ್ ನಾಯುಡು ಅವರು ಮಾತನಾಡಿ, ಮಡಿವಾಳ ಮಾಚಿದೇವ ಅವರು ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ, ಸಮಾಜದ ಏಳಿಗೆಗೆ, ಸಮಾನತೆಗೆ ಅವರು ನಿರ್ವಹಿಸಿದ ಪಾತ್ರ ಮಹತ್ವದ್ದು. ಅವರ ಸಂದೇಶ ಮತ್ತು ವಿಚಾರಗಳನ್ನು ಸಮಾಜದ ಎಲ್ಲಾ ಜನರು ಸ್ವೀಕರಿಸುತ್ತಿದ್ದರು. ಮುಂದೆ ಎಲ್ಲಾ ಸಮುದಾಯದರು ಈ ಜಯಂತಿಯಲ್ಲಿ ಪಾಲ್ಗೊಳ್ಳುವಂತಾಗಲಿ. ಸಮುದಾಯದ ಯುವಕರು ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುನ್ನಲೆಗೆ ಬರಬೇಕು. ಶರಣರ ಜಯಂತಿಯನ್ನು ಈ ಬಾರಿ ಸಾಂಕೇತಿಕವಾಗಿ ಮತ್ತು ಸರಳವಾಗಿ ಆಚರಣೆ ಮಾಡಲಾಗಿದೆ. ಮುಂದಿನ ಸಲ ತುಂಬಾ ವಿಜೃಂಭಣೆಯಿಂದ ಜಯಂತಿ ಆಚರಣೆ ಮಾಡೋಣ ಎಂದು ಅವರು ತಿಳಿಸಿದರು.

ಜಯಂತಿಯಲ್ಲಿ ಸಮುದಾಯದ ಮುಖಂಡರಾದ ಧನಂಜಯ, ಹೊನ್ನೂರಪ್ಪ, ಸಮುದಾಯದ ಇತರರು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

LEAVE A REPLY

Please enter your comment!
Please enter your name here