ಛತ್ರಪತಿ ಶಿವಾಜಿ ಆದರ್ಶ ಅನುಕರಣೀಯ: ಬಿ.ಎ ಪರಮೇಶ್

0
92

ಹಾಸನ ಫೆ.19:- ಹಿಂದು ಸ್ವರಾಜ್ಯ ಸ್ಥಾಪಕರಾದ ಛತ್ರಪತಿ ಶಿವಾಜಿಯವರು ಆಡಳಿತಾತ್ಮಕವಾಗಿ ಉತ್ತಮ ನಿರ್ಣಯಗಳನ್ನು ತೆಗೆದುಕೊಂಡು ಆಡಳಿತ ನಡೆಸಿದ್ದು ಅವರ ಆದರ್ಶ ಅನುಕರಣೀಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಎ ಪರಮೇಶ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಸವಿತ ಮಹರ್ಷಿ ಮತ್ತು ಛತ್ರಪತಿ ಶಿವಾಜಿ ಜಯಂತಿಯಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ವ್ಯಕ್ತಿಗಿಂತ ಸ್ವರಾಜ್ಯ ದೊಡ್ಡದು ಎಂಬ ಪರಿಕಲ್ಪನೆಯನ್ನು ಶಿವಾಜಿಯವರು ಪರಿಚಯಿಸಿದವರು ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ ಸುದರ್ಶನ್ ಮಾತನಾಡಿ ಸ್ತ್ರೀ ಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸಂಪೂರ್ಣ ರಕ್ಷಣೆ ನೀಡಿ ಆಡಳಿತ ನಡೆಸಿದ ಮಹಾರಾಜ ಶಿವಾಜಿಯವರು, ಹಿಂದು ಸಮಾಜಕ್ಕೆ ಸಂಘರ್ಷದ ದಾರಿ ಮತ್ತು ತನ್ಮೂಲಕ ವಿಜಯದ ಹಾದಿಯನ್ನು ತೋರಿದರು.
ಜಿಲ್ಲಾ ಸವಿತ ಸಮಾಜದ ಜಿಲ್ಲಾಧ್ಯಕ್ಷ್ಷರಾದ ರವಿಕುಮಾರ್ ಮಾತನಾಡಿ ಸವಿತ ಮಹರ್ಷಿ ಅವರು ನಾಟಿ ವೈದ್ಯ ಪದ್ಧತಿಯನ್ನು ಪರಿಚಯಿಸಿದವರು, ಚತುರ್ವೇದಗಳಲ್ಲಿನ ಸಾಮವೇದವನ್ನು ಬರೆದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್ ನಂದಿನಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣೇಗೌಡ, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್. ಎಂ ಶಿವಣ್ಣ, ವಿವಿಧ ಸಮುದಾಯದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here