ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದ ಚಂದು ಸಾಬ್‌ ಮುಳ್ಳೂರು ವಿಧಿವಶ

0
122

ಸಿಂಧನೂರು ತಾಲೂಕಿನ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಹಾಗೂ ಸಾಲುಗುಂದ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದ ಚಂದು ಸಾಬ್‌ ಮುಳ್ಳೂರು ಅವರು ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ನಗರದ ಮೆಹಬೂಬ್‌ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಇವರು ಅತ್ಯಂತ ಸರಳ ವ್ಯಕ್ತಿತ್ವ, ಹಣ, ಅಧಿಕಾರ ಇದ್ದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಎಲ್ಲರ ಜತೆಗೂ ಹಸನ್ಮುಖದಿಂದಲೇ ವ್ಯವಹರಿಸುತ್ತಿದ್ದ ರಾಜಕಾರಣಿ ಮತ್ತು ಉದ್ಯಮಿ ಆಗಿದ್ದರು. ಅದೆಷ್ಟೋ ಬಡವರಿಗೆ, ನೊಂದವರಿಗೆ ನೆರಳಾಗಿದ್ದವರು.

ಇವರು ಮಾಜಿ ಶಾಸಕರಾದ ಹಂಪನ ಗೌಡ ಬಾದರ್ಲಿ ಯವರ ಆಪ್ತರಾಗಿದ್ದರು. ಅಲ್ಲದೇ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಲ್ಲೊಬ್ಬರಾಗಿದ್ದ ಇವರು, ಕೆಲ ದಿನಗಳಿಂದ ಆನಾರೋಗ್ಯಕ್ಕೆ ತುತ್ತಾಗಿದ್ದರು. ಹಾಗಾಗಿ ಬೆಂಗಳೂರಿನ ಕೆಲ ಆಸ್ಪತ್ರಗಳಲ್ಲಿ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದರು.

ಮೃತರಿಗೆ ಪತ್ನಿ , ಓರ್ವ ಪುತ್ರಿ ಇದ್ದು, ಅಪಾರ ಸಂಬಂಧಿಕರನ್ನು ಅಗಲಿದ್ದಾರೆ. ಮಾಹಿತಿಯ ಪ್ರಕಾರ ಇಂದು ಸಂಜೆ 5.30 ಕ್ಕೆ ತಮ್ಮ ಸ್ವಗ್ರಾಮವಾದ ಮುಳ್ಳೂರಿನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ. ಇವರ ದಿಢೀರ್‌ ನಿಧನದಿಂದ ಅನೇಕರು ಕಂಬನಿ ಮಿಡಿದಿದ್ದಾರೆ.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here