“ಹೆಣ್ಣು – ಜೀವ”

0
140

ತನ್ನನ್ನು ತಾನು ಅರಿಯದೆ ಸೃಷ್ಟಿಯಾಯಿತು ಈ ಜೀವ.
ತನ್ನನ್ನು ತಾನು ಅರಿಯುವ ಮುನ್ನವೇ
ಪರರ ಪಾಲಾಯಿತು ಈ ಜೀವ.
ತನ್ನನ್ನು ತಾನು ತಿಳಿಯದೆ
ಪರ ಪುರುಷನಿಗೆ ಒಪ್ಪಿಸಿತ್ತು ಈ ಜೀವ.
ತನ್ನನ್ನು ತಾನು ಅರಿಯುವ ವೇಳೆಗೆ
ಮರು ಜನ್ಮ ನೀಡಲು ಅಣಿಯಾಯಿತು ಈ ಜೀವ.
ತನ್ನನ್ನು ತಾನು ಅರಿತು ಕೊಂಡಾಗ
ಭವಿಯ ಬದುಕಿಗೆ ಬಿಡಲಾರದ ನಂಟಾಯಿತು ಈ ಜೀವ.
ತನ್ನನ್ನು ತಾನು ಅರಿಯದೆ
ಪರತಂತ್ರಳಾಗಿ ಸಾಗಿತು ಈ ಜೀವ.
ತನ್ನನ್ನು ತಾನು ಅರಿತು ಬಾಳುವುದರಲ್ಲಿ
ಆಯುಷ್ಯ ಕರಗಿ ಹೋಗಿತ್ತು.
ತನಗಾಗಿ ಅಲ್ಲದೆ ಪರರಿಗಾಗಿ
ಬಾಳುವಲ್ಲಿ ಮುಕ್ತಿ ಕಂಡಿತ್ತು ಈ ಜೀವ
ತನ್ನದಲ್ಲದ ಜಗತ್ತಿಗೆ ತಾ ಬಂದು
ಪರರ ಸುಖದೊಳಗೆ ತನ್ನ ಬಿಂಬವ ಕಂಡು
ಛಾಯೆಯಂತೆ ಮಾಯವಾಯಿತು ಜೀವ.
ಕರ್ಪೂರದಂತೆ ಕರಗಿ ತಾನಿಲ್ಲವಾಗಿ
ದೇವತೆಯ ಪಟ್ಟ ಮುಡಿಗೇರಿಸಿ ಕೊಂಡಿತ್ತು ಈ ಜೀವ.
ಶ್ರೀಮತಿ ಅಮರಾವತಿ ಹಿರೇಮಠಹೆಣ್ಣು.
ತನ್ನನ್ನು ತಾನು ಅರಿಯದೆ ಸೃಷ್ಟಿಯಾಯಿತು ಈ ಜೀವ .
ತನ್ನನ್ನು ತಾನು ಅರಿಯುವ ಮುನ್ನವೇ
ಪರರ ಪಾಲಾಯಿತು ಈ ಜೀವ
ತನ್ನನ್ನು ತಾನು ತಿಳಿಯದೆ
ಪರ ಪುರುಷನಿಗೆ ಒಪ್ಪಿಸಿತ್ತು ಈ ಜೀವ
ತನ್ನನ್ನು ತಾನು ಅರಿಯುವ ವೇಳೆಗೆ
ಮರು ಜನ್ಮ ನೀಡಲು ಅಣಿಯಾಯಿತು ಈ ಜೀವ
ತನ್ನನ್ನು ತಾನು ಅರಿತು ಕೊಂಡಾಗ
ಭವಿಯ ಬದುಕಿಗೆ ಬಿಡಲಾರದ ನಂಟಾಯಿತು ಈ ಜೀವ
ತನ್ನನ್ನು ತಾನು ಅರಿಯದೆ
ಪರತಂತ್ರಳಾಗಿ ಸಾಗಿತು ಈ ಜೀವ
ತನ್ನನ್ನು ತಾನು ಅರಿತು ಬಾಳುವುದರಲ್ಲಿ
ಆಯುಷ್ಯ ಕರಗಿ ಹೋಗಿತ್ತು
ತನಗಾಗಿ ಅಲ್ಲದೆ ಪರರಿಗಾಗಿ
ಬಾಳುವಲ್ಲಿ ಮುಕ್ತಿ ಕಂಡಿತ್ತು ಈ ಜೀವ
ತನ್ನದಲ್ಲದ ಜಗತ್ತಿಗೆ ತಾ ಬಂದು
ಪರರ ಸುಖದೊಳಗೆ ತನ್ನ ಬಿಂಬವ ಕಂಡು
ಛಾಯೆಯಂತೆ ಮಾಯವಾಯಿತು ಜೀವ
ಕರ್ಪೂರದಂತೆ ಕರಗಿ ತಾನಿಲ್ಲವಾಗಿ
ದೇವತೆಯ ಪಟ್ಟ ಮುಡಿಗೇರಿಸಿ ಕೊಂಡಿತ್ತು ಈ ಜೀವ.

✍️..ಶ್ರೀಮತಿ ಅಮರಾವತಿ ಹಿರೇಮಠ-91082 59250

LEAVE A REPLY

Please enter your comment!
Please enter your name here