ಮಾಧ್ಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕುಸ್ತಿಪಟು ವಿನೇಶ್‌ ಫೋಗಟ್‌

0
138

ತಮ್ಮ ತಂದೆಗೆ ಸಂಬಂಧಿಸಿದ ವರದಿಗಳನ್ನು ತಳ್ಳಿ ಹಾಕಿದ ಭಾರತೀಯ ಸ್ಟಾರ್‌ ಕುಸ್ತಿಪಟು ವಿನೆಶ್‌ ಫೋಗಟ್‌ ಅವರು, ಒಂದು ಸುದ್ದಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮುನ್ನ ಸಂಪೂರ್ಣ ಹಿನ್ನೆಲೆ ಹಾಗೂ ಸತ್ಯಾಸತ್ಯತೆಯನ್ನು ಅರಿತುಕೊಳ್ಳಬೇಕೆಂದು ಮಾಧ್ಯಗಳಿಗೆ ವಿನಮ್ರ ಮನವಿ ಮಾಡಿದ್ದಾರೆ.

ತಾನು ಒಂಬತ್ತು ವರ್ಷದ ಬಾಲಕಿ ಇದ್ದಾಗಲೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದೇನೆ. ಆದರೆ, ವರದಿ ಹೇಳಿರುವಂತೆ ಭೂ ವಿವಾದದಲ್ಲಿ ಅವರು ಮೃತಪಟ್ಟಿಲ್ಲ ಎಂಬುದನ್ನು 26ರ ಪ್ರಾಯದ ಕುಸ್ತಿಪಟು ಸ್ಪಷ್ಟಪಡಿಸಿದ್ದಾರೆ.

ಕ್ರೀಡಾಪಟುಗಳು ಅಥವಾ ಯಾವುದೇ ವ್ಯಕ್ತಿಯ ಜೀವನದ ಕಥೆ ಅಥವಾ ತುಣುಕನ್ನು ಪಡೆಯಲು ಪ್ರಯತ್ನಿಸುವ ಪ್ರತಿಯೊಬ್ಬರಿಗೂ ಇದು ನನ್ನ ವಿನಮ್ರ ವಿನಂತಿಯಾಗಿದೆ. ದಯವಿಟ್ಟು ಅಂತಹ ಮಾಹಿತಿಯನ್ನು ಸಾರ್ವಜನಿಕರಿಗೆ ಕಳುಹಿಸುವ ಮೊದಲು ಸಂಪೂರ್ಣ ಹಿನ್ನೆಲೆ ಪರಿಶೀಲನೆ ಮಾಡಿ ಎಂದು ಫೋಗಟ್‌ ಹೇಳಿದ್ದಾರೆ.

ನಾನು 9 ವರ್ಷದ ಬಾಲಕಿಯಾಗಿದ್ದಾಗಲೇ ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ನನ್ನ ತಂದೆಯ ಹೆಸರು ರಾಜ್ಪಾಲ್‌ ಫೋಗಟ್‌. ಭೂವಿವಾದದ ಕಾರಣದಿಂದ ಅವರು ಮೃತಪಟ್ಟಿಲ್ಲ. ನನ್ನ ತಾಯಿ ಒಬ್ಬರೇ ನನ್ನ ಅಣ್ಣ, ನನ್ನ ತಂಗಿ ಹಾಗೂ ನನ್ನನ್ನು ಬೆಳೆಸಿದ್ದಾರೆ ಎಂದು ವಿನೇಶ್‌ ಫೋಗಟ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಹಾವೀರ್ ಫೋಗಟ್‌ ಅವರು ನನ್ನ ತಂದೆಯ ಹಿರಿಯ ಸಹೋದರ. ಹಲವು ಬಾರಿ ಅವರನ್ನು ನನ್ನ ತಂದೆಯೆಂದೇ ಊಹಿಸಲಾಗಿದೆ. ಹಾಗಾಗಿ, ಅಂತಹ ವೈಯಕ್ತಿಕ ಮಾಹಿತಿಯನ್ನು ಪ್ರಕಟಿಸುವ ಮೊದಲು ದಯವಿಟ್ಟು ಸತ್ಯಾಸತ್ಯತೆಯನ್ನು ಅರಿತುಕೊಳ್ಳಿ ಎಂದಿದ್ದಾರೆ.

ನನ್ನ ತಂದೆಯ ನೆನಪುಗಳನ್ನು ನಾನು ಗೌರವಿಸುತ್ತೇನೆ . ಆದರೆ, ಇಂತಹ ಭಾವನಾತ್ಮಕ ವಿಷಯದ ಬಗ್ಗೆ ಅರೆ ಬರೆ ಮಾಹಿತಿಯನ್ನು ಓದುವುದು ನೋವಿನ ಸಂಗತಿಯಾಗಿದೆ ಎಂದು ವಿನೇಶ್‌ ಫೋಗಟ್‌ ಬೇಸರ ವ್ಯಕ್ತಪಡಿಸಿದ್ದಾರೆ

ವಿನೇಶ್‌ ಫೋಗಟ್‌ ಅವರು ಸದ್ಯ ಟೋಕಿಯೋ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿದ್ದಾರೆ. ದೇಶ ಹಾಗೂ ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಗಳಲ್ಲಿ ವಿನೇಶ್‌ ಪ್ರಾಬಲ್ಯ ಸಾಧಿಸಿದ್ದಾರೆ. ಅವರು ತೂಕದ ವಿಭಾಗ ಬದಲಾವಣೆ ಮಾಡಿದ್ದು, ಅವರಿಗೆ ತುಂಬಾ ನೆರವಾಗಿದೆ. ಅಲ್ಲದೆ, ತಾಂತ್ರಿಕವಾಗಿಯೂ ಅವರು ಅತ್ಯುತ್ತಮವಾಗಿದ್ದಾರೆ.

LEAVE A REPLY

Please enter your comment!
Please enter your name here