ಯುದ್ಧಾಗ್ನಿ

0
102

ನೊಂದು ಹೋಗಿವೆ ಬಡಜೀವಿಗಳು
ಬೆಸವಳಿದು ಬೇಸತ್ತಿವೆ ದ್ವೇಷದ ಸುಡುವಾಗ್ನಿಯಲಿ
ನಡುವೆ ಕುರುಡಾಗಿದೆ ಮಾನವೀಯತೆ.

ಕಾಸಿಗೆ ಕಿಮ್ಮತ್ತಿಲ್ಲದ ಜೀವಕೆ
ಕೋಟಿಗಟ್ಟಲೆ ಸುರಿಯುತ್ತಿವೆ
ಜೀವ ಉಳಿಸುವ ಇರಾದೆ ಇರದೇ.

ನೋವು ಮಡುಗಟ್ಟಿದೆ
ಅಸೂಯೆಯ ಕಾವಲಿನಲಿ
ಭಯದ ಖಗ್ರಾಸಿನಲಿ ಸೂತಕದೇ ದರ್ಬಾರ್.

ಸಹ್ಯ ಸ್ಥಿತಿಗೆ ತರುವವರಾರು
ರಾಗದ ಅತಿರೇಕಕೆ
ಸುಯೋಗವು ಮುದುಡಿದ ತಾವರೆ.

ಸಾರಿ ಸಾರಿ ಕೇಳಿವೆ
ಕೋಪತಾಪದಿ ಪಡೆದಿದ್ದಾರೂ ಏನು
ಒಡನಾಡಿಗಳ ಸೂತಕದಿ ತಳ್ಳಿ.

ಬಿಟ್ಟು ಬಿಡಿ ಅಂಧಕಾರದ ಮನಸ್ಥಿತಿ
ಕೂಡಿ ಬಿಡಿ ಸಹನೆಯ ಒಡಲು
ಕೊಟ್ಟು ಬಿಡಿ ಒಂದೆಂಬ ಉಡುಗೊರೆ.

-ರೇಷ್ಮಾ ಕಂದಕೂರ
ಸಿಂಧನೂರು

LEAVE A REPLY

Please enter your comment!
Please enter your name here