ಜೆಡಿಎಸ್ ಪಕ್ಷದಿಂದ ಕುರೇಕುಪ್ಪ ಪುರಸಭೆ ಮುತ್ತಿಗೆ ಮತ್ತು ಪ್ರತಿಭಟನೆ

0
383

ಸಂಡೂರು;ಕುರೇಕುಪ್ಪದಲ್ಲಿ ಮೂಲಭೂತ ಸೌಕರ್ಯಗಳು, ವಿವಿಧ ಬೇಡಿಕೆ ಮತ್ತು ಇತರೆ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಎನ್.ಸೋಮಪ್ಪ ಮತ್ತು ಬೆಂಬಲಿಗರು ಕುರೇಕುಪ್ಪ ಪುರಸಭೆ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕುಡಿವ ನೀರು, ಚರಂಡಿಗಳ ಸ್ವಚ್ಚತೆ ಮಹಿಳಾ ಶೌಚಾಲಯಗಳ ಬಳಕೆ ಮತ್ತು ಬೀದಿ ದೀಪಗಳ ಸಮರ್ಪಕ ನಿರ್ವಹಣೆಯನ್ನು ನಾಲ್ಕು ದಿನಗಳಲ್ಲಿ ಸರಿಮಾಡಿ ಕೊಡುವುದಾಗಿ ಪುರಸಭೆ ಮುಖ್ಯಾಧಿಕಾರಿ ಅಬ್ದುಲ್ ರಹಮಾನ್ ಖುರೇಷಿ ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.
ತೋರಣಗಲ್ಲು ಮತ್ತು ಕುರೇಕುಪ್ಪದಲ್ಲಿ ಸ್ವಚ್ಚತಾ ಸಿಬ್ಬಂಧಿಗಳಾಗಿ ಕೇವಲ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಈ ಹಿಂದೆ ಕೆಲಸ ಮಾಡುತ್ತಿದ್ದ 9 ಜನರನ್ನು ಗುತ್ತಿಗೆ ಆಧಾರದಲ್ಲಿ ಮರು ನೇಮಕ ಮಾಡಿಕೊಳ್ಳ ಬೇಕು, ಸ್ಥಳೀಯರಿಗೆ ಫಾರಂ-3ನ್ನು ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಶೀಘ್ರವಾಗಿ ಫಾರಂ-3 ನ್ನು ನೀಡಬೇಕು. ದಿನನಿತ್ಯ ಕುರೇಕುಪ್ಪ ಗ್ರಾಮದ ನೂರಾರು ವಿದ್ಯಾರ್ಥಿಗಳು ಸಂಚಾರದ ತೊಂದರೆ ಅನುಭವಿಸುತ್ತಿದ್ದಾರೆ ಅವರಿಗೆ ಜಿಂದಾಲ್ ಕಂಪನಿಯಿಂದ ಪತ್ಯೇಕ ಬಸ್ ಸೌಕರ್ಯ ಒದಗಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು. ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಪ್ರಾಮಾಣ ಕವಾಗಿ ನೆರವೇರಿಸಲು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.

ಕುರೇಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳು ಕಳಪೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು, ಸದ್ಯ ಕೆಲ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮಧ್ಯಸ್ತಿಕೆ ವಹಿಸಿರುವ ಅಧಿಕಾರಿ ವರ್ಗ ಎಚ್ಚೆತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಕೆಲ ಗಂಭೀರ ಸಮಸ್ಯೆಗಳು ಬಗೆಹರಿದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು

ಪ್ರತಿಭಟನೆಯಲ್ಲಿ ಎನ್.ಸೋಮಪ್ಪ, ಪಿ.ಹಳ್ಳದರಾಯಪ್ಪ, ವಸಿಗೇರಪ್ಪ, ಯಂಕಪ್ಪ, ನಾಯಕರ ಅಂಬಣ್ಣ, ಕೆ.ಗೌರಮ್ಮ, ಹರಿಜನ ಗಂಗಮ್ಮ, ನಾಯಕರ ಹುಲಿಗೆಮ್ಮ, ಹಾದಿಮನಿ ಹುಲಿಗೆಮ್ಮ, ಪಿಎಸ್‍ಐ ಮಹೇಶ್ ಗೌಡ ಇತರರಿದ್ದರು.

LEAVE A REPLY

Please enter your comment!
Please enter your name here