ಎನ್ಎಂಡಿಸಿ ಯಲ್ಲಿ 2ನೇ ದಿನದ ಮುಷ್ಕರ ಕೈಬಿಟ್ಟ ಕಾರ್ಮಿಕರು

0
132

ಸಂಡೂರು:ಅ:07: ಕಂಪನಿಯಲ್ಲಿ 12 ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ ಗಣಿ ಕಾರ್ಮಿಕರನ್ನು ಏಕಾ ಏಕಿ ತೆಗೆದು ಹಾಕಿದ್ದು ಅವರನ್ನು ಮುಂದುವರೆಸುವಂತೆ 2ನೇ ದಿನವೂ ಮುಷ್ಕರವನ್ನು ನಡೆಸಿದ್ದು, ಇದಕ್ಕೆ ಸ್ಪಂದಿಸಿದ ಎನ್.ಎಂ.ಡಿ.ಸಿ. ಗಣಿ ಕಂಪನಿಯ ಜನರಲ್ ಮ್ಯಾನೇಜರ್ ಸಂಜೀವ್ ಸಾಹು ಅವರು ಮುಷ್ಕರ ಕೈ ಬಿಡಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎನ್ನುವ ಭರವಸೆಯನ್ನು ನೀಡುವ ಮೂಲಕ ಗಣಿ ಕಾರ್ಮಿಕರ ಮುಷ್ಕರವನ್ನು ಇಂದು ಹಿಂಪಡೆಯುತ್ತಿದ್ದೇವೆ ಎಂದು ಮುಖಂಡ ಜಿ.ಅಮರೇಶ್ ತಿಳಿಸಿದರು.

ಅವರು ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿ ಕಳೆದ ದಶಕಗಳಿಂದಲೂ ಸಹ ಕೆಲಸ ನಿರ್ವಹಿಸಿ ಇಂದು ಕೆಲಸವಿಲ್ಲದೆ ಬೀದಿಪಾಲಗುತ್ತಿರುವ ಕುಟುಂಬಗಳ ರಕ್ಷಣೆ ದುಸ್ತರವಾಗಿದ್ದು ಈ ಮುಷ್ಕರ ಯಶಸ್ವಿಯ ಹೆಜ್ಜೆಯನ್ನು 2ನೇ ದಿನಕ್ಕೆ ಮುಂದುವರಿಸಿದ ಪರಿಣಾಮ ಗಣಿ ಕಂಪನಿ ಅಧಿಕಾರಿಗಳು ಸ್ಪಂದಿಸಿದ್ದು ಮುಖಂಡರೊಂದಿಗೆ ಉತ್ತಮ ಮಾತುಕತೆಯನ್ನು ನಡೆಸುವ ಮೂಲಕ ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ, ಅದ್ದರಿಂದ ಮುಷ್ಕರವನ್ನು ಹಿಂಪಡೆಯುತ್ತಿದ್ದು , ಸೂಕ್ತ ವ್ಯವಸ್ಥೆ ಅಗದೇ ಇದ್ದಲ್ಲಿ ಮತ್ತೋಮ್ಮೆ ಮುಷ್ಕರ ಮಾಡುವ ಬಗ್ಗೆ ಚಿಂತನೆ ಮಾಡೋಣ, ಅದರೆ ಈಗ ನೀಡಿರುವ ಭರವಸೆಯ ಅಂಗವಾಗಿ ಮರು ನೇಮಕಕ್ಕೆ ಒತ್ತಾಯಿಸಿದ್ದು, ಅ ಕಾರ್ಯ ಶೀಘ್ರ ಅಗುವ ಭರವಸೆಯೊಂದಿಗೆ ಮುಕ್ತಾಯ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ. ಸತೀಶ್, ಎ.ಅನಂದ, ಗಂಗಪ್ಪ ಹೆಚ್.ಬಿ. ಪಂಪಾಪತಿ, ವಿಜಯಕುಮಾರ್, ಪರ್ವತಗೌಡ, ಜಂಬಪ್ಪ, ಹೊನ್ನೂರಪ್ಪ, ವಿ.ನಾಗರಾಜ, ಇತರರು ಉಪಸ್ಥಿತರಿದ್ದರು.
ಮುಷ್ಕರ ನಿರತರಿಗೆ ಅಧಿಕಾರಿಗಳಾದ ರಾಕೇಶ್ ರಂಜನ್, ತಿರುಪತಿರಾವ್, ಅನಿಲ್‍ಕುಮಾರ್ ಮಲ್ಲಪ್ಪ ಇತರರು ಅಗಮಿಸಿ ಮಾಹಿತಿ ಪಡೆದರು.

ವರದಿ:-ರಾಜು ಪಾಳೆಗಾರ್

LEAVE A REPLY

Please enter your comment!
Please enter your name here