ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಪ್ರತಿಯೊಬ್ಬರೂ ಮತದಾನ ಮಾಡಬೇಕು; ಡಾ.ಸಾದಿಯಾ

0
354

ಸಂಡೂರು: ಜ: 25: ಸಮುದಾಯ ಅರೋಗ್ಯ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಮತದಾನ ಕುರಿತು ಮಾತನಾಡಿದ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಾದಿಯಾ ಅವರು ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಪ್ರತಿಯೊಬ್ಬರೂ ಮತದಾನ ಮಾಡಬೇಕು,ನೂರಕ್ಕೆನೂರರಷ್ಟು ಮತದಾನ ಮಾಡಿದಾಗ ಮಾತ್ರ ಉತ್ತಮ ರಾಷ್ಟ್ರ ಕಟ್ಟಲು ಸಾಧ್ಯ, ಉತ್ತಮರ ಆಯ್ಕೆಯಾದಲ್ಲಿ ದೇಶ ಸದೃಡವಾಗುವುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಚುನಾವಣೆಗಳು ಮುಕ್ತ, ನ್ಯಾಯ ಸಮ್ಮತ, ಶಾಂತಿಯುತವಾಗಿ ನಡೆಯಬೇಕು, ಚುನಾವಣೆಯ ಘನತೆ ಎತ್ತಿ ಹಿಡಿಯಲು ನಿರ್ಭೀತರಾಗಿ, ಜಾತಿ,ಧರ್ಮ, ಮತ,ಭಾಷೆ, ದುಡ್ಡಿನ ಪ್ರೇರಣೆಯ ದಾಕ್ಷಿಣ್ಯಕ್ಕೆ ಒಳಗಾಗದೇ ಮತ ಚಲಾಯಿಸುವ ಹಕ್ಕು ಪ್ರತಿಯೊಬ್ಬ ನಾಗರೀಕರಿಗೂ ಇದೆ, ಚುನಾವಣೆಗೆ ಅಸಮರ್ಥರು ಇದ್ದಾಗ ನೋಟ ಬಟನ್ ಒತ್ತಿ ಮತದಾನಕ್ಕೆ ಬೆಂಬಲ ಸೂಚಿಸಬಹುದು ಎಂದು ತಿಳಿಸಿದರು, ನಂತರ ಪ್ರತಿಜ್ಞೆಯನ್ನು ಬೋಧಿಸಿದರು ಭಾಗವಹಿಸಿದ ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್.ಚಂದ್ರಶೇಖರ್, ಸುಂಕಮ್ಮ,ಮುಖಂಡರಾದ ಸೋಮಶೇಖರ್, ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿಗಳಾದ ಡಾ.ಗೋಪಾಲ್ ರಾವ್, ಪ್ರಸೂತಿ ತಜ್ಞರಾದ ಡಾ.ರಜಿಯಾ ಬೇಗಮ್, ಡಾ.ಪ್ರಿಯಾಂಕಾ, ಕೇಂದ್ರದ ಸೂಪರಿಂಟೆಂಡೆಂಟ್ ಹರ್ಷ, ಮತ್ತು ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಹಾಗೂ ಸಾರ್ವಜನಿಕರು ಹಾಜರಿದ್ದರು

LEAVE A REPLY

Please enter your comment!
Please enter your name here