ಸ್ನಾತಕೊತ್ತರ ಕೇಂದ್ರ ನಂದಿಹಳ್ಳಿಯಲ್ಲಿ ಗೃಹರಕ್ಷಕ ಸಿಬ್ಬಂದಿಯಿಂದ ಪರಿಸರ ಜಾಗೃತಿ

0
75

ಸಂಡೂರು.ಜು31:ಪರಿಸರದಿಂದ ಇಡೀ ಪ್ರಕೃತಿಯ ಸೌಂದರ್ಯ ರಮಣೀಯತೆಯಿಂದ ಕೂಡಿದ್ದು ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕಾದರೆ ಪರಿಸರವನ್ನು ರಕ್ಷಿಸಬೇಕಾಗಿದೆ,ಪರಿಸರ ಎನ್ನುವುದು ನಮ್ಮ ತಾಯಿ,ತಂದೆ ಇದ್ದ ಹಾಗೇ ಪರಿಸರವನ್ನು ನಾಶ ಮಾಡಲು ಹೊರಟರೆ ಪ್ರಕೃತಿ ವಿಕೋಪಕ್ಕೆ ಹೋಗಿ ಪ್ರಳಯ ಉಂಟಾಗಲು ಸಾಧ್ಯ ,ಪರಿಸರದಿಂದ ಕಾಡನ್ನು ರಕ್ಷಿಸಿ ನಾಡನ್ನು ಉಳಿಸಬೇಕಾಗಿದೆ.
ಪರಿಸರದಿಂದ ಶುದ್ದ ಗಾಳಿ,ನೀರು, ಬೆಳಕು ಸಾಧ್ಯ,ಪರಿಸರವು ಕಲ್ಮಷ ವಾತಾವರಣದಿಂದ ಕೂಡಿದರೆ ಪರಿಸರದಿಂದ ಯಾವ ರೀತಿಯಲ್ಲಾದರೂ ರಕ್ಷಣೆ ನೀಡಲು ಸಾಧ್ಯವಿಲ್ಲ.

ಮಹಾತ್ಮ ಗಾಂಧೀಜಿಯವರು 1934 ರಲ್ಲಿ ಸಂಡೂರಿಗೆ ಬಂದಾಗ ಸಂಡೂರು ಸೀ ಇನ್ ಸೆಪ್ಟಂಬರ್ ಎಂದು ಇಲ್ಲಿಯ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಿ ಸಂಡೂರು ಮಲೆನಾಡು ಪ್ರದೇಶ, ದಕ್ಷಿಣದ ಕಾಶ್ಮೀರ ಎಂದು ಬಣ್ಣಿಸಿ ಸಂಡೂರಿನ ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮನದಾಳದ ಮಾತುಗಳನ್ನಾಡಿದ್ದರು ಎಂದು ಸಂಡೂರು ತಾಲೂಕಿನ ಗೃಹ ರಕ್ಷಕ ಘಟಕಾಧಿಕಾರಿ ನರಿ ಮಲ್ಲಿಕಾರ್ಜುನರವರು ತಿಳಿಸಿದರು.

ಅವರು ಸಂಡೂರು ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿರುವ ಗೃಹ ರಕ್ಷಕ ದಳದ ವತಿಯಿಂದ ಹಮ್ಮಿಕೊಂಡಿರುವ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಿಬ್ಬಂಧಿಯವರೊಡನೆ ಹಾಗೂ ವಿ ವಿ ಕೇಂಧ್ರದ ಉಪನ್ಯಾಸಕರೊಳಗೂಡಿ ಗಿಡ ನೆಡುವುದರ ಮೂಲಕ ಪರಿಸರ ಪ್ರೇಮ ಕುರಿತು ಮಾತನಾಡುತ್ತ ನಿಮ್ಮ ಮನೆಯ ಆವರಣದಲ್ಲಿ ನೀವು ಹುಟ್ಟು ಹಬ್ಬ ಆಚರಿಸಿಕೊಳ್ಳುವಾಗ, ಮನೆಯಲ್ಲಿ ಸಂಭ್ರಮದ ವಾತಾವರಣದಲಿ ಒಂದೊಂದು ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ರಕ್ಷಿಸಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅಲ್ಲದೇ ಪರಿಸರದ ಜಾಗೃತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಪರಿಸರ ಕಾಪಾಡಿದರೆ ಮಾತ್ರ ನಾವು ಸ್ವಚ್ಛತೆಗೆ ಆಧ್ಯತೆ ನೀಡಿದಂತೆ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ನಮ್ಮ ನಿಮ್ಮೆಲ್ಲರ ಪ್ರೋತ್ಸಾಹ ಅಗತ್ಯ ಸಹಕಾರ ಮುಖ್ಯವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ನಿರ್ದೇಶಕ ಡಾ|| ಬಿ.ರವಿ, ಪ್ರಾದ್ಯಾಪಕ ಪಿ.ಸಿ. ನಾಗನೂರ್, ಎಂ.ಡಿ. ಖಣದಾಳಿ, ಶರತ್, ರಾಗಿ ಭೀಮಪ್ಪ ಶಿವರಾಮ, ಸಹಾಯಕ ಪಾಪಯ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here