ಸಂಡೂರು ತಹಶೀಲ್ದಾರ್ ಕಛೇರಿಯಲ್ಲಿ ಅಂತರಾಷ್ಟ್ರೀಯ ಗ್ರಾಹಕರ ದಿನಾಚರಣೆ ಆಚರಣೆ.

0
129

ಸಂಡೂರು:ಮಾ:16: ಗ್ರಾಹಕರಿಗೆ ವಂಚನೆ ಮತ್ತು ಲಾಭಕೋರತನದ ಪ್ರಮಾಣವನ್ನು ತಡೆಯುವಂತಹ ಮಹತ್ತರ ನಿಯಮವನ್ನು ಭಾರತದ ಸಂವಿಧಾನ ನಮಗೆ ಕೊಡಮಾಡಿದೆ ಅದರ ಪೂರ್ಣ ಅನುಷ್ಠಾನ ಮಾಡುವುದರಲ್ಲ, ವ್ಯಾಪಾರ ವಹಿವಾಟಿನಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವುದು ಅತಿ ಅಗತ್ಯ ಎಂದು ತಹಶೀಲ್ದಾರ್ ರಶ್ಮಿ.ಹೆಚ್.ಜಿ. ತಿಳಿಸಿದರು.

ಅವರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಪುರಸಭೆ, ಶಿಶು ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಅಂಗಡಿಯಲ್ಲಿಯೂ ಸಹ ಗ್ರಾಹಕರೇ ಮಾಲೀಕರು ಎನ್ನುವ ಮಾತು ಇರುತ್ತದೆ ಅದರೆ ಅಲ್ಲಿ ನಿಜವಾದ ಮಾಲೀಕನಿಗೆ ಮೋಸ ಮಾಡುವ ಕಾರ್ಯನಡೆಯುತ್ತದೆ, ಅದ್ದರಿಂದ ಗ್ರಾಹಕರು ತಮಗೆ ಅದ ಅನ್ಯಾಯವನ್ನು ಪ್ರಶ್ನಿಸುವಂತಹ ಹಕ್ಕನ್ನು ಹೊಂದಿರುತ್ತಾರೆ, ಅದ್ದರಿಂದ ಕಡ್ಡಾಯವಾಗಿ ಅ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳುವ ಮೂಲಕ ನಷ್ಟಕ್ಕೆ ಒಳಗಾಗುವುದನ್ನು ತಡೆಯಬೇಕು ಎಂದರು.

LEAVE A REPLY

Please enter your comment!
Please enter your name here