ಘೋರ್ಪಡೆ ನಗರದಲ್ಲಿ “ಸ್ವಾಮಿ ವಿವೇಕಾನಂದ” ಜಯಂತಿ ಮತ್ತು “ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ”

0
182

ಸಂಡೂರು: ಜ:12: ತಾಲೂಕಿನ ಕುರೇಕುಪ್ಪ ಪುರಸಭೆ ವ್ಯಾಪ್ತಿಯ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಘೋರ್ಪಡೆ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆ.ಎಸ್.ಡಬ್ಲ್ಯೂ ಫೌಂಡೇಶನ್‌ನ ಆಸ್ಪೈರ್ ಸಂಸ್ಥೆಯ ಸಹಯೋಗದಲ್ಲಿ “ಸ್ವಾಮಿ ವಿವೇಕಾನಂದ ಜಯಂತಿ” ಮತ್ತು ರಾಷ್ಟ್ರೀಯ ಹೆಣ್ಣುಮಕ್ಕಳ ದಿನ” ಆಚರಿಸಲಾಯಿತು, ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಮಂಗಮ್ಮ ಮಾತನಾಡಿ ಸ್ವಾಮಿ ವಿವೇಕಾನಂದರು ಭಾರತಕ್ಕೆ ಮಾತ್ರವಲ್ಲದೇ ಪ್ರಪಂಚದ ಇತರೆ ದೇಶಗಳಿಗೂ ಸಹ ಅವರ ತತ್ವಗಳು, ಬದುಕಿದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿ ಅವರು ಇಂದಿಗೂ ಎಂದೆಂದಿಗೂ ಆದರ್ಶಪ್ರಾಯವಾಗಿದ್ದಾರೆ ಎಂದು ನುಡಿದರು,

ಈ ಸಂದರ್ಭದಲ್ಲಿ ಸಹ ಶಿಕ್ಷಕಿ ಕವಿತಾ ಅವರು ಸ್ವಾಮಿ ವಿವೇಕಾನಂದರ ಬಾಲ್ಯ,ಜೀವನ,ಚಿಕಾಗೊ ಬೇಟಿ ಸನ್ನಿವೇಶಗಳ ಕುರಿತು ಮಾಹಿತಿ ನೀಡಿದರು,

ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಹೆಣ್ಣುಮಕ್ಕಳ ಲಿಂಗಾನುಪಾತ, ಸರಿದೂಗಿಸುವ ಕ್ರಮಗಳು, ಹೆಣ್ಣುಮಕ್ಕಳ ನ್ನು ಪ್ರೋತ್ಸಾಹಿಸುವ ಭಾಗ್ಯಲಕ್ಷ್ಮಿ, ಸುಕನ್ಯಾ ಸಂವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿದರು, ನಂತರ ಸ್ವಾಮಿ ವಿವೇಕಾನಂದರ ಚಿತ್ರ ಕಲೆ,‌ ಬೇಟಿ ಬಚಾವೋ,ಬೇಟಿ ಪಡಾವೋ ಕುರಿತು ಚಿತ್ರ ಕಲೆ ಪ್ರದರ್ಶನ ಮತ್ತು ಹೆಣ್ಣಿನ ಮಹತ್ವ ಕುರಿತು ಜಾಗೃತಿ ಗೀತೆಗಳನ್ನು ಬಾಲಕಿಯರು ಹಾಡಿದರು,

ಕಾರ್ಯಕ್ರಮವನ್ನು ಮ್ಯಾಜಿಕ್ ಬಸ್‌ನ ಎ.ಇ ಸುರೇಶ್ ಮತ್ತು ಎಲ್.ಇ.ಎಸ್ ಮಲ್ಲೇಶ್ ಅವರು ನಡೆಸಿಕೊಟ್ಟು ಬಹುಮಾನಗಳನ್ನು ವಿತರಣೆ ಮಾಡಿಸಿದರು,

ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯೆ ಅಂಜಿಮ್ಮ, ಸಹ ಶಿಕ್ಷಕರಾದ ಪ್ರಕಾಶ್,ವಿಜಯ ಲಕ್ಷ್ಮಿ,ಬಸಮ್ಮ, ಶಾಹಿನಾಬಾನು,ಸುಷ್ಮಾ,ಅಂಗನವಾಡಿ ಕಾರ್ಯಕರ್ತೆ ಮಾಬುನ್ನಿ, ಕಮ್ಯುನಿಟಿ ಕಾರ್ಯಕರ್ತೆ ಲಕ್ಷ್ಮಿ,ವಿದ್ಯಾರ್ಥಿಗಳು ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here