2019-20ನೇ ಸಾಲಿನಲ್ಲಿದ್ದ ಮಾರುಕಟ್ಟೆ ಹರಾಜು ಧರವನ್ನೇ ಮುಂದುವರಿಸಬೇಕೆಂದು ಕರ್ನಾಟಕ ಪ್ರಾಂತ್ಯ ರೈತ ಸಂಘದಿಂದ ಪುರಸಭೆಯ ಮುಖ್ಯಾಧಿಕಾರಿಗಳಿಗ ಮನವಿ

0
176

ಸಂಡೂರು:ಮಾ:16:ರೈತರ ಬೆಳೆಗೆ ಬೆಲೆ ಇಲ್ಲ, ದಲ್ಲಾಲಿಗಳ ಹಾವಳಿ ಹೆಚ್ಚಾಗುತ್ತಿದೆ, ಮದ್ಯವರ್ತಿಗಳು ಗಳಿಸಿದಷ್ಟು, ಪಡೆದ ಬೆಲೆ ನಿಜವಾದ ರೈತನಿಗಾಗಲಿ, ಗ್ರಾಹಕರಿಗೆ ಅಗಲಿ ಸಿಗುತ್ತಿಲ್ಲ ಅದ್ದರಿಂದ 2019-20ನೇ ಸಾಲಿನಲ್ಲಿದ್ದ ಮಾರುಕಟ್ಟೆ ಹರಾಜು ಧರವನ್ನೇ ಮುಂದುವರಿಸಬೇಕು, ಹೊಸ ಧರ ನಿಗದಿ ಮಾಡಬೇಡಿ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಯು.ತಿಪ್ಪೇಸ್ವಾಮಿ ಒತ್ತಾಯಿಸಿದರು.

ಅವರು ತಾಲೂಕಿನ ಕುರೇಕುಪ್ಪ ಪುರಸಭೆಯ ಮುಂಭಾಗದಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘ, ಹಾಗೂ ಇತರ ಸಂಘಟನೆಗಳು ಒಟ್ಟಾಗಿ ಮನವಿ ಮಾಡಿ ಈ ಹಿಂದಿನ ವರ್ಷದಂತೆ ಈ ವರ್ಷವೂ ಸಹ ಮಾರುಕಟ್ಟೆ ಹರಾಜು ಮಾಡಲಾಗುತ್ತಿದೆ, ಅದರೆ ಈ ಹಿಂದೆ ಯಾವುದೇ ರೀತಿಯಲ್ಲಿ ಕರೋನಾ ಇರಲಿಲ್ಲ, ಅದರೆ ಈ ಬಾರಿ ರೈತರು ಕರೋನಾ ಸಂಕಷ್ಟದಿಂದ ತತ್ತರಿಸಿದ್ದಾರೆ, ಅದ್ದರಿಂದ ಈ ಬಾರಿಯೂ ಸಹ ಯಾವುದೇ ಮಾರುಕಟ್ಟೆಯ ಧರವನ್ನು ಹೆಚ್ಚಿಸದೇ ಹಿಂದಿನ ಧರವನ್ನೇ ಮುಂದುವರಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು, ಅಲ್ಲದೆ ರೈತರು ಬೀದಿಪಾಲಾಗುವುದನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ವಿ.ದೇವಣ್ಣ ಮಾತನಾಡಿ ಕರೋನಾ ಮತ್ತು ಇತರ ಕಾರಣಗಳಿಂದ ರೈತರು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸಿದ್ದಾರೆ, ಅಲ್ಲದೆ ರೈತರು ಬೆಳೆದ ಬೆಳೆಗಳಿಗೆ ಬೆಲೆಯೂ ಸಹ ಇಲ್ಲವಾಗುತ್ತಿದೆ, ಅದ್ದರಿಂದ ಪುರಸಭೆಯವರು ಈ ಹಿಂದಿನ ಧರವನ್ನೇ ನಿಗದಿಮಾಡುವ ಮೂಲಕ ಅನುಕೂಲಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶರಬಯ್ಯ, ಲೋಕೇಶ್, ಮರಿಸ್ವಾಮಿ, ಶ್ರೀನಿವಾಸ, ಪಂಪನಗೌಡ, ಹೇಮಣ್ಣ, ತಿಪ್ಪಯ್ಯ, ಮಹೇಶ್, ಈರಪ್ಪ ಇತರ ಹಲವಾರು ರೈತರು ಒಟ್ಟಾಗಿ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

LEAVE A REPLY

Please enter your comment!
Please enter your name here