ಸಮಾಜಮುಖಿ ಕೆಲಸಗಳಿಗೆ ಸೇವಾ ಟ್ರಸ್ಟ್ ಗಳು ತೊಡಗಲಿ:ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ

0
210

ಸಮಾಜಮುಖಿ ಕೆಲಸಗಳಲ್ಲಿ ಸೇವಾ ಟ್ರಸ್ಟ್ ತೊಡಗಿಕೊಳ್ಳಬೇಕು. ಇದರಿಂದ ಸಮಾಜಕ್ಕೂ ಅನುಕೂಲವಾಗಲಿದೆಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಹೇಳಿದರು.
ನಗರದ ಶ್ರೀ ವೆಂಕಟೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಭಾನುವಾರ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ಯುವ ಶಕ್ತಿ ನಮ್ಮ ಬಲ ಕಾರ್ಯಕ್ರಮದಡಿ ಯುವ ನಾಯಕ ಸಂತೋಷ ಅಂಗಡಿ ಹುಟ್ಟು ಹಬ್ಬ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಪರಿಸರ ಪರಿಪಾಲಕರಿಗೆ ಹಮ್ಮಿಕೊಂಡ ಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಕಳಕಳಿ ಇಟ್ಟುಕೊಂಡೆ ಸೇವಾ ಟ್ರಸ್ಟ್, ಸಂಘಗಳು ಸ್ಥಾಪನೆಯಾಗಬೇಕು. ಆ ಮೂಲಕ ಸಮಾಜದಲ್ಲಿ ಉತ್ತಮ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮೂಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಯದ್ದಲದೊಡ್ಡಿ ಮಹಾಲಿಂಗಸ್ವಾಮೀಜಿ ಮಾತನಾಡಿ, ಸದಾ ಸಮಾಜಮುಖಿ ಕಳಕಳಿಯುಳ್ಳ ಸಂತೋಷ ಅಂಗಡಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಸಮಾಜ ಸೇವೆ ಉದ್ದೇಶದಿಂದ ಯುವಶಕ್ತಿ ಸೇವಾ ಟ್ರಸ್ಟ್ ಸ್ಥಾಪಿಸಿದ್ದು ಎಲ್ಲರ ಕೈಜೋಡಿಸೋಣ ಎಂದರು. ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಬಸವರಾಜ ಮಳಿಮಠ ಮಾತನಾಡಿ, ಯುವಕರಲ್ಲಿ ಹೊಸ ಆಲೋಚನೆಗಳಿದ್ದು ಸಮಾಜದ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಸಕಾರಗೊಳಿಸಬೇಕೆಂದು ತಿಳಿಸಿದರು. ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ಅಂಗಡಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಶ್ರೀ ಶಕ್ತಿ ರಕ್ತ ಭಂಡಾರ ಪಿಆರ್‍ಒ ಮುತ್ತು ಪಾಟೀಲ್ ಮಾತನಾಡಿದರು. ಸಿರಗುಪ್ಪ, ಬಸವಭೂಷಣಸ್ವಾಮೀಜಿ, ಜಿಪಂ ಸದಸ್ಯರಾದ ಬಾಬುಗೌಡ ಬಾದರ್ಲಿ, ಎನ್.ಶಿವನಗೌಡ ಗೊರೇಬಾಳ, ಅಮರಯ್ಯಸ್ವಾಮಿ ಅಲಬನೂರು, ಶ್ರೀ ವೆಂಕಟೇಶ್ವರ ಪ್ರೌಢ ಶಾಲೆ ಮುಖ್ಯಶಿಕ್ಷಕ ಗಂಗನಗೌಡ ಪೊಪಾ., ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಬೆನ್ನೂರು, ಶ್ರೀಶಕ್ತಿ ರಕ್ತ ಭಂಡಾರ ವ್ಯವಸ್ಥಾಪಕ ಸೋಮನಗೌಡ ಬಾದರ್ಲಿ, ಹಾಲಯ್ಯ ಹಿರೇಮಠ, ಸಿದ್ದು ಹೂಗಾರ, ಪತ್ರಕರ್ತ ಚಂದ್ರಶೇಖರ ಯರದಿಹಾಳ, ವನಸಿರಿ ಫೌಂಡೇಶನ್ ಜಿಲ್ಲಾಧ್ಯಕ್ಷ ಅಮರೇಗೌಡ ಮಲ್ಲಾಪುರ , ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿ ಅವಿನಾಶ ದೇಶಪಾಂಡೆ , ಸಂಗಮೇಶ್ ಹಿರೇಮಠ್ , ವಿಜಯ್ ಮಾಲಿಪಾಟೀಲ್ , ಯಾಸೀನ್ , ಮಂಜು ಕಲಾಲ್ ಇತರರು ಇದ್ದರು. ಉಪನ್ಯಾಸಕಿ ನಾಗರತ್ನ ಗುತ್ತೇದಾರ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಿದರು.

LEAVE A REPLY

Please enter your comment!
Please enter your name here