ದೇಶದ ಆಚೆಗೂ ಕನ್ನಡ ಪಸರಿಸುತ್ತಿರುವ ಐಟಿ ಉದ್ಯಮಿ :-

0
797

ಕನ್ನಡ ಎನೆ ಕುಣಿದಾಡುವುದು ಕನ್ನಡ ಎನೆ ಕಿವಿ ನಿಮಿರುವುದು. ಎನ್ನುವ ಸಾಲುಗಳನ್ನು ನಾನು ಕೇಳಿದ್ದೇವೆ ಸ್ವಲ್ಪ ಯಶಸ್ಸು ಸಿಕ್ಕಿದರೆ ಸಾಕು ಕನ್ನಡವನ್ನೇ ಮರೆತು ಕನ್ನಡ ಎನ್ನಡ ಎನ್ನುವ ರೀತಿಯಲ್ಲಿ ಬಿಂಬಿಸುತ್ತವೆ . ಆದರೆ ಇಲ್ಲೊಬ್ಬರು ದೇಶದ ಆಚೆಗೂ ಕೂಡ ಕನ್ನಡದ ಪ್ರೇಮವನ್ನು ಪಸರಿಸುತ್ತಿದ್ದಾರೆ ಉದ್ಯೋಗದಲ್ಲಿ ಐಟಿ ಕಾರ್ಪೊರೇಟ್ ಉದ್ಯೋಗಿಯಾಗಿದ್ದರು ಆಸಕ್ತಿ ಕನ್ನಡದ ಮೇಲೆ ಕನ್ನಡ ಸಾಹಿತ್ಯದ ಮೇಲೆ ಇವರೇ ನಮ್ಮ ನಿಮ್ಮ ನೆಚ್ಚಿನ ಶ್ರೀಯುತ ಸುರೇಶ್ ರವರು

ಜನನ.

ಇವರು ತಂದೆ ನಾಗಭೂಷಣರಾವ್ ಮತ್ತು ತಾಯಿ ರಮಾಮಣಿಯ ಮಗನಾಗಿ ಶ್ರೀಯುತ ಸುರೇಶ್ ರವರು ಮಧುಗಿರಿಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದರು.

ಶಿಕ್ಷಣ:-

ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರಿನ ಸಿದ್ದಗಂಗಾ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು.

ವೃತ್ತಿ :-
ಐಟಿ ಕಾರ್ಪೊರೇಟ್ ಶಿಕ್ಷಕರಾಗಿ ಹಾಗೂ ಸಲಹೆಗಾರರಾಗಿ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ.

ವೈವಾಹಿಕ ಜೀವನ:-
2013ರಲ್ಲಿ ಶ್ರೀಯುತ ಸುರೇಶ್ ರವರು ಅಕ್ಷತಾ ರವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ

ಆಸಕ್ತಿ:-
ಕನ್ನಡ ಸಾಹಿತ್ಯ ನುಡಿಯನ್ನು ಕುರಿತು ಹಲವಾರು ಕವನ ಲೇಖನ ಮತ್ತು ಕಥೆಗಳನ್ನು ರಚಿಸುವುದು ಜೊತೆಗೆ ಚಿತ್ರೋದ್ಯಮದ ಹಲವು ನಾಯಕ-ನಾಯಕಿಯರು ನಿರ್ಮಾಪಕರು ನಿರ್ದೇಶಕರನ್ನು ಸಂದರ್ಶಿಸಿ ಅವರ ಜೀವನ ಚಿತ್ರಣವನ್ನು ರಚಿಸುವುದು ಮತ್ತು ಚಲನಚಿತ್ರಗಳು ವಿಮರ್ಶೆಯನ್ನು ಬರೆಯುವುದು ಇವರ ಹವ್ಯಾಸವಾಗಿದೆ

ಪುಸ್ತಕ ಪ್ರೇಮ :-
ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ.

ರಚಿಸಿದ ಪುಸ್ತಕಗಳು:-
ಇವರ “ನಾನು ನಾನೇನಾ” ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.21.3.2021 ಬೆಂಗಳೂರಿನಲ್ಲಿ ” ಹೈTECH ಅಜ್ಜಿ “ಎನ್ನುವ ಪುಸ್ತಕವನ್ನು ದೇಶ ಕಾಯುವ ವೀರ ಯೋಧರ ಇಂದ ಪುಸ್ತಕ ಬಿಡುಗಡೆಯನ್ನು ಮಾಡಿಸುತ್ತಿದ್ದಾರೆ.

ವೆಬ್ಸೈಟ್ ಕೆಲಸ:-
ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ವ್ಯಕ್ತಿತ್ವ:-
ತಾನು ಬೆಳೆದು ಇತರರನ್ನು ಬೆಳೆಸುವ ಮನೋಭಾವ ಇವರದು ನಿಷ್ಕಲ್ಮಶವಾದ ಇವರ ವ್ಯಕ್ತಿತ್ವ ಸರಳ ನಡೆ-ನುಡಿ ಮತ್ತು ಸುಂದರ ಮಾತುಗಾರರು. ಎಲ್ಲರನ್ನು ಪ್ರೀತಿಯಿಂದ ನೋಡುವ ಇವರ ವ್ಯಕ್ತಿತ್ವ ನಿಜಕ್ಕೂ ಅದ್ಭುತ.

ನನ್ನ ಆಶಯ :-
ದೇಶದ ಆಚೆಗೂ ಕೂಡ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಿರುವ ಶ್ರೀಯುತ ಸುರೇಶ್ ಅವರಿಗೆ ಇದು ನನ್ನದೊಂದು ನುಡಿನಮನ. ನಿಮ್ಮ ಎಲ್ಲಾ ಕೆಲಸಕಾರ್ಯಗಳಲ್ಲಿ ಯಶಸ್ಸು ಸಿಗುವಂತಾಗಲಿ. ನೀವು ಬಯಸಿದ ಜೀವನ ನಿಮ್ಮದಾಗಲಿ. ನಿಮ್ಮಿಂದ ಹೊಸ ಹೊಸ ಪ್ರತಿಭೆಗಳ ಅನಾವರಣವಾಗಲಿ ಎನ್ನುವುದು ನನ್ನ ಆಶಯ.

ವಿದ್ಯಾ ಶ್ರೀ ಬಿ
ಬಳ್ಳಾರಿ

LEAVE A REPLY

Please enter your comment!
Please enter your name here