ಕೃಷಿ ವಿಶ್ವವಿದ್ಯಾಲಯಗಳು ಉತ್ತಮ ವಿದ್ಯಾರ್ಥಿಗಳನ್ನು ಉತ್ಪಾದಿಸಲಿ: ಡಾ.ಅಶೋಕ ದಳವಾಯಿ

0
107

ರಾಯಚೂರು ಮಾ.15 :- ದೇಶದ 26ಕೋಟಿ ಜನ, ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಅವರೆಲ್ಲರ ಬಾಳು ಹಸನಾಗಬೇಕೆಂದರೆ ಕೃಷಿ ವಿಶ್ವವಿದ್ಯಾಲಯಗಳು ಉತ್ತಮ ವಿದ್ಯಾರ್ಥಿಗಳನ್ನು ಉತ್ಪಾದಿಸಬೇಕು. ಆದರೆ ಇಂದಿನ ಕೃಷಿ ಶಿಕ್ಷಣ ಪಡೆದ ಶೇಕಡ 30ರಷ್ಟು ವಿದ್ಯಾರ್ಥಿಗಳು ಬೇರೆ-ಬೇರೆ ಕಾರ್ಯಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಕೃಷಿ ಕ್ಷೇತ್ರಕ್ಕೆ ಸ್ವಲ್ಪ ಹಿನ್ನೆಡೆಯಾಗಿದೆಂದು ಭಾರತ ಸರ್ಕಾರದ ರಾಷ್ಟ್ರೀಯ ಮಳೆಯಾಶ್ರಿತ ಕ್ಷೇತ್ರ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅಶೋಕ ದಳವಾಯಿ ಅವರು ಹೇಳಿದರು.

ಅವರು ಮಾ.15ರ ಮಂಗಳವಾರ ದಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕೃಷಿ ಶಿಕ್ಷಣದ ಸಮಗ್ರ ಪರಿವರ್ತನೆಗೆ ಉಪಕ್ರಮಗಳು, ಸವಾಲುಗಳು ಹಾಗೂ ಮುಂದಿನ ಅವಕಾಶಗಳು ಕುರಿತು ಎರಡು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಒಂದು ಲೋಪದೋಷಗಳನ್ನು ನಿವಾರಿಸಲು ಕೃಷಿ ಶಿಕ್ಷಣ ಕ್ಷೇತ್ರವು ಕ್ರಿಯಾಶೀಲತೆ, ಸವಾಲುಗಳನ್ನು ಎದುರಿಸುವ ಶಕ್ತಿ ಮತ್ತು ಭಾವನಾತ್ಮಕ ಮೌಲ್ಯಗಳನ್ನು ಹೊಂದುವAತೆ ರೂಪಾಂತರಗೊಳ್ಳುವುದು ಮುಖ್ಯವಾಗಿದೆ. ಉತ್ತಮ ವಿದ್ಯಾರ್ಥಿಗಳ ಉತ್ಪಾದನೆಗೋಸ್ಕರ ಹೊಸ ಕೃಷಿ ಶಿಕ್ಷಣ ನೀತಿಗಳು ಅನುಷ್ಠಾನಗೊಳ್ಳಬೇಕಾಗಿದೆ. ಈ ಕೃಷಿ ಶಿಕ್ಷಣ ನೀತಿಗಳು ಯಶಸ್ವಿಯಾಗಬೇಕಾದರೆ, ಕೃಷಿ ಶಿಕ್ಷಣದ ಮಹತ್ವವನ್ನು ಪ್ರಾಥಮಿಕ ಶಾಲಾ ಹಂತದಿಂದಲೇ ಪ್ರಾರಂಭಿಸಿ ಕೃಷಿಯ ಮಹತ್ವ, ಕೃಷಿಯಲ್ಲಿರುವ ಕ್ರಿಯಾತ್ಮಕ ಆಲೋಚನೆ ಮುಂತಾದವುಗಳಿಗೆ ಬುನಾದಿ ಹಾಕಬೇಕು ಎಂದರು.

ಕುಲಪತಿ ಡಾ.ಕೆ.ಎನ್. ಕಟ್ಟಿಮನಿ ಅವರು ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನನ್ವಯ ಏರ್ಪಡಿಸಿರುವ ಈ ರಾಷ್ಟ್ರೀಯ ಸಮ್ಮೇಳನವು ಒಂದು ಉತ್ತಮ ವೇದಿಕೆಯಾಗಿ ಇಲ್ಲಿ ಚರ್ಚಿಸಲಿರುವ ವಿಷಯಗಳು ಕೃಷಿ ಶಿಕ್ಷಣದ ಅಮೂಲಾಗ್ರ ಪರಿವರ್ತನೆಗೆ ಸಹಾಯಕವಾಗಲಿವೆ ಮತ್ತು ಈ ವಿಶ್ವವಿದ್ಯಾಲಯವು ಈಗಾಗಲೇ ಸಮಗ್ರ ಕೃಷಿ ಶಿಕ್ಷಣದತ್ತ ದಾಪುಗಾಲಿಟ್ಟಿದೆ ಎಂದು ಹೇಳಿದರು.

ಈ ಹೊಸ ಕೃಷಿ ಶಿಕ್ಷಣ ನೀತಿ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಲು ಅವಶ್ಯವೆನಿಸುವ ಎಲ್ಲ ಉಪಕ್ರಮಗಳನ್ನು ಕಾಲಾನುಕ್ರಮವಾಗಿ ಅನುಸರಿಸಲು ವಿಶ್ವವಿದ್ಯಾಲಯವು ಎಲ್ಲ ರೀತಿಯಿಂದ ಸರ್ವಸನ್ನದ್ಧವಾಗಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ರೈತ ಸಮುದಾಯದ ಏಳ್ಗೆಗೆ ಹಗಲಿರುಳು ಶ್ರಮಿಸುತ್ತಿರುವ ಈ ವಿಶ್ವವಿದ್ಯಾಲಯ ಕಲಬುರಗಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ 2020ನೇ ಸಾಲಿನಲ್ಲಿ ರಾಷ್ಟçಮಟ್ಟದ ಎರಡನೇ ಅತ್ಯುತ್ತಮ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿಯು ದೊರೆತಿರುವುದು ಹಾಗೂ ಅದೇ ಜಿಲ್ಲೆಯ ಹಾಲಸುಲ್ತಾನಪುರ ಗ್ರಾಮದ ಶ್ರೀ ಶರಣಬಸಪ್ಪ ಪಾಟೀಲ ಅವರಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನೀಡುವ ಜಗಜೀವನರಾಮ್ ಅಭಿನವ ಕಿಸಾನ್ ಪುರಸ್ಕಾರ ಲಭಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದರು.

ವಿಶ್ವವಿದ್ಯಾಲಯದ ಎಲ್ಲ ಕೃಷಿ ಸಂಶೋಧನಾ ಕ್ಷೇತ್ರಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಆಂತರಿಕ ರಸೀದಿಯು ಹೆಚ್ಚುತ್ತಾ ಆರ್ಥಿಕ ಪರಿಸ್ಥಿತಿಯು ಉತ್ತಮ ಸ್ಥಿತಿಯಲ್ಲಿದೆ. ಮುಂಬರುವ ದಿನಗಳಲ್ಲಿಯೂ ಕೂಡ ಇದೇ ರೀತಿಯ ಹುಮ್ಮಸ್ಸಿನೊಂದಿಗೆ ರೈತಾಪಿ ವರ್ಗದ ಏಳ್ಗೆಗೆ ಶ್ರಮಿಸುತ್ತ ದೇಶದಲ್ಲಿಯೇ ಅತ್ಯುತ್ತಮ ವಿಶ್ವವಿದ್ಯಾಲಯವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಇದೇ ಸಂದ0ರ್ಭದಲ್ಲಿ ಬೆಂಗಳೂರಿನ ಅಟಾರಿ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ.ಎಸ್.ಪ್ರಭು ಕುಮಾರ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ವಿ.ಐ.ಬೆಣಗಿ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರುಗಳಾದ ಕೋಟ್ರೆಶಪ್ಪ ಬಿ. ಕೋರಿ, ಸುನೀಲ್ ಕುಮಾರ ವರ್ಮಾ, ಶಿಕ್ಷಣ ನಿರ್ದೇಶಕ ಡಾ.ಎಂ.ಜಿ.ಪಾಟೀಲ, ಡಾ.ಎಂ.ವೀರನಗೌಡ, ವಿಶ್ವವಿದ್ಯಾಲಯದ ಅಧಿಕಾರಿ ಡಾ.ಬಿ.ಕೆ.ದೇಸಾಯಿ, ಸಂಶೋಧನಾ ನಿರ್ದೇಶಕ ಡಾ. ಸತ್ಯನಾರಾಯಣ ರಾವ್, ಕೃಷಿ ವಿವಿಯ ಡೀನ್ ಡಾ.ಎಂ.ಭೀಮಣ್ಣ, ಡಾ.ಎ.ಚನ್ನಬಸವಣ್ಣ, ಡಾ. ಜಾಗೃತಿ ದೇಶಮಾನ್ಯ, ಆಡಳಿತಾಧಿಕಾರಿ, ಡಾ.ಜೆ.ಅಶೋಕ, ಹಣಕಾಸು ನಿಯಂತ್ರಣಾಧಿಕಾರಿ ಡಾ. ರವಿ ಮೆಸ್ತಾ, ಆಸ್ತಿ ಅಧಿಕಾರಿ ಡಾ. ಪ್ರಮೋದ ಕಟ್ಟಿ, ವಿವಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಾ.21ರಿಂದ ಲಿಂಗಸೂಗೂರು ಉಪ ಕಾರಾಗೃಹದಲ್ಲಿನ ಬಂದಿಗಳ ಸಂದರ್ಶನ

ರಾಯಚೂರು ಮಾ.15:- ಜಿಲ್ಲೆಯ ಲಿಂಗಸೂಗೂರು ಉಪ ಕಾರಾಗೃಹದ ವತಿಯಿಂದ ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆಯಾದ ಹಿನ್ನಲೆಯಲ್ಲಿ ಕಾರಾಗೃಹದಲ್ಲಿನ ಬಂದಿಗಳಿಗೆ ಕೋವಿಡ್ ಮಾರ್ಗಸೂಚಿಗಳನ್ವಯ ನೇರ ಸಂದರ್ಶನವನ್ನು ಮಾ.21ರಿಂದ ಪುನರಾರಂಭಿಸಲಾಗುವುದು.

ಮುಂಜಾಗ್ರತ ಕ್ರಮವಾಗಿ ಉಪ ಕಾರಾಗೃಹದಲ್ಲಿ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗಧಿತ ಸಂದರ್ಶನವನ್ನು ಮಾತ್ರ ನೀಡಲಾಗುವುದು. ಆದ್ದರಿಂದ ಬಂದಿಗಳ ಸಂದರ್ಶನಕ್ಕೆ ಬರುವ ಕುಟುಂಬ ಸದಸ್ಯರು, ಸಂಬAಧಿಕರು, ಸ್ನೇಹಿತರು ಮತ್ತು ವಕೀಲರು ಮುಂಚಿತವಾಗಿಯೇ ಕಾರಾಗೃಹದ ಇ-ಮೇಲ್: ಣsರಿಟgಡಿ.ಠಿಡಿisoಟಿs-ಞಚಿಡಿ@gov.iಟಿ ವ್ಯಾಟ್ಸ್ಆಫ್: 9480806510 ಅಥವಾ ದೂರವಾಣಿ ಸಂಖ್ಯೆ: 08537-200197 ಮುಖಾಂತರ ಸಂಪರ್ಕಿಸಿ ವಿವರಗಳೊಂದಿಗೆ ಸಂದರ್ಶನಕ್ಕೆ ನೊಂದಾಯಿಸಿ, ನಿಗಧಿಪಡಿಸುವ ದಿನ ಮತ್ತು ಸಮಯಕ್ಕೆ ಸಂದರ್ಶನಕ್ಕೆ ಆಗಮಿಸಬೇಕು.

ಸಂದರ್ಶನಕ್ಕೆ ಬರುವ ಸಂದರ್ಶಕರು ಯಾವುದೇ ರೀತಿಯ ಕೋವಿಡ್ ರೋಗ ಲಕ್ಷಣಗಳನ್ನು ಹೊಂದಿರಬಾರದು ಹಾಗೂ ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿರುವ ಕುರಿತು ಲಸಿಕಾ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. ಸಂದರ್ಶಕರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಲೂಕ ಉಪ-ಕಾರಾಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದುಕೊರತೆ ನಿವಾರಣಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನ

ರಾಯಚೂರು ಮಾ.15 :- ರಾಜ್ಯದ ಕೆಲವು ಜಿಲ್ಲಾ ಪಂಚಾಯತಿಗಳಲ್ಲಿ ಪ್ರಾಯೋಗಿಕವಾಗಿ ಸಾರ್ವಜನಿಕರ ಕುಂದುಕೊರತೆ ನಿವಾರಣಾ ಪ್ರಾಧಿಕಾರಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಸಾರ್ವಜನಿಕ ಕುಂದುಕೊರತೆ ಪ್ರಾಧಾಕಾರದ ವ್ಯಾಪ್ತಿಗೆ ಕಲಬುರಗಿ ವಿಭಾಗದ ಜೊತೆಗೆ ವಿವಿಧ ವಿಭಾಗದ ಜಿಲ್ಲೆಗಳನ್ನು ಸೇರ್ಪಡೆ ಮಾಡಲಾಗಿದ್ದು, ಕುಂದುಕೊರತೆ ನಿವಾರಣಾ ಪ್ರಾಧಾಕಾರಿಯಾಗಿ ಟಿ.ಶ್ರೀನಿವಾಸ ರೆಡ್ಡಿ ಅವರು ನೇಮಕವಾಗಿದ್ದಾರೆ.

ರಾಯಚೂರು ಜಿಲ್ಲೆಯ ಕುಂದುಕೊರತೆ ಇದ್ದಲ್ಲಿ ಬಾದಿತರು ನಿಗಧಿತ ನಮೂನೆ ಅರ್ಜಿಯೊಂದಿಗೆ ಸಂಬಂದಿಸಿದ ಸ್ವಯಂ ದೃಡೀಕರಣ ಮಾಡಿದ ಪೂರಕ ದಾಖಲೆಗಳು, ಅಫಿಡಿವೇಟ್ ಮತ್ತು ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಗಳ ಹೆಸರಿನಲ್ಲಿ ಹತ್ತು ರೂಪಾಯಿಗಳ ಪೋಸ್ಟಲ್ ಆರ್ಡರ್‌ನೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರಜಹಾನ್ ಖಾನಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾನವಿ ಪುರಸಭೆ: ಮನೆ ನಿರ್ಮಾಣ ಯೋಜನೆಯಡಿ ಅರ್ಜಿ ಆಹ್ವಾನ

ರಾಯಚೂರು ಮಾ.15 :- ಜಿಲ್ಲೆಯ ಮಾನವಿ ಪುರಸಭೆ ಕಾರ್ಯಲಯದ ವತಿಯಿಂದ 2021-22ನೇ ಸಾಲಿನ ನಗರ ವಸತಿ ನಿಗಮ ಯೋಜನೆಯಡಿಯಲ್ಲಿ ಡಾ ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ-13, ಪರಿಶಿಷ್ಟ ಪಂಗಡ-5, ಸಾಮಾನ್ಯ-49, ಅಲ್ಪಸಂಖ್ಯಾತರು-8 ಸೇರಿದಂತೆ ಒಟ್ಟು-75 ಮನೆಗಳು ಮಂಜೂರಾಗಿದ್ದು, ಖಾಲಿ ನಿವೇಶನ ಹೊಂದಿದ ಫಲಾನುಭವಿಗಳು ಮನೆ ನಿರ್ಮಿಸಿ ಕೊಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಹತೆಗಳು: ಫಲಾನುಭವಿಗಳು ಮನೆ ನಿರ್ಮಣಕ್ಕಾಗಿ ಅರ್ಜಿ ಸಲ್ಲಿಸಲು ತಮ್ಮ ಸ್ವತಂ ಖಾಲಿ ನಿವೇಶನ ಹೊಂದಿರತಕ್ಕದ್ದು, ಈಗಾಗಲೇ ಪುರಸಭೆ ವತಿಯಿಂದ ಯಾವುದೇ ಆಶ್ರಯ ಯೋಜನೆಯಡಿಯಲ್ಲಿ ವಸತಿ/ಮನೆ ಮಂಜೂರಾಗಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ, ಪುರಸಭೆ ವತಿಯಿಂದ ಮನೆ ನಿರ್ಮಾಣಕ್ಕಾಗಿ ವಿವಿಧ ವಸತಿ ಯೋಜನೆಯಡಿಯಲ್ಲಿ ವಂತಿಕೆ ಹಣ ಪಡೆದಿರುವಂತಹ ಫಲಾನುಭವಿಗಳು ಅರ್ಜಿ ಸಲ್ಲಿಸುವಂತಿಲ್ಲ, ಮಹಿಳಾ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ದಾಖಲಾತಿಗಳು: ಖಾಲಿ ನಿವೇಶನದ ಖರೀದಿ ಪತ್ರ, ಹಕ್ಕುಪತ್ರ, ದಾನಪತ್ರ, ಫಾರಂ ನಂ.3, ಪಾಸ್ ಪೋಟೊ, ವರ್ಗಾವಣೆ ಪ್ರಮಾಣ ಪತ್ರದ ಪ್ರತಿ, ಸದರಿ ಸಾಲಿನವರೆಗೆ ತೆರಿಗೆ ಪಾವತಿ ಪ್ರತಿ, ಕುಟುಂಬ ಪಡಿತರ ಚೀಟಿ, ಕುಟುಂಬ ಎಲ್ಲಾ ಸದಸ್ಯರ ಆಧಾರ ಕಾರ್ಡ್ ಪ್ರತಿ, ಅರ್ಜಿದಾರರ ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಕುಟುಂಬ ಎಲ್ಲಾ ಸದಸ್ಯರ ಗುರುತಿನ ಚೀಟಿ, 50 ರೂ ಕರಾರು ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಸಂಬAಧ ಪಟ್ಟ ದಾಖಲಾತಿಗಳೊಂದಿಗೆ ಮಾ.22ರೊಳಗಾಗಿ ಅರ್ಜಿಯನ್ನು ಪುರಸಭೆಯ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ: ಅರಿವು ಸಾಲಕ್ಕೆ ದಾಖಲಾತಿ ಸಲ್ಲಿಸಲು ಸೂಚನೆ

ರಾಯಚೂರು ಮಾ.15 :- ಇಲ್ಲಿಯ ಜಿಲ್ಲಾ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2019-20ನೇ ಸಾಲಿನಲ್ಲಿ ನಿಗಮದಿಂದ ಅರ್ಜಿಸಲ್ಲಿಸಿ ಅರಿವು ಐಡಿ ಪಡೆದು ಸಾಲ ಪಡೆಯದೆ ಇರುವಂತಹ ವಿದ್ಯಾರ್ಥಿಗಳಿಗೆ, 2021-22ನೇ ಸಾಲಿನಲ್ಲಿ ಪರಿಗಣಿಸಿ ಅಂತಹ ವಿದ್ಯಾರ್ಥಿಗಳು, ಕಾಲೇಜಿನ ದೃಡೀಕರಣ ಪತ್ರ ಸೇರಿದಂತೆ ಇತರೆ ದಾಖಲಾತಿಗಳೊಂದಿಗೆ ಮಾ. 24ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸುವಂತೆ ಕೋರಲಾಗಿದೆ.

ಈ ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲಿ 2021-22ನೇ ಸಾಲಿನಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿರಬೇಕು. 2021-22ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾದಿಕಾರದಿಂದ ಆ-ಅಇಖಿ (ಐಂಖಿಇಖAಐ ಇಓಖಿಖಙ) ಯಿಂದ ಇಂಜಿನಿಯರಿAಗ್ ಕೋರ್ಸಗೆ ವಿವಿಧ ಕಾಲೇಜುಗಳಲ್ಲಿ ಅಯ್ಕೆಯಾಗುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು ಸಾಲದ ಯೋಜನೆಯಡಿಯಲ್ಲಿ ಸಾಲ ಪಡೆಯಲು ನಿಗಮದ ವೆಬ್ ಸೈಟ್ (ಞmಜಛಿoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ) ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸದೆ ಇರುವಂತಹ ವಿದ್ಯಾರ್ಥಿಗಳು ಜಿಲ್ಲಾ ಕಚೇರಿಯಲ್ಲಿ ಕಾಲೇಜಿನ ದೃಡೀಕರಣ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

2019-20ನೇ ಸಾಲಿನಲ್ಲಿ ನಿಗಮದಿಂದ ಅನ್ ಲೈನ್ ಮುಖಾಂತರ ಎಲ್ಲಾ ಪದವಿ ಕೋರ್ಸುಗಳಿಗೆ ಅರ್ಜಿ ಸಲ್ಲಿಸಿ ಅರಿವು ವಿದ್ಯಾಭ್ಯಾಸ ಸಾಲ ಪಡೆದಿರುವಂತಹ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷದಲ್ಲಿ ಕಾಲೇಜಿನ ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳು 2021-22ಸಾಲಿಗೆ ರಿನಿವಲ್ ಪ್ರಕರಣಗಳಿಗೆ ಮಾತ್ರ ಜಿಲ್ಲಾ ಕಚೇÃರಿಯಲ್ಲಿ ವಿದ್ಯಾರ್ಥಿಗಳು ಕಾಲೇಜಿನ ದೃಡೀಕರಣ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸಲ್ಲಿಸುವಂತೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಯಚೂರು ನಗರ: ಮಾ.17ರಂದು ವಿದ್ಯುತ್ ವ್ಯತ್ಯಯ

ರಾಯಚೂರು ಮಾ.15 :- ನಗರದ ಎಪಿಎಂಸಿ 110/33 ಕೆವಿ ವಿದ್ಯುತ್ ಉಪ ಕೇಂದ್ರದಲ್ಲಿ ವಿದ್ಯುತ್ ಮಾರ್ಗದ ಪರಿವರ್ತಕ ಬದಲಾವಣೆ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ 2022ರ ಮಾ.17ರ ಗುರುವಾರ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಗದ್ವಾಲ್ ರೋಡ್, ಎಂವಿಜಿ ಲೇಔಟ್, ಜವಾಹರ ನಗರ, ಹನುಮಾನ ಟಾಕೀಸ್, ಎನ್‌ಜಿಓ ಕಾಲೋನಿ, ವಾಸವಿ ನಗರ ಚಾಂನಿಕ್‌ಪುರಿ ಲೇಔಟ್, ಬೋಳಂದೊಡ್ಡಿ ರೋಡ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ರಾಯಚೂರು ನಗರ ಉಪ ವಿಭಾಗ-2 ಜೆಸ್ಕಾಂ ಕಾ ಮತ್ತು ಪಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here