ನಾಗರಹುಣಸೆ ಗ್ರಾಮದ ನೂತನ ಗರ್ಭಗುಡಿಯಲ್ಲಿ ಸಾರಿ ದುರುಗಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಸಂಭ್ರಮ.

0
179

ಕೂಡ್ಲಿಗಿ ತಾಲೂಕಿನ ನಾಗರಹುಣಸೆ ಗ್ರಾಮದಲ್ಲಿ ನಡೆದ ನೂತನ ಗರ್ಭಗುಡಿಗೆ ಶ್ರೀ ಮಾತೆ ಸಾರಿ ದುರುಗಮ್ಮ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಗರ್ಭಗುಡಿ ಲೋಕಾರ್ಪಣೆ ಕಾರ್ಯಕ್ರಮ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಗ್ರಾಮದ ರಾಜಬೀದಿಯಲ್ಲಿ ಮಂಗಳ ವಾದ್ಯಗಳೊಂದಿಗೆ ಅಮ್ಮನ ಮೆರವಣಿಗೆ ಮೂಲಕ ಗಂಗೆ ಪೂಜೆ ಮಾಡಿಸಿಕೊಂಡು ವಿಜೃಂಭಣೆಯಿಂದ ಮಂಗಳವಾರ ಬೆಳಿಗ್ಗೆ ಯಿಂದಲೇ ಧಾರ್ಮಿಕ ಕಾರ್ಯಗಳು ನಡೆದವು.

ಗ್ರಾಮಾಂತರ ಪ್ರದೇಶಗಳಲ್ಲಿ ದೇವಾಲಯ ನಿರ್ಮಾಣ ಮಾಡುವ ಮೂಲಕ ಸಮಾಜದಲ್ಲಿ ಭಾವನಾತ್ಮಕ ಸಂಬಂಧವನ್ನು ಬೆಳೆಸಲು ಸಾಧ್ಯವಾಗುತ್ತದೆ.ಅಲ್ಲದೇ ಹಿರಿಯರು ಹಾಕಿಕೊಟ್ಟ ಧಾರ್ಮಿಕ ಚಿಂತನೆಗಳು ಇಂದಿನ ಸಮಾಜಕ್ಕೆ ಬಹುಮುಖ್ಯವಾಗಿವೆ.ಎಂದು.ಜಿ.ಸಿದ್ದನಗೌಡ ನುಡಿದರು. ನಾಗರ ಹುಣಿಸೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಕ್ತಿ ಮಾತೆ ಶ್ರೀ ಸಾರಿ ದುರುಗಮ್ಮ ದೇವಿಯ ನೂತನ ಗರ್ಭಗುಡಿ ಲೋಕಾರ್ಪಣೆ ಮತ್ತು ದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗ್ರಾಮಗಳಲ್ಲಿರುವಾ ದೇವಾಲಯಗಳು ಗ್ರಾಮಸ್ಥರು ಒಗ್ಗೂಡಿ ಗ್ರಾಮದ ಅಭಿವೃದ್ಧಿಗೆ ಚಿಂತನೆ ನೆಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.ಬಳಿಕ ಮಾತನಾಡಿದ ಗ್ರಾ ಪಂ ಸದಸ್ಯರಾದ ಜಿ.ಸೋಮಪ್ಪ.ಗ್ರಾಮಗಳಲ್ಲಿ ಧಾರ್ಮಿಕ ಮಹೋತ್ಸವಗಳು ಆಚರಣೆಗಳು ದೇವರ ಪೂಜಾ ಕಾರ್ಯಗಳು ನೆಡೆಯುವುದರಿಂದ ಗ್ರಾಮದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ.ದೇವಾಲಯಗಳ ಅಭಿವೃದ್ಧಿ ಪಡಿಸುವ ಮೂಲಕ ಗ್ರಾಮದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಸಹಬಾಳ್ವೆ ಜೀವನ ನೆಡೆಸಬೇಕು ಎಂದು ಸಲಹೆ ನೀಡಿದರು.
ಈ ವೇಳೆಯಲ್ಲಿ ಗ್ರಾ ಪಂ ಉಪಾಧ್ಯಕ್ಷರಾದ ಲಕ್ಷ್ಮೀ ತಿಪ್ಪೇಸ್ವಾಮಿ. ಹಿರಿಯರಾದ ಜಿ.ರಾಮಚಂದ್ರಪ್ಪ.ಗ್ರಾ.ಪಂ.ಸದಸ್ಯರಾದ ಕೆ.ತಿಪ್ಪೇಸ್ವಾಮಿ.ಸೋಮಪ್ಪ.ಕೋಟ್ರಪ್ಪನವರ್ ನಾಗರಾಜ್ ಗ್ರಾಮದೇವತೆ ಅರ್ಚಕರಾದ ಒಕ್ಕಳಸೂರಪ್ಪ.ಜಯಣ್ಣ.ಅಂಜಿನಪ್ಪ.ನಿಂಗಪ್ಪ.ವೀರಭದ್ರಯ್ಯ.ಅಂಗಡಿ ನಾಗಪ್ಪ.ನಾಗರಹುಣಸೆ ಗ್ರಾಮದ ಎಲ್ಲಾ ಸ್ಥಳಿಯ ಸಂಘ ಸಂಸ್ಥೆಗಳ ಸದಸ್ಯರು ಊರಿನ ಮುಖಂಡರು ಉಪಸ್ಥಿತರಿದ್ದರು.

ವರದಿ ನಂದೀಶ್ ನಾಯಕ

LEAVE A REPLY

Please enter your comment!
Please enter your name here