ಕಾನಮಡುಗು ಗ್ರಾಮದಲ್ಲಿ ಕನ್ನಡ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ.!

0
161

ಕೂಡ್ಲಿಗಿ:ನ:06:-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಗ್ರಾಮದಲ್ಲಿ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘ ತಿಮ್ಮನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಕನ್ನಡ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಪಂಚದಲ್ಲಿ ಅವನತಿ ಹೊಂದುತ್ತಿರುವ ಭಾಷೆಗಳ ಪಟ್ಟಿಯಲ್ಲಿ ಕನ್ನಡ ಸೇರಿದೆ ಎಂದು ಕನ್ನಡ ವಿಶ್ವವಿದ್ಯಾಲಯ ಸಂಗೀತ ವಿಭಾಗದ ಮುಖ್ಯಸ್ಥ ಪ್ರೊ.ಗೋವಿಂದ ಅವರು ಕಳವಳ ವ್ಯಕ್ತಪಡಿಸಿದರು. ಕನ್ನಡ ಭಾಷೆಗೆ ಪ್ರಾಚೀನ ಇತಿಹಾಸ ಇದೆ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಪ್ರಪಂಚದಲ್ಲಿ ಉನ್ನತ ಸ್ಥಾನವಿದೆ ಇಂತಹ ಸಮೃದ್ಧ ಸಂಸ್ಕೃತಿ ಪರಂಪರೆ ಹೊಂದಿರುವ ಕನ್ನಡ ನಮ್ಮಲ್ಲಿನ ತಾತ್ಸಾರ ಮನೋಭಾವದಿಂದ ಹಾಗೂ ಪರ ಭಾಷೆಯ ವ್ಯಾಮೋಹಕ್ಕೆ ಸಿಲುಕಿ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ ಅಷ್ಟೇ ಅಲ್ಲದೆ ಇತ್ತೀಚೆಗೆ ಕೆಲ ತಜ್ಞರು ಅಧ್ಯಯನ ನಡೆಸಿದ್ದು ಕೆಲವೇ ವರ್ಷಗಳಲ್ಲಿ ಕನ್ನಡ ಭಾಷೆ ನಮ್ಮಿಂದ ದೂರವಾಗಿ ಅಳಿವಿನ ಅಂಚಿಗೆ ಸೇರುತ್ತದೆ ಎಂಬುದು ಕಳವಳಕಾರಿಯಾದ ಸಂಗತಿ ಎಂದರು.

ಸಾಹಿತಿ ಕಲಾವಿದರ ಮಾಸಾಶನ ಮಂಜೂರಾತಿ ಸಮಿತಿ ಸದಸ್ಯ ಡಿ.ಒ.ಮುರಾರ್ಜಿ ಮಾತನಾಡಿ ಕಲೆ ಮತ್ತು ಸಂಸ್ಕೃತಿ ಉಳಿವಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವಾರು ಕಾರ್ಯಕ್ರಮಗಳ ಮೂಲಕ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ ಕಲಾವಿದರು ಯಾವುದೇ ಪ್ರಕಾರದಲ್ಲಿ ಕಲಾ ಸೇವೆ ಮಾಡಿದ್ದರೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿಕೊಂಡು ಐವತ್ತೆಂಟು ವರ್ಷ ಮೇಲಿದ್ದವರು ಕನ್ನಡ ಮತ್ತು ಸಂಸ್ಕೃತಿಗೆ ಮಾಸಾಶನಕ್ಕೆ ಅರ್ಜಿ ಸಲ್ಲಿಸಬೇಂದು ತಿಳಿಸಿದರು. ಜಯವಾಣಿ ಪತ್ರಿಕೆ ಸಂಪಾದಕ ಹುಡೇಂ ಕೃಷ್ಣಮೂರ್ತಿ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಪ್ರತಿಭೆಗಳು ಎಲೆಮರೆ ಕಾಯಿಯಂತೆ ಕಲಾಸೇವೆಯಲ್ಲಿ ತೊಡಗಿದ್ದಾರೆ ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಮುಸ್ಟೂರು ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು ಶರಣ ಬಸವೇಶ್ವರ ದಾಸೋಹ ಮಠದ ಐಮಡಿ ಶರಣಾರ್ಯರು ಸಾನಿಧ್ಯ ವಹಿಸಿದ್ದರು. ಗ್ರಾಮದ ಮುಖಂಡರಾದ ಹನುಮಂತಪ್ಪ, ಬೋರಪ್ಪ, ಹರೀಶ್, ಚನ್ನಬಸಪ್ಪ, ಶರಣಪ್ಪ, ಅಂಜಿನಪ್ಪ, ಬಿ.ದಿನೇಶ್ ಮತ್ತಿತರರು ಉಪಸ್ಥಿತರಿದ್ದರು. ಕಲಾವಿದರಿಂದ ಸುಗಮ ಸಂಗೀತ, ವಚನ ಸಂಗೀತ, ತತ್ವಪದ, ಜಾನಪದ ಸಂಗೀತ, ಭರತನಾಟ್ಯ, ಸಮೂಹ ನೃತ್ಯ ಹಾಗೂ ಕನ್ನಡ ಗೀತೆಗಳ ಗಾಯನ ನಡೆಸಿಕೊಟ್ಟರು. ಗಾಯಕರಾದ ಎಂ.ಕೆ.ಹರೀಶ್, ಮರೇನಹಳ್ಳಿ ಸುಮ, ಓಬಳಶೆಟ್ಟಿಹಳ್ಳಿ ನುಂಕೇಶ್, ಸಕಲಾಪುರದಹಟ್ಟಿ ಯಲ್ಲಪ್ಪ, ಉಡೇವು ನಾಗಾಭೂಷಣ, ಕುರಿಹಟ್ಟಿ ರಾಜು, ಹಾರಕಬಾವಿ ಕುಮಾರ, ಮಾಳೇಹಳ್ಳಿ ತಿಪ್ಪೇಶ್, ಹಿರೇಹಳ್ಳಿ ನವೀನ್, ಸಿದ್ದೇಶ್, ಕಾನಾಮಡುಗು ಮಂಜಣ್ಣ, ನಾಯಕನಹಟ್ಟಿ ವಿರೇಶ್ ಕೀಬೋರ್ಡ್ ವಾದಕ ಕಾನಾಮಡುಗು ಕರಿಯಪ್ಪ, ತಬಲಾ ವಾದಕ ನರಸಿಂಹ ಮೂರ್ತಿ, ರಿದಂ ಪ್ಯಾಡ್ ಮಲ್ಲೂರಹಳ್ಳಿ ಶಿವಕುಮಾರ್, ಗಾಯನ ಹಾಗೂ ಸಂಗೀತ ಬಳಗದಲ್ಲಿದ್ದರು. ಎಂ.ಕೆ.ಹರೀಶ್ ಸ್ವಾಗತಿಸಿ ತಿಮ್ಮನಹಳ್ಳಿ ಡಿ.ಬಿ.ನಿಂಗರಾಜ್ ವಂದಿಸಿದರು.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here