ಯುವಕರು ಸ್ವ ಉದ್ಯೋಗದೊಂದಿಗೆ ಸ್ವಾವಲಂಬಿಗಳಾಗಿ-ಶಾಸಕ ಈ.ತುಕರಾಂ

0
89

ಸಂಡೂರು :ತಾಲೂಕಿನಾದ್ಯಂತ ಕೌಶಲ್ಯ ಅಭಿವೃದ್ದಿ ಮಾಡುವಂತಹ ಮಹತ್ತರ ಯೋಜನೆಯನ್ನು ರೂಪಿಸಿದ್ದು ಅದಕ್ಕೆ ಪೂರಕವಾದ ರೀತಿಯಲ್ಲಿ ಇಂದು ಯುವಕರಿಗೆ ಲ್ಯಾಪ್ ಟ್ಯಾಪ್ ತರಬೇತಿ ಮತ್ತು ಉಚಿತವಾಗಿ ಲ್ಯಾಪ್ ಟಾಪ್‍ಗಳನ್ನು ವಿತರಿಸುತ್ತಿದ್ದು ಅದನ್ನು ಪೂರ್ಣ ಪ್ರಮಾಣದಲ್ಲಿ ಸದುಪಯೋಗ ಪಡಿಸಿಕೊಂಡು ಸ್ವ ಉದ್ಯೋಗಿಗಳಾಗಬೇಕು ಎಂದು ಶಾಸಕ ಈ.ತುಕರಾಂ ಕರೆನೀಡಿದರು.

ಅವರು ಪಟ್ಟಣದ ತಾಲೂಕು ಪಂಚಾಯಿತಿಯ ಅವರಣದಲ್ಲಿ ಜಿಲ್ಲಾ ಖನಿಜ ನಿಧಿ, ತಾಲೂಕು ಪಂಚಾಯಿತಿ ಅಡಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಲ್ಯಾಪ್ ಟಾಪ್ ವಿತರಿಸಿ ಮಾತನಾಡಿ ಯಾರೂ ಸಹ ಎರಡು ಬಾರಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬಾರದು, ಈಗಾಗಲೇ ಪಡೆದವರು ಮತ್ತೋಮ್ಮೆ ಪಡೆದುಕೊಳ್ಳದೇ ಇಲ್ಲದವರಿಗೆ ನೀಡುವಂತಹ ವ್ಯವಸ್ಥೆ ಯಾಗಬೇಕು, ಅಲ್ಲದೆ ಜಿಲ್ಲಾ ಖನಿಜ ನಿಧಿಯಿಂದ ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಟೈಲರಿಂಗ್ ತರಬೇತಿ, ಕೆಲ ಯುವಕರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಿಕೆ,ಉಚಿತ ಟೈಲರಿಂಗ್ ಯಂತ್ರಗಳನ್ನು ಪಂಚಾಯಿತಿ ಹಂತದಲ್ಲಿ ನೀಡಲಾಗಿದೆ, ಒಟ್ಟಾರೆಯಾಗಿ ಇಡೀ ತಾಲೂಕನ್ನೂ ಕೌಶಲ್ಯ ಅಭಿವೃದ್ದಿ ಮಾಡಿ ಸ್ವ ಉದ್ಯೋಗ ಮಾಡಲು ಜವಳಿ ಉದ್ಯಮ ಪ್ರಾರಂಭ ಮಾಡುವ ಎಲ್ಲಾ ಯೋಜನೆಯನ್ನು ರೂಪಿಸಲಾಗುತ್ತಿದ್ದು ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು, ಅದರಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸಮಯದ ಸದುಪಯೋಗದ ಜೊತೆಗೆ ಕಂಪ್ಯೂಟರ್ ಕಲಿಕೆಯಲ್ಲಿ ಪ್ರಾವಿಣ್ಯತೆಯನ್ನು ಪಡೆದುಕೊಂಡು ಸ್ವ ಉದ್ಯೋಗ ಮಾಡಿ ಎಂದು ಕರೆನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಅರ್. ಪ್ರಕಾಶ್ ಅವರು ಮಾಹಿತಿ ನೀಡಿ ತಾಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲಿ ಅಸಕ್ತ ಯುವಕರಿಗೆ ತರಬೇತಿಯನ್ನು ನೀಡಲಾಗಿದೆ ಅದರಲ್ಲಿ ಪ್ರಮುಖವಾಗಿ ಗ್ರಾಮ ಪಂಚಾಯಿತಿಗಳಾಗದ ದರೋಜಿ :77, ಕಾಳಿಂಗೇರಿ 20, ಹೆಚ್.ಕೆ. ಹಳ್ಳಿ 74, ಅಗ್ರಹಾರ 26, ಸೋವೆನಹಳ್ಳಿ 25, ಕೃಷ್ಣಾನಗರ 27, ಸುಶೀಲಾನಗರ 67, ದೇವಗಿರಿ 48, ನರಸಿಂಗಾಪುರ 27, ಭುಜಂಗನಗರ 72, ಯಶವಂತನಗರ 53, ನಿಡಗುರ್ತಿ 56, ಬಂಡ್ರಿ 29, ಬೊಮ್ಮಘಟ್ಟ 25, ಚೋರುನೂರು 48, ಯರ್ರಯ್ಯನಹಳ್ಳಿ 47, ತೋರಣಗಲ್ಲು 13, ವಡ್ಡು 37, ತಾಳೂರು 16, ತಾರಾನಗರ 38, ಬನ್ನಿಹಟ್ಟಿ 20, ಗೊಲ್ಲಲಿಂಗಮ್ಮನಹಳ್ಳಿ 122, ವಿಠಲಾಪುರ 50, ಅಂತಾಪುರ 66, ಮೆಟ್ರಿಕಿ 28, ರಾಜಾಪುರ 26 ಒಟ್ಟು 1137 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿತ್ತು, ಅದರಲ್ಲಿ ಪರೀಕ್ಷೆಯನ್ನು ನಡೆಸಿ ತರಬೇತಿಯನ್ನು ಪೂರ್ಣಗೊಳಿಸಿದ ಮತ್ತು ಉತ್ತಮ ಪರೀಕ್ಷೆ ಬರೆದ 226 ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಅವರಿಗೆ ಉಚಿತವಾಗಿ ಇಂದು ಲ್ಯಾಪ್ ಟಾಪ್‍ಗಳನ್ನು ವಿತರಣೆ ಮಾಡಲಾಗಿದೆ, ದರೋಜಿ :15, ಕಾಳಿಂಗೇರಿ 4, ಹೆಚ್.ಕೆ. ಹಳ್ಳಿ 15, ಅಗ್ರಹಾರ 5, ಸೋವೆನಹಳ್ಳಿ 5, ಕೃಷ್ಣಾನಗರ 5, ಸುಶೀಲಾನಗರ 13, ದೇವಗಿರಿ 10, ನರಸಿಂಗಾಪುರ 5, ಭುಜಂಗನಗರ 14, ಯಶವಂತನಗರ 11, ನಿಡಗುರ್ತಿ 11, ಬಂಡ್ರಿ 6, ಬೊಮ್ಮಘಟ್ಟ 5, ಚೋರುನೂರು 10, ಯರ್ರಯ್ಯನಹಳ್ಳಿ 9, ತೋರಣಗಲ್ಲು 3, ವಡ್ಡು 7, ತಾಳೂರು 3, ತಾರಾನಗರ 8, ಬನ್ನಿಹಟ್ಟಿ 8, ಗೊಲ್ಲಲಿಂಗಮ್ಮನಹಳ್ಳಿ 24, ವಿಠಲಾಪುರ 10, ಅಂತಾಪುರ 13, ಮೆಟ್ರಿಕಿ 6, ರಾಜಾಪುರ 5 ವಿದ್ಯಾರ್ಥಿಗಳು ಆಯ್ಕೆಯಾಗಿ ಇಂದು ಲ್ಯಾಪ್ ಟಾಪ್ ಪಡೆದುಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ವಡ್ಡು ಕ್ಷೇತ್ರದ ಜನಾರ್ಧನ್ ಮಾತನಾಡಿ ಯುವಕರು ಪೂರ್ಣ ಪ್ರಮಾಣದಲ್ಲಿ ಸದುಪಯೋಗ ಪಡೆದುಕೊಳ್ಳುವ ಮೂಲಕ ಮೊಬೈಲ್ ಗೀಳಿನಿಂದ ಹೊರಬಂದು ಅನ್‍ಲೈನ್ ತರಗತಿಗಳಿಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಲೂಕು ಪಂಚಾಯಿತಿಯ ರೋಷನ್, ವ್ಯವಸ್ಥಾಪಕ ಲೋಕೇಶ್ ಬಾಬು, ಫಲಾನುಭವಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here