ಯಶವಂತನಗರದಲ್ಲಿ ಕರೋನಾ ಲಸಿಕೆ ಅಭಿಯಾನ

0
191

ಸಂಡೂರು:ಯಶವಂತನಗರದ 2ನೇ ಅಂಗನವಾಡಿ ಕೇಂದ್ರದಲ್ಲಿ 160 ಜನರಿಗೆ ಕರೋನಾ ಲಸಿಕೆಯನ್ನು ಹಾಕಲಾಯ್ತು

ಇದಕ್ಕೂ ಮುನ್ನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮದ ಮನೆ ಮನೆಗೆ ತೆರಳಿ ಕರೋನಾದಂತಹ ಮಹಾಮಾರಿಯು ದೇಶದ ತುಂಬಾ ವ್ಯಾಪಕವಾಗಿ ವ್ಯಾಪಿಸುತ್ತಿದೆ ಅದನ್ನು ತಡೆಯಬೇಕಾದರೆ 45 ವರ್ಷ ಮೇಲ್ಪಟ್ಟವರು ಎಲ್ಲರೂ ತಪ್ಪದೆ ಕರೋನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮಾಸ್ಕನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಮನೆಗಳಲ್ಲಿನ ಪ್ರತಿಯೊಬ್ಬರಿಗೂ ಮನವರಿಕೆ ಮಾಡಲಾಯಿತು

ಈ ಸಂಧರ್ಭದಲ್ಲಿ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪದ್ಮಾವತಿ, ಧರಣಿ, ಸಹಾಯಕರಾದ ಅಮ್ಜದ್ ಅಲಿ, ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಕವಿತಾ, ಪವಿತ್ರಾ, ಮಲ್ಲಮ್ಮ, ಶಿವಗಂಗಮ್ಮ, ನಿಂಗಮ್ಮ, ಹನುಮಕ್ಕ,, ಶಾರದಾ, ಹಾಗೂ
ಆಶಾ ಕಾರ್ಯಕರ್ತೆಯರಾದ ನಿರ್ಮಲ, ಕಮಲ, ಸುನಂದಾ, ಭಾಗ್ಯ, ವಸಂತ, ಭಾಗ್ಯ,ಅವರುಗಳು ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here