ವೈರಸ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಹೋಗಲಾಡಿಸಲು ಶತಮಾನಗಳೇ ಬೇಕಾಯಿತು.

0
164

ಇವತ್ತು ಜಗತ್ತು ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದಿದ್ದರೂ ಇಂತಹ ಕರೋನಾವೈರಸ್ ನಂತಹ ಹಲವಾರು ಸಾಂಕ್ರಾಮಿಕರೋಗಗಳನ್ನು ಹೋಗಲಾಡಿಸಲು ಈ ಹಿಂದಿನಿಂದಲೂ ಲಸಿಕೆಗಳನ್ನು ಕಂಡುಹಿಡಿದು ವೈರಸ್ಗಳನ್ನು ಪೂರ್ಣಪ್ರಮಾಣದಲ್ಲಿ ಹೋಗಲಾಡಿಸಲು ಶತಮಾನಗಳೇ ಬೇಕಾಯಿತು.

ಹೀಗಿರುವಾಗ ಅಂದು ಜಗತ್ತು ಎಷ್ಟು ವಿಸ್ತಾರವಾಗಿತ್ತು ಇಂದು ಕೂಡ ಅಷ್ಟೇ ಇದೆ. ಅಲ್ಲದೆ ವೈಜ್ಞಾನಿಕವಾಗಿ ಅವಲೋಕಿಸಿದಾಗ ಹಿಂದಿನ ಜಗತ್ತಿನ ವಿಜ್ಞಾನಕ್ಕೂ ಇಂದಿನ ಜಗತ್ತಿನ ವಿಜ್ಞಾನಕ್ಕೂ ಅವಲೋಕಿಸಿದಾಗ ಇಂದು ವಿಜ್ಞಾನವು ಅದು ವೈದ್ಯಕೀಯ ಕ್ಷೇತ್ರವಾಗಿರಲಿ ತಾಂತ್ರಿಕ ಕ್ಷೇತ್ರವಾಗಿರಲಿ ಮತ್ಯಾವುದೇ ಇರಲಿ. ಗಾಳಿಯ ವೇಗದಲ್ಲಿ ಮುಂದುವರೆಯುತ್ತಿದೆ.

ಇಲ್ಲಿ ನಾವು ಮುಖ್ಯವಾಗಿ ಚರ್ಚಿಸುವ ವಿಷಯವೇನೆಂದರೆ. ಜಗತ್ತಿನ ಜನಸಂಖ್ಯೆಗೆ ಹೋಲಿಸಿದಾಗ ಈ ಹಿಂದಿನ ಶತಮಾನಗಳ ಜಗತ್ತಿನ ಜನಸಂಖ್ಯೆಗೂ ಇತ್ತೀಚಿನ ಜಗತ್ತಿನ ಜನಸಂಖ್ಯೆಗೆ ಹೋಲಿಸಿದಾಗ ಅದರಲ್ಲೂ ನಮ್ಮ ಭಾರತ ದೇಶವನ್ನೇ ತೆಗೆದುಕೊಳ್ಳೋಣ.ಅಂದರೆ ಇಷ್ಟೇ ಪ್ರತಿಯೊಂದು ರಾಷ್ಟ್ರದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತ ಹೋದಂತೆ ಇಂದು ಜಗತ್ತು ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದಿದ್ದರೂ ಇಂತಹ ಕೊರೋನಾ ದಂತಹ ವೈರಸ್ ಹತೋಟಿಗೆ ತರಬೇಕಾದರೆ ಲಸಿಕೆಯ ಸಂಶೋಧನೆ ಅಗತ್ಯ. ಆದರೂ ಅದು ಬೇಗ ಆಗುವ ಕೆಲಸವಲ್ಲ.ಇಂದು ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಈ ಕರೋನ ಎನ್ನುವ ವೈರಸ್ ಸೂಕ್ಷ್ಮಾಣು ಜೀವಿ ಇಡೀ ಮನುಕುಲವನ್ನೇ ತಲ್ಲಣಗೊಳಿಸಿದೆ ಆದರೂ ಇದನ್ನು ಹೋಗಲಾಡಿಸಲು ದೊಡ್ಡ ಸಮಸ್ಯೆಯೇನಲ್ಲ.

ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ಕೊರೋನಾವೈರಸ್ ನ ಬಗ್ಗೆ ಜನರಲ್ಲಿ ಇರುವ ಅಭಿಪ್ರಾಯಗಳು ಬಹುತೇಕ ವ್ಯತಿರಿಕ್ತವಾದ ಅಭಿಪ್ರಾಯಗಳಿಂದ ಕೂಡಿರುತ್ತವೆ ಅವುಗಳೆಂದರೆ ಇದೊಂದು ಭಯಾನಕ ರೋಗ ಭಯಂಕರವಾದ ಸೂಕ್ಷ್ಮ ವೈರಸ್ ಇದು ವಾಸಿಯಾಗದ ಕಾಯಿಲೆ.ಇದು ಮತ್ತೊಬ್ಬರಿಂದ ಮತ್ತೊಬ್ಬರಿಗೆ ಯಾವ ರೀತಿ ಹರಡುತ್ತದೆ ಎಂಬಿತ್ಯಾದಿ ತಪ್ಪು ಕಲ್ಪನೆಗಳು ಮೂಡಲು ಕಾರಣ ಜನತೆಯಲ್ಲಿ ಅಕ್ಷರ ಜ್ಞಾನವಿಲ್ಲದಿರುವುದು ಅವರಲ್ಲಿರುವ ಮೌಡ್ಯತೆ ವೈರಸ್ ನ ಬಗ್ಗೆ ತಪ್ಪು ಭಾವನೆಗಳು ಇವೆಲ್ಲವುಗಳನ್ನು ಮೆಟ್ಟಿ
ಈ ವೈರಸ್ ನಂತಹ ಸಾಂಕ್ರಾಮಿಕ ರೋಗಗಳನ್ನು ಅದು ಯಾವುದೇ ದೇಶವಿರಲಿ ಯಾವುದೇ ಸರ್ಕಾರವಿರಲಿ ಹತೋಟಿಗೆ ತರುವುದು ದುಸ್ಸಾಹಸವೇ ಸರಿ.

ಮುಖ್ಯವಾಗಿ ಬೇಕಾಗಿರುವುದು ಜನರಲ್ಲಿ ಅರಿವು ಮೂಡಿಸುವುದು ಅಗತ್ಯ.ಆದ್ದರಿಂದ ಪ್ರತಿಯೊಬ್ಬ ನಾಗರಿಕರಾದ ನಾವು ಕಡ್ಡಾಯವಾಗಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವ ಮೂಲಕ ವೈದ್ಯರು ತಿಳಿಸುವ ಮುಂಜಾಗ್ರತ ಕ್ರಮಗಳನ್ನು ಪ್ರತಿಯೊಬ್ಬ ಪಾಲಿಸುತ್ತಾ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ .ಇಂಗ್ಲಿಷಿನ ಒಂದು ಗಾದೆಯಂತೆ Health is wealth …ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಪ್ರತಿಯೊಬ್ಬರೂ ಜಾಗರೂಕರಾಗೊಣಾ.

✍…ವೀರೇಶ ಪಾಟೀಲ
ವಕೀಲರು ಕೂಡ್ಲಿಗಿ

LEAVE A REPLY

Please enter your comment!
Please enter your name here