ಶ್ರೀಮತಿ ವಸಂತಲಕ್ಷೀ ರವರ ಸ್ಮರಣಾರ್ಥವಾಗಿ ಸಸಿಗಳ ನೆಡುವ ಕಾರ್ಯ

0
181

ಸಿಂಧನೂರಿನ ಸಿದ್ಧಪರ್ವತ ಅಂಬಾದೇವಿ ದೇವಸ್ಥಾನದಿಂದ ಸೋಮಲಾಪೂರ ರಸ್ತೆಯ ಮದ್ಯದ ಡಿವೈಡರ್ ಗೆ ವನಸಿರಿ ಫೌಂಡೇಶನ್ ರಾಯಚೂರು(ರಿ) ರಾಜ್ಯ ಘಟಕ ಸಹಯೋಗದಲ್ಲಿ ಹಾಗೂ ಡಾ.ಆರ್.ಎಲ್.ರಮೇಶ ಬಾಬು (ಶ್ರೀಭಗವತಿ ಭಗವಾನ್ ರೈಸ್ ಇಂಡ್ರಸ್ಟ್ರೀಜ್),ಶ್ರೀ ವೀರೇಶ ಸಾನಬಾಳ ಸಿಂಧನೂರು ಎ.ಪಿ.ಎಂ.ಸಿ.ವರ್ತಕರ,ಗೆಳೆಯರ ಬಳಗ ಶ್ರೀಮತಿ ವಸಂತಲಕ್ಷೀ ರವರ ಸ್ಮರಣಾರ್ಥವಾಗಿ 2350 ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಪರಮಪೂಜ್ಯ ಸದಾನಂದ ಶಿವಶರಣರು ಸಸಿಗೆ ನೀರು ಹಾಕಿ ಚಾಲನೆ ನೀಡಿದರು.ಇದೇ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವನಗೌಡ ಗೊರೆಬಾಳ ವನಸಿರಿ ಫೌಂಡೇಶನ್ ನಮ್ಮ ಸಿಂಧನೂರು ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಹಾಗೂ ರಾಜ್ಯ, ರಾಷ್ಟ ಮಟ್ಟದಲ್ಲಿ ಹೆಸರುವಾಸಿಯಾಗಿರುವುದು ತುಂಬಾ ಸಂತೋಷದ ವಿಷಯ.ಪ್ರತಿಯೊಂದು ದೇವಸ್ಥಾನ, ಶಾಲೆಗಳಲ್ಲಿ ಈ ರೀತಿಯಾಗಿ ಸಸಿನೆಟ್ಟು ಪೋಷಿಸುವ ಜವಾಬ್ದಾರಿಯನ್ನು ನೀಡುತ್ತ ರಾಜ್ಯದಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ ಈ ಕಾರ್ಯ ಹೀಗೆ ಮುಂದುವರೆಯಲಿ ಇವರಿಗೆ ನಮ್ಮ ಸಹಕಾರ ಸದಾಕಾಲ ನೀಡುತ್ತೇವೆ ಎಂದರು.

ಈ ಸಂಧರ್ಭದಲ್ಲಿ ವನಸಿರಿ ಫೌಂಡೇಶನ್ ಗೌರವ ಅದ್ಯಕ್ಷರಾದ ಶಂಕರಗೌಡ ಎಲೆಕೂಡ್ಲಿಗಿ, ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಯುವ ಮುಖಂಡರಾದ ವೀರೇಶ ಸಾನಬಾಳ, ಸಿದ್ದು ಹೂಗಾರ,ಪಿಡಬ್ಲೂಡಿ ಇಂಜಿನಿಯರ್ ಪಾಂಡುರಂಗ, ಹಾಗೂ ವನಸಿರಿ ಫೌಂಡೇಶನ್ ಸದಸ್ಯರಾದ ಶರಣೇಗೌಡ ಹೆಡಗಿನಾಳ,ಚನ್ನಪ್ಪ ಕೆ.ಹೊಸಳ್ಳಿ ,ಚಂದ್ರು ಪವಾಡಶಟ್ಟಿ, ರಾಜು ಮಲ್ಲಾಪೂರ, ಕರ್ನಾಟಕ ಭೂ ಸಂರಕ್ಷಣಾ ಸಿಂಧನೂರು ತಾಲೂಕ ಅದ್ಯಕ್ಷರಾದ ಮುದುಯಪ್ಪ ಹೊಸಳ್ಳಿ ಕ್ಯಾಂಪ್, ರಮೇಶ ಮಲ್ಲಾಪೂರ, ಶಿವರಾಜ ಮಲ್ಲಾಪೂರ,ರಾಜು ಬಳಗಾನೂರ, ವೀರಭದ್ರಸ್ವಾಮಿ ತಿಮ್ಮಾಪೂರ,ವೆಂಕಟರಡ್ಡಿ ಇನ್ನಿತರರು ಉಪಸ್ಥಿತರಿದ್ದರು.

ವರದಿ: ಅವಿನಾಶ್ ದೇಶಪಾಂಡೆ

LEAVE A REPLY

Please enter your comment!
Please enter your name here