ಕಾರುಣ್ಯಾಶ್ರಮಕ್ಕೆ ಶಾಸಕ ನಾಡಗೌಡರ ಭೇಟಿ,ವೃದ್ದರ ಯೋಗ ಕ್ಷೇಮ ವಿಚಾರಣೆ

0
107

ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀ ಮಠ ಸೇವಾ ಟ್ರಸ್ಟ್ (ರಿ )ಹರೇಟನೂರು ಕಾರುಣ್ಯ ನೆಲೆವೃದ್ದಾಶ್ರಮ ಮತ್ತು ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಕಾರುಣ್ಯ ಶ್ರೀ ವೆಂಕಟರಾವ್ ನಾಡಗೌಡ್ರು ಜನಪ್ರಿಯ ಶಾಸಕರು ಮತ್ತು ಮಾಜಿಸಚಿವರು ಸಿಂಧನೂರು ವಿಧಾನಸಭಾ ಕ್ಷೇತ್ರ ಕರ್ನಾಟಕ ಸರಕಾರ ಬೆಂಗಳೂರು ಇವರು ಭೇಟಿ ನೀಡಿ ಎಲ್ಲಾ ವೃದ್ಧರ ಮತ್ತು ಬುದ್ದಿಮಾಂಧ್ಯರ ಯೋಗಕ್ಷೇಮವನ್ನು ವಿಚಾರಿಸಿ ಎಲ್ಲಾ ವೃದ್ಧರು ಮತ್ತು ಬುದ್ದಿಮಾಂದ್ಯರಿಗೆ ಕರೋನ ಹಿನ್ನೆಲೆಯಲ್ಲಿ “ಮಾಸ್ಕ್ ಹಾಗೂ ಸ್ಯಾನಿ ಟೈಜರ್ “ವಿತರಿಸಿ ಕೋವಿಡ್-19 ಬಗ್ಗೆ ಜಾಗೃತಿ ಅರಿವು ಮೂಡಿಸಿ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ತಕ್ಷಣ ಕಾರುಣ್ಯ ಆಶ್ರಮಕ್ಕೆ ಸರಕಾರದ ಸವಲತ್ತುಗಳನ್ನು ಒದಗಿಸುವಂತೆ ಸೂಚನೆ ನೀಡಿದರು. ನಂತರ ಆಶ್ರಮದ ಸೇವೆಯ ಬಗ್ಗೆ ಇಂದು ರಾಯಚೂರಿಗೆ ಉಪಮುಖ್ಯಮಂತ್ರಿಗಳು ಬರುತ್ತಾರೆ ಅವರ ಹತ್ತಿರವೂ ಕೂಡ ಶ್ರೀ ಮಠ ಸೇವಾ ಟ್ರಸ್ಟ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರುಣ್ಯ ಆಶ್ರಮದ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಆದಷ್ಟು ಬೇಗನೆ ಆಶ್ರಮದ ಕಷ್ಟಗಳನ್ನು ಪರಿಸುತ್ತೇನೆ ಎಂದು ಭರವಸೆ ನೀಡಿದರು. ನಂತರ ಶ್ರೀ ಮಠ ಸೇವಾ ಟ್ರಸ್ಟ್ (ರಿ )ಹರೇಟನೂರು ಕಾರುಣ್ಯ ಆಶ್ರಮದ ವತಿಯಿಂದ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ಶ್ರೀ ವೀರೇಶ ಯಡಿಯೂರುಮಠ ಜಂಗಮ ಸಮಾಜದ ಮುಖಂಡರು ಸಿಂಧನೂರು ಹಾಗೂ ಆಶ್ರಮದ ಆಡಳಿತಾಧಿಕಾರಿಗಳಾದ ಶ್ರೀ ಚನ್ನಬಸವ ಸ್ವಾಮಿ ಹಿರೇಮಠ ಹರೇಟನೂರು ಮೇಲ್ವಿಚಾರಕರಾದ ಶ್ರೀ ಮತಿ ಸುಜಾತ ಚನ್ನಬಸವ ಸ್ವಾಮಿ ಹಿರೇಮಠ ಶ್ರೀ ಮಹೇಶ ವಿಶ್ವಕರ್ಮ ಸೇವಾಕರ್ತರು ಶ್ರೀ ಮರಿಯಪ್ಪ ನಾಯಕ ಸೇವಾಕರ್ತರು ಶ್ರೀ ಪಂಪಯ್ಯ ಸ್ವಾಮಿ ಜವಳಗೇರ ಸೇವಾಕರ್ತರು ಶ್ರೀ ಸಂಗನಗೌಡ ಗೋನವಾರ ಸೇವಾಕರ್ತರು ಇದ್ದರು.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here