ಬಡ ರೈತನ ಮಗಳಾಗಿ ಸಮಾಜ ಸೇವೆ ಜೊತೆಗೆ,ಬಡಮಕ್ಳಳಿಗೆ ಜ್ಞಾನ ದಾಸೋಹಿನಿಯಾದ ಕು:ಬಿಂದು. ಶಿಕ್ಷಕಿ.

0
508

“ನಾವು ಮಾನವರಾಗಿ ಧರೆಗೆಳ್ಳಿದು ಬಂದ ಮೇಲೆ ಜನನವೇಂಬ ಹೆಸರಿನಿಂದ ನಾಮಕರಣ ಮಾಡಿ ಕೊಳ್ಳುವುದ್ದರ ಜೊತೆಗೆ ಬಾಲಕ, ಶಿಕ್ಷಣ, ಮದುವೆ, ಜೀವನ ಮಾಡಿಕೊಂಡು ಮರಣವೆಂಬ ಮೂರು ಅಕ್ಷರದಿಂದ ಬಿರುದನ್ನು ತೆಗೆದುಕೊಂಡು ಮರಣ ಹೊಂದುತ್ತೆವೆ. ನಾವು ಮನುಷ್ಯರಾಗಿ ಮರಣವೆಂಬ ಮೂರು ಅಕ್ಷರ ಬಿರುದನ್ನು ಪಡೆಯುವುದಕ್ಕಿಂತ ಮುಂಚಿತವಾಗಿ ನಾವು ಶಿಕ್ಷಣ, ಸಾಹಿತ್ಯ, ಧಾರ್ಮಿಕ, ಸಮಾಜ ಸೇವೆ, ಇನ್ನೂ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಇಲ್ಲವಾದರೆ ನಾವು ಇನ್ನೊಬ್ಬರಿಗೆ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಬಡವರಿಗೆ ಮಾರ್ಗದರ್ಶಿಯಾಗಿ ಏನಾದರೊಂದು ಸಹಾಯ ಸಹಕಾರ ಮಾಡಿ ಸಮಾಜ ಸೇವಕರುವೇಂಬ ಬಿರುದನ್ನು ತೆಗೆದುಕೊಂಡು ಮರಣ ಹೊಂದಿದರೆ. ನಾವು ಮುಂದಿನ ಜನ್ಮದಲ್ಲಿ ಮತ್ತೆ ಹುಟ್ಟಿ ಬರುತ್ತೆವೆಂಬ ಹಿರಿಯರಲ್ಲಿ ಒಂದು ವಾಡಿಕೆ ಆಗಿರುತ್ತದೆ. ಏಕೆಂದರೆ! ಸಮಾಜ ಸೇವಕವೆಂಬ ಶಬ್ದ ತುಂಬಾ ಮಹತ್ವ ಆಗಿರುತ್ತದೆ. ಈ ಸಮಾಜ ಸೇವೆಕನಿಗೆ ದೇವರ ಕೃಪೆ ಯಾವಾಗಲೂ ಸದಾಕಾಲವೂ ಇರುತ್ತದೆ. ಆದರೆ ಕೆಲವು ಸಮಯದಲ್ಲಿ ಭಗವಂತನಿಗೆ ಕೂಡ ತಿಳಿಯಲಾರದ ವಿಷಯ ಏಕೆಂದರೆ! ಸಮಾಜ ಸೇವಕ ಎಂಬ ಅಕ್ಷರಕ್ಕೆ ಭಗವಂತನು ಕೂಡ ಆಚಾರ್ಯ ಪಡುವುದೊಂದು
ಸಂಗತಿ ಅಂತಹ ಹೇಳಬಹುದು. ಕೆಲವರು ಇರುತ್ತಾರೆ ಅನವಶ್ಯಕವಾಗಿ ಮಾತುಗಳನ್ನು ಮಾತನಾಡುವವರು ಇರುತ್ತಾರೆ. ಇಂತಹ ವ್ಯಕ್ತಿಗಳ ಬಗ್ಗೆ ಯಾವುದನ್ನೂ ತಮ್ಮ ಕಿವಿಗೆ ಹಾಕಿ ಕೊಳ್ಳದೆ ಹಾಗೂ ಮನಸ್ಸಿನಲ್ಲಿ ಇಟ್ಟು ಕೊಳ್ಳದೆ ಸಮಾಜ ಸೇವೆ ಮುಂದಾಗುತ್ತಾರೆ ಬನ್ನಿ, ಹಾಗಾದರೆ ದಾವಣಗೆರೆ ಜಿಲ್ಲೆಯವರಾದ,
‘ಕು: ಬಿಂದುರವರು ತನ್ನ 26 ನೇ ವಯಸ್ಸಿನಲ್ಲೇ ಸಮಾಜ ಸೇವಕಿಯಾಗಿ ಬಡಮಕ್ಳಳಿಗೆ ಉಚಿತ ಪಾಠವನ್ನು ಬೋಧನೆ ಮಾಡಿ ಹಲವು ರಂಗಗಳಲ್ಲಿ ಸಾಧನೆ ಮಾಡಿಕೊಳ್ಳುವುದರ ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದು ಕೊಂಡು ಸಮಾಜ ಸೇವಕಿ ಎಂಬ ಬಿರುದನ್ನು ಪಡೆದ. ಕು: ಬಿಂದು ಆರ್. ಡಿ. ಇದರೆ ಇಂತಹ ಪ್ರತಿಭಾವಂತ ಮಹಿಳೆ ಇರಬೇಕು. ಅದು ಏನೆ ಬಂದರು ನಾನು ಧೈರ್ಯದಿಂದ ಹೆದರಿಸಲೇ ಬೇಕೆಂಬ ಆತ್ಮ ವಿಶ್ವಾಸ ಇದ್ದರೆ ಮಾತ್ರ ಮುಂದೆ ಬರಲು ಸಾದ್ಯವೆಂದು ಅಂದುಕೊಂಡವರು “ಬಿಂದು ಆರ್.ಡಿ. ರಾಂಪುರ.” ಇವರ ತಂದೆಯ ಹೆಸರು: ದೇವೆಂದ್ರಪ್ಪ, ತಾಯಿ: ಶ್ರೀ ಮತಿ ಲತಾ. ಇವರಿಗೆ ಮೊದಲನೇ ಮಗಳಾಗಿ ದಿನಾಂಕ: 1994 ರಲ್ಲಿ ದಾವಣಗೆರೆ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಕುಗ್ರಾಮ, ಕೇವಲ 40 ಮನೆಗಳಿರುವ ಪುಟ್ಟ ಕುಗ್ರಾಮ ಹೆಚ್ ರಾಂಪುರ(ಮಾಯಕೊಂಡ ಹೋಬಳಿ) ಜನಿಸಿದರು, ಇಂದಿಗೂ ಸಹ ಯಾವುದೇ ರಸ್ತೆ ಬಸ್ ಸಂಪರ್ಕ ವ್ಯವಸ್ಥೆ ಈ ಗ್ರಾಮಕ್ಕೆ ಸರಿಯಾಗಿ ಇಲ್ಲ, ನಂತರ, ತಮ್ಮ ಪ್ರಾಥಮಿಕ ಶಾಲೆಯನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಶಿವಪುರ ಗ್ರಾಮದಲ್ಲಿ ಕಲಿತ ಬಳಿಕ, ತಮ್ಮ ಪ್ರೌಢಶಾಲೆಯನ್ನು ಶ್ರೀ ನುಲಿಯ ಚಂದ್ರಯ್ಯ ಪ್ರೌಢ ಶಾಲೆ ಶಿವಪುರದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು.
ಮುಂದಿನ ಶಿಕ್ಷಣವನ್ನು ಬಿ, ಎಲ್ ಆರ್ ಪಿ,ಯು ಕಾಲೇಜು ಸಿರಿಗೆರೆ, ಎಂ ಬಿ ಆರ್ ಡಿಗ್ರಿ ಕಾಲೇಜು ಸಿರಿಗೆರೆಯಲ್ಲಿ ಪದವಿ ಮುಗಿದ ನಂತರ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ ಮಲ್ಲಾಡಿಹಳ್ಳಿ ಬಿಇಡಿ
ಮುಗಿಸಿ ಕೊಂಡು. ಹಾಗೂ ಅರ್ಥಶಾಸ್ತ್ರವನ್ನು ದಾವಣಗೆರೆಯ ವಿಶ್ವವಿದ್ಯಾಲಯ, ತೋಳುಹುಣಸೆಯಲ್ಲಿ, ಮತ್ತು ರಾಜ್ಯಶಾಸ್ತ್ರ ವಿಷಯದಲ್ಲಿ ಎಂ ಎ ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರುನಿಂದ ಪಡೆದು, ಆನಂತರ ಅತಿಥಿ ಶಿಕ್ಷಕಿಯಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹಚ್ಚೂಳ್ಳಿ ಶಿರಗೊಪ್ಪ ತಾ ಬಳ್ಳಾರಿ ಜಿಲ್ಲೆಯಲ್ಲಿ ಶಿಕ್ಷಕಿಯಾಗಿ
ಕೆಲಸವನ್ನು ಮಾಡುತ್ತಾಳೆ. ಇವರು ಪ್ರಾಥಮಿಕ ಶಾಲೆಯನ್ನು ಕಲಿಯುವಾಗಲೆ ಸಾಹಿತ್ಯದ ಬಗ್ಗೆ ತುಂಬಾ ಆಸಕ್ತಿ ತೋರಿಸಿ ಕಥೆ ಕವನ ಹಾಗೂ ಬರೆಯುವುದರ ಜೊತೆಗೆ ಬಡ ಮಕ್ಕಳಿಗೆ ಉಚಿತವಾಗಿ ಪಾಠವನ್ನು ಮಾಡುವುದರ ಜೊತೆಗೆ, ತಮ್ಮ ಊರಿನ ರಸ್ತೆಗಾಗಿ ಮೋದಿಜಿವರೆಗೂ ಪತ್ರ ಬರೆದು ತಮ್ಮ ಊರಿಗೆ ಡಾಂಬರು ರಸ್ತೆಯ ನಿರ್ಮಾಣಕ್ಕೆ, ಮತ್ತು ಅಭಿವೃದ್ಧಿಗೆ ಕಾರಣ ಆಗಿದ್ದಾರೆ. ಹಲವಾರು ಸಮಾಜ ಸೇವೆಯಲ್ಲಿ ಪಾಲ್ಗೊಂಡು ಸಮಾಜ ಸೇವೆಕೆಂದು ಹೆಸರು ಪಡೆದರು. ಇವರ ಸಮಾಜ ಸೇವೆಯನ್ನು ನೋಡಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಫಲಕವನ್ನು ಕೊಡುವುದರ ಜೊತೆಗೆ ಸನ್ಮಾನಿಸಿ ಗೌರವಿಸಿದೆ.
ಇವರ ಸಾಧನೆಯನ್ನು ನೋಡಿ ಊರಿನ ಗುರು, ಹಿರಿಯರಿಗೆ ಮೆಚ್ಚುಗೆ ಪಾತ್ರರಾಗಿದ್ದಾರೆ. ಇವರ ಸಾಧನೆ ಇನ್ನೂ ಹೆಚ್ಚಿನ ಮಟ್ಟಕ್ಕೆ ಹೋಗಲೆಂದು ಶುಭಹಾರೈಸುವೆ.

ಲೇಖಕರು:-
ಬಸವರಾಜ ಎಸ್. ಬಾಗೇವಾಡಿಮಠ.
ರಾಣೆಬೇನ್ನೂರು. ಜಿಲ್ಲಾ: ಹಾವೇರಿ.

LEAVE A REPLY

Please enter your comment!
Please enter your name here