ಯಲಬುರ್ಗಾದ ಹುಲಿ ದಿಟ್ಟ ಪತ್ರಕರ್ತ ಸ.ಶರಣಪ್ಪ ಪಾಟೀಲ್ ಕರಮುಡಿ:

0
445

ನನ್ನ ಪತ್ರಿಕೋದ್ಯಮದ 22 ವರ್ಷಗಳ ವೃತ್ತಿ ಜೀವನದಲ್ಲಿ ನನ್ನ ಜೊತೆಯಾಗಿ ನೆರಳು ಪತ್ರಿಕೆಯಲ್ಲಿ ಸುಮಾರು ವರ್ಷಗಳ ಕಾಲ ಜೊತೆ ಜೊತೆಯಾಗಿ ವರದಿಗಳನ್ನು ಮಾಡುತ್ತಾ ಬಹಳ ಆತ್ಮೀಯತೆಯಿಂದ ಈ ದಿನದವರೆಗೂ ಹಾಗೆಯೇ ಕಿಂಚಿತ್ತೂ ಬದಲಾವಣೆಯಾಗದೆ ನನ್ನ ನೆಚ್ಚಿನ ಸ್ನೇಹಿತರಲ್ಲಿ ಒಬ್ಬಾರಾಗಿರುವ ಸ.ಶರಣಪ್ಪ ಕರಮುಡಿ ಅವನ ಬಗ್ಗೆ ಬರೆಯಲು ಬಹಳ ಸಂತೋಷವಾಗುತ್ತದೆ

ಯಲಬುರ್ಗಾ ತಾಲೂಕು ಹಲವಾರು ರಂಗಗಳಲ್ಲಿ ಅಪ್ಪಟ ಪ್ರತಿಭಾವಂತರನ್ನು ಹೊಂದಿದ್ದು ಆ ಪ್ರತಿಭಾವಂತರ ಕಠಿಣ ಪರಿಶ್ರಮದಿಂದ ತಾಲೂಕಿನ ಕೀರ್ತಿ ಎಲ್ಲಡೆ ಹಬ್ಬಿದೆ. ಮುಖ್ಯವಾಗಿ ಯಲಬುರ್ಗಾ ತಾಲೂಕಿನ ಪತ್ರಿಕಾ ರಂಗದ ಕುರಿತು ಹೇಳುವುದಾದರೆ ಇಲ್ಲಿಯ ಕೆಲ ಪತ್ರಕರ್ತರು ತಮ್ಮ ವೃತ್ತಿ ಪರತೆಯ ಮೂಲಕ ಇಂದು ಜಿಲ್ಲೆಯಾದ್ಯಂತ ತಮ್ಮ ಹೆಸರು ಸಂಪಾದಿಸಿಕೊಂಡಿದ್ದಾರೆ. ಅಂತವರ ಸಾಲಿಗೆ ತಾಲೂಕಿನ ಕರಮುಡಿ ಗ್ರಾಮದ ಯುವ ಉತ್ಸಾಹಿ ಪತ್ರಕರ್ತ ಸ.ಶರಣಪ್ಪ ಪಾಟೀಲ್ ಕರಮುಡಿ ಅವರು ಒಬ್ಬರು. ಇವರು 13 ವರ್ಷಗಳಿಂದ ಸ.ಶರಣಪ್ಪ ಪಾಟೀಲ್ ಅವರು ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಗಲೂ ಯಲಬುರ್ಗಾ ತಾಲೂಕಿನ ಟ್ಯಾಬ್ಲೇಡ್ ಪತ್ರಿಕೋದ್ಯಮದಲ್ಲಿ ಕಳೆದ 12 ವರ್ಷಗಳಿಂಗ ಸ.ಶರಣಪ್ಪ ಪಾಟೀಲ್.ಅವರ ಸೇವೆ ನಿಜಕ್ಕೂ ಅಜರಾಮರ ಎಂದು ಹೇಳಬಹುದು. ಯಾಕೆಂದರೆ ಇವರು ಸಂಪೂರ್ಣ ಸವಾಲಿನ ಟ್ಯಾಬ್ಲೇಡ್ ಪತ್ರಿಕೋದ್ಯಮದಲ್ಲಿಯೇ ತಮ್ಮನ್ನು 2 ದಶಕಗಳ ಕಾಲ ತೊಡಗಿಸಿಕೊಳ್ಳುವ , ಮೂಲಕ ಈ ರಂಗದ ಭರವಸೆಯ ಪತ್ರಕರ್ತರಾಗಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಸ. ಶರಣಪ್ಪ ಪಾಟೀಲ್ ಬಾಲ್ಯ ಜೀವನ:-

ತಾಲೂಕಿನ ಕರಮುಡಿ ಗ್ರಾಮದ ಪ್ರತಿಷ್ಟಿತ ಕುಟುಂಬವಾದ ಪೋಲೀಸಪಾಟೀಲ್ ಕುಟುಂಬದ ಕಣ್ಮಣಿಯಾಗಿ ಸ.ಶರಣಪ್ಪ ಪಾಟೀಲ್.ಜನಿಸಿದ ಈ ಮನೋಹರ (ಬಸವರಾಜ) ಈರಮ್ಮನವರ ಮಗನಾಗಿ 19/12/1984 ರಲ್ಲಿ ಸ.ಶರಣಪ್ಪ ಪಾಟೀಲ್ ಗದಗಿನಲ್ಲಿ ಜನಿಸಿದರು./ ಇವರು ಕರಮುಡಿ ಮತ್ತು ಯಲಬುರ್ಗಾ ತಾಲೂಕಿನ ಹಿರಿಯ ನಾಯಕ ಹಲಗನಗೌಡ ಪೋಲೀಸ ಪಾಟೀಲ ಇವರ ತಂಗಿಯಾದ ಚಿನ್ನಮ್ಮ ಗೌಡಶಾನಿ ಮಗಳಾದ ಈರಮ್ಮ ನವರ ಏಕೈಕ ಪುತ್ರ. ಸ.ಶರಣಪ್ಪ ಪಾಟೀಲ್ ಜನಿಸಿದಾಗ ಇವರ ತಾಯಿ ಈರಮ್ಮನವರ ಆರೋಗ್ಯದಲ್ಲಿ ಏರುಪೇರಾದಾಗ ಸ.ಶರಣಪ್ಪ ಪಾಟೀಲ್ ರವರನ್ನು ತಮ್ಮ ಮಗನಂತೆ ಆರೈಕೆ ಮಾಡಿದವರು ಹಲಗನಗೌಡರ ಧರ್ಮ ಪತ್ನಿ ಶಿವಮ್ಮ ಮತ್ತು ಅವರ ಮಕ್ಕಳಾದ ಸಿ.ಎಚ್,ಪಾಟೀಲ್. ಮತ್ತು ಜಯದೇವನಗೌಡ ಪೋಲೀಸಪಾಟೀಲ್ ರವರು. ಅದರಲ್ಲೂ ಜಯದೇವನಗೌಡ ಸ.ಶರಣಪ್ಪ ಪಾಟೀಲ್ ತಮ್ಮ ಮಗನಿಗಿಂಗತಲು ಹೆಚ್ಚು ಪ್ರೀತಿ ವಿಶ್ವಾಸ. ಮಮತೆಯಿಂದ ಬೆಳಸಿದರು. ಇಂದಿಗೂ ಸಹ ಕರಮುಡಿಯ ಜನರು ಬಾಲ್ಯದಲ್ಲಿ ಶರಣಪ್ಪನವರನ್ನು ಜಯದೇವನಗೌಡ ಅಕ್ಕರೆ ಪ್ರೀತಿ ತೋರಿದ್ದನ್ನು ನೆನೆಯುತ್ತಾರೆ. ನಂತರ ಸಿ.ಎಚ್.ಪಾಟೀಲ್ ರ ಧರ್ಮ ಪತ್ನಿ ನೀಲಾಂಬಿಕ ಮತ್ತು ಜಯದೇವನಗೌಡರ ಧರ್ಮ ಪತ್ನಿ ಸರಸ್ವತಿಯವರು, ಮತ್ತು ಹಲಗನಗೌಡರ ಹೆಣ್ಣುಮಕ್ಕಳಾದ ಅಕ್ಕಮಹಾದೇವಿ ಮಲ್ಲಿಕಾರ್ಜುನ ಬಸಾಪಟ್ಟಣ ಮತ್ತು ಉಮಾದೇವಿ. ಗವಿಶಿದ್ದಪ್ಪ ಕೊಪ್ಪಳವರೂ ಸಹ ಸ.ಶರಣಪ್ಪ ಪಾಟೀಲ್ ರವರನ್ನು ಆರೈಕೆ ಮಾಡಿದರು. ನಂತರ ಶರಣಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಕರಮುಡಿಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಮುಧೋಳದ ತ್ರಿಲಿಂಗೇಶ್ವರ ಪ್ರೌಢಶಾಲೆ. ಪಿ.ಯು.ಸಿ. ಯನ್ನು ಯುಲಬುರ್ಗಾದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಗದಗದ ಜೆ.ಟಿ. ಕಾಲೇಜಿನಲ್ಲಿ ಓದಿದರು.

ಪತ್ರಿಕಾ ರಂಗದಲ್ಲಿ ಸ.ಶರಣಪ್ಪ ಪಾಟೀಲ್ ಇವರ ಹೆಜ್ಜೆ ಗುರುತು:-

ಸ.ಶರಣಪ್ಪ ಪಾಟೀಲ್ ಅವರು ಮೊದಲಿನಿಂದಲೂ ಕರ್ನಾಟಕ ಕಂಡ ಟ್ಯಾಬ್ಲೇಡ್ ಲೋಕದ ದಿಗ್ಗಜರಾದ ಪಿ.ಲಂಕೇಶ, ರವಿ ಬೆಳಗೆರೆ, ಗೌರಿ ಲಂಕೇಶರ ಅಪ್ಪಟ ಅಭಿಮಾನಿ ಬಾಲ್ಯದಿಂದಲೂ ಶರಣಪ್ಪನವರು ಲಂಕೇಶ ಪತ್ರಿಕೆ, ಹಾಯ್ ಬೆಂಗಳೂರ್, ಪತ್ರಿಕೆಯ ಅಪ್ಪಟ ಅಭಿಮಾನಿಗಳು ಮತ್ತು ಓದುಗರು. ಇವರು ತಮ್ಮ ಹೈಸ್ಕೂಲ್ ದಿನಗಳಲ್ಲಿಯೇ ಲಂಕೇಶ ಮತ್ತು ಹಾಯ್ ಬೆಂಗಳೂರ ಪತ್ರಿಕೆಯನ್ನು ಚಾಚೂ ತಪ್ಪದೆ ಓದುತ್ತಿದ್ದರು. ಇವರು ಹೈಸ್ಕೂಲ್ ದಿನಗಳಲ್ಲಿ ಹನಿಗವನ, ಬರೆಯತ್ತಿದ್ದರು. ನಂತರ ತಮ್ಮ ಸುತ್ತಲಿನ ಸಮಸ್ಯಗಳ ಕುರಿತು ಹಲವಾರು ದಿನ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದರು. ನಂತರ 2004 ರಲ್ಲಿ ಸ.ಶರಣಪ್ಪ ಪಾಟೀಲ್ ಅವರು ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಭಾವೈಕ್ಯ ಪತ್ರಿಕೆಯ ವರದಿಗಾರರಾಗಿ ಈ ಟ್ಯಾಬ್ಲೇಡ ಲೋಕಕ್ಕೆ ಯಂಟ್ರಿ ಕೊಟ್ಟರು. ನಂತರ 2005 ರಲ್ಲಿ ಸ.ಶರಣಪ್ಪ ಪಾಟೀಲ್ ಹಗರಿ ಭೊಮ್ಮನಳ್ಳಿಯ ಧೀಮಂತ ಪತ್ರಕರ್ತ ಬುಡ್ಡಿ ಬಸವರಾಜ ಅವರ ನೆರಳು ಪತ್ರಿಕೆಯ ವರದಿಗಾರರಾಗಿ ನೇಮಕಗೊಂಡು ಅಂದಿನಿಂದ ಇಂದಿನವರಗೆ ನೆರಳು ಪತ್ರಿಕೆಯಲ್ಲಿ ಹಲವಾರು ಹರಿತವಾದ ವರಧಿಗಳ ಮೂಲಕ ಜನಮಾನಸದಲ್ಲಿ ತಮ್ಮದೊಂದು ಹೆಸರು ಪಡೆದುಕೊಂಡಿದ್ದು ನಿಜಕ್ಕೂ ಶ್ಲಾಗನೀಯ ನೆರಳು ಪತ್ರಿಕೆಯಲ್ಲಿ ಇವರು ಜಿಲ್ಲೆಯ ಅತಿರತ ಮಹಾರತ ರಾಜಕಾಶರಿಣಗಳ ಕುರಿತು ಕಠೋರ ಶಬ್ದ, ನೇರ- ನಿರ್ಭಯವಾದ ವರದಿ ಬರೆಯುವ ಮೂಲಕ ಈ ಜಿಲ್ಲೆಯ ಕೆಲ ರಾಜಕಾರಿಣಗಳ ನಿದ್ದೆಯನ್ನು ಕೆಡಿಸಿದವರು.

ಹೀಗೆ ಸ.ಶರಣಪ್ಪ ಪಾಟೀಲ್. ಪತ್ರಿಕಾ ಪಯಣದ ಹಾದಿಯಲ್ಲಿ ದೇವದುರ್ಗದ ಅಂಜಳ ಜಯಸಿಂಹ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ 5 ಸಂಚಿಕೆಗಳನ್ನು ಹೊರತಂದ ನಂತರ ಬೆಂಗಳೂರಿನ ಅರ್ಜುನ ಪತ್ರಿಕೆಯಲ್ಲಿ 1 ವರ್ಷ ವರದಿಗಾರರಾದರು. ಲಂಕೇಶ ಪತ್ರಿಕೆಯ ವರದಿಗಾರರಾದ ಹಿರಿಯ ಪತ್ರಕರ್ತರಾದ ದೋಣ್ಣಿಹಳ್ಳಿ ಗುರುಮೂರ್ತಿಯವರ “ರಿಪೋರ್ಟರ್” ಪತ್ರಿಕೆ ಹಾಗೆ ಈಗಿನ ಲಂಕೇಶ ಪತ್ರಿಕಾ ವರದಿಗಾರರಾದ ವಿ.ಎಸ್. ಹೊನ್ನಾಚಾರ್‍ರವರ “ಲೀಡರ್ ” ಪತ್ರಿಕೆಯಲ್ಲಿ ಕೆಲಕಾಲ ವರದಿಗಾರರಾಗಿ ಹಾಗೂ ಬೆಂಗಳೂರಿನ “ಒಂಟಿಚಿರತೆ” ಪತ್ರಿಕೆ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ ಇನ್ನು ಹಲವಾರು ವಾರ ಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ ಇವರು ವರದಿಗಾರರಾಗಿ ಹೆಚ್ಚು ಸಂಪಾದಿಸಿದ ಕೀರ್ತಿ ಪಡೆದದ್ದು ಅದು ನೆರಳು ಪತ್ರಿಕೆಗೆ ಸಲ್ಲುತ್ತದೆ ಇವರನ್ನು ಬೆಳಸಿದ ಕೀರ್ತಿ ನೆರಳು ಪತ್ರಿಕೆಯ ಸಂಪಾದಕರಾದ ಬುಡ್ಡಿ ಬಸವರಾಜ ಇವರಿಗೆ ಸಲ್ಲು ತ್ತದೆ.

ಇವರು ಕಳೆದ 12 ವರ್ಷಗಳಿಂದ ಟ್ಯಾಬ್ಲೇಡ್ ಪತ್ರಿಕೆಯಲ್ಲಿಯೇ ಗುರುತಿಸಿಕೊಂಡಿದ್ದಾರೆ. 2007 ರಲ್ಲಿ ಇವರು ಉದಯವಾಣಿ ಪತ್ರಿಕೆಯ ವರದಿಗಾರನಾಗುವ ಅವಕಾಶ ಕೂಡಿಬಂದರೂ ಇವರು ಅವಕಾಶವಂಚಿತರಾದರು. ಇನ್ನು ಇವರು 2012 ರಲ್ಲಿ ವಿಜಯವಾಣಿ ದಿನ ಪತ್ರಿಕೆಯ ಯಲ್ಬುರ್ಗಾ ತಾಲೂಕ ವರದಿಗಾರರಾಗಿ ನೇಮಕಗೊಂಡು 1 ತಿಂಗಳ ವರದಿ ಮಾಡಿದ ನಂತರ ರಾಜಿನಾಮೆ ನೀಡಿದರು.

“ಹಾಯ್ ಕೊಪ್ಪಳ ಪತ್ರಿಕೆ”ಯ ಯಶಸ್ವಿ 5 ನೇ ವರ್ಷದತ್ತ ಇವರ ಸಾರತ್ಯದಲ್ಲಿ ಸಾಗುತ್ತಲಿದೆ

ಸ.ಶರಣಪ್ಪ ಪಾಟೀಲ್ ಇವರಿಗೆ ಮೊದಲಿನಿಂದಲೂ ಟ್ಯಬ್ಲೇಡ್ ಪತ್ರಿಕೆ ಯೆಂದರೆ ಇವರಿಗೆ ಬಲು ಇಷ್ಟ 2012 ರಲ್ಲಿ ಇವರು ತಮ್ಮ ಕನಸಿನ ಕೂಸಾದ “ಹಾಯ್ ಕೊಪ್ಪಳ ಪಾಕ್ಷಿಕ ಪತ್ರಿಕೆ” ಜನ್ಮ ತಾಳಿತು. ಇವರು ತಮ್ಮ ಸಾರಥ್ಯದಲ್ಲಿ ಕಳೆದ 4 ವರ್ಷಗಳಿಂದ ಬಿಟ್ಟು ಬಿಡದೆ ಹಾಯ್ ಕೊಪ್ಪಳ ಪತ್ರಿಕೆಯನ್ನು ಸ.ಶರಣಪ್ಪ ಪಾಟೀಲ್ ಹೊರತರುತ್ತಿರುವುದನ್ನು ನೋಡಿದರೆ ನಿಜಕ್ಕೂ ಇವರೊಬ್ಬ ಛಲದಂಕ ಮಲ್ಲ. ಎಂದು ಹೇಳಬಹುದು. ಎಕೆಂದರೆ ಅವೆಷ್ಟೋ ಟ್ಯಾಬ್ಲೇಡ್ ಪತ್ರಿಕೆಗಳು ಜನ್ಮ ತಾಳಿ ಕೆಲವೇ ದಿನಗಳ ನಂತರ ಮರಣ ಹೊಂದಿರುವಂತವು ಇನ್ನು ಕೆಲ ಪತ್ರಿಕೆಗಳು ನಿಯತಕಾಲಿಕವಾಗಿ ಪ್ರಕಟಗೊಳ್ಳುವುದಿಲ್ಲ. ಇಂತಹ ಟ್ಯಾಬ್ಲೇಡ ಪತ್ರಿಕೆಯನ್ನು ಹೊರತರುವುದು ಒಂದು ರೀತಿ ಗರ್ಭಿಣ ಮಗುವಿಗೆ ಜನ್ಮ ನೀಡಿದಂತೆ ಮುಖ್ಯವಾಗಿ ಟ್ಯಾಬ್ಲೇಡ್ ಪತ್ರಕರ್ತರಿಗೆ ಬಹುಮುಖ್ಯ ಸಮಸ್ಯೆ ಎಂದರೆ ಆರ್ಥಿಕ ಸಂಕಷ್ಟ ಇಂತಹ ಸಂದರ್ಭದಲ್ಲಿ ಸ.ಶರಣಪ್ಪ ಪಾಟೀಲ್‍ರವರು ಕಳೆದ 4 ವರ್ಷದಿಂದ ಬಿಟ್ಟುಬಿಡದೆ ಪ್ರಕಟಗೊಳಿಸುತ್ತಿದ್ದಾರೆ. ಹೀಗೆ ಇಂದು “ಹಾಯ್ ಕೊಪ್ಪಳ ಪತ್ರಿಕೆ” ತನ್ನದೇ ಆದ ಓದುಗರ ವೃಂದವನ್ನು ಸಂಪಾದಿಸಿದೆ ಇನ್ನು 2011 ರಲ್ಲಿ ಸ.ಶರಣಪ್ಪ ಪಾಟೀಲ್. ಕುಷ್ಟಗಿ ತಾಲೂಕಿನ ತಳುವಗೇರಾದ ಸುನಿತಾ ಕಂದಕೂರ ಇವರನ್ನು ವಿವಾಹವಾದರು ಸ.ಶರಣಪ್ಪ ಪಾಟೀಲ್. ಯಶಸ್ವಿಯ ಹಿಂದೆ ಅವರ ಶ್ರೀಮತಿಯವರಾದ ಸುನಿತಾ ಪಾಟೀಲ್ ರವರು ಬೆನ್ನೆಲುಬಾಗಿದ್ದಾರೆ.

ಗೋಪಾಲ್

LEAVE A REPLY

Please enter your comment!
Please enter your name here