ಬೊಮ್ಮಘಟ್ಟ ಗ್ರಾಮದಲ್ಲಿ ಡಿಎಂಎಫ್ ಯೋಜನೆಯಡಿಯಲ್ಲಿ ತರಬೇತಿ ಪಡೆದ 80 ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ

0
145

ಸಂಡೂರು ತಾಲೂಕಿನ ಬೊಮ್ಮಘಟ್ಟ ಗ್ರಾಮ ಪಂಚಾಯಿತಿಯ ಬೊಮ್ಮಘಟ್ಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದಿನಾಂಕ 09.06.2021 ರಂದು ಬುದವಾರ ಡಿಎಂಎಫ್ ಯೋಜನೆಯಡಿಯಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ತರಬೇತಿಗಳನ್ನು ನೀಡಿ ಸ್ವ ಉದ್ಯೋಗ ಕಂಡುಕೊಳ್ಳಲು ಸಂಡೂರು ಶಾಸಕರಾದ ತುಕಾರಾಂ ಅವರು ಯೋಜನೆಯನ್ನು ರೂಪಿಸಿದ್ದರು.

ಲಾಕ್ ಡೌನ್ ಗೂ ಮುಂಚೆ ಬೊಮ್ಮಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿನ 80 ಜನ ನಿರುದ್ಯೋಗ ಮಹಿಳೆಯರು ಯೋಜನೆಯಡಿಯಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದರು,
ಶಾಸಕ ತುಕಾರಾಂ ಅವರ ನಿರ್ದೇಶನದಂತೆ ಇಂದು ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತದ ವತಿಯಿಂದ 80 ಜನ ಅರ್ಹ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಲಾಕ್ ಡೌನ್ ಸಂಧರ್ಭದಲ್ಲಿ ಕೊರೊನಾ ನಿಯಮಗಳನ್ನು ಅನುಸರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಪ್ರತಿಯೊಬ್ಬರು ಮಾಸ್ಕನ್ನು ಹಾಕಿಕೊಂಡು ಫಲಾನುಭವಿ ಮಹಿಳೆಯರು ಹೊಲಿಗೆ ಯಂತ್ರಗಳನ್ನು ಸ್ವೀಕರಿದರು.

ನಿರುದ್ಯೋಗ ಯುವಕ ಯುವತಿಯರು ಸ್ವಾವಲಂಬಿಗಳಾಗಿ ಬದುಕಲು ಶ್ರಮವಹಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ಶಾಸಕ ತುಕಾರಾಂ ಅವರಿಗೆ ಮಹಿಳೆಯರು ಸೇರಿದಂತೆ ಜನಪ್ರತಿನಿಧಿಗಳು, ಊರಿನ ಮುಖಂಡರು ಅಭಿನಂದನೆಗಳನ್ನು ಸಲ್ಲಿಸಿದರು

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಂಚಣ್ಣ, ಉಪಾಧ್ಯಕ್ಷರಾದ ನಂದಿನಿ ಹೂಲೇಶ್, ಹಾಲಿ ತಾಲೂಕು ಪಂಚಾಯಿತಿ ಸದಸ್ಯರುಗಳು, ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿ, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಮತ್ತು ಮಾಜಿ ಜಿ.ಪಂ-ತಾ.ಪಂ-ಗ್ರಾ ಪಂ,ಸದದ್ಯರು ಸಂಘಸಂಸ್ಥೆಯ ಪದಾಧಿಕಾರಿಗಳು, ಊರಿನ ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here