ಮಹಾನ್ ವಿದ್ವಾಂಸ,ಮಹತ್ವದ ಸಾಧನೆಗಳ ಹರಿಕಾರ ಪಿ.ವಿ.ನರಸಿಂಹರಾವ್ ಜನ್ಮ ದಿನ.

0
609

ಇಂದು ಭಾರತದ ಮಾಜಿ ಪ್ರಧಾನಿ, ಮಹಾನ್ ವಿದ್ವಾಂಸ, ಮಹತ್ವದ ಸಾಧನೆಗಳ ಹರಿಕಾರ ಪಿ ವಿ ನರಸಿಂಹರಾವ್ ಜನ್ಮ ದಿನ.

ನಮ್ಮ ದೇಶದಲ್ಲಿ ರಾಜಕಾರಣದಲ್ಲಿದ್ದೂ ತಮ್ಮ ಸಾಂಸ್ಕೃತಿಕ ಮನೋಭಾವನೆಗಳಿಂದ, ವೈವಿಧ್ಯಮಯ ಸಾಧನೆ, ಚಾಣಾಕ್ಷತೆಗಳಿಂದ ಮಹತ್ವಪೂರ್ಣ ವ್ಯಕ್ತಿ ಎನಿಸಿದ್ದವರು ಪಿ. ವಿ. ನರಸಿಂಹರಾವ್. ಪಿ ವಿ ನರಸಿಂಹರಾಯರು 1921ರ ಜೂನ್ 28ರಂದು ಆಂಧ್ರಪ್ರದೇಶದ ಲಕ್ನೇಪಲ್ಲಿ ಎಂಬ ಹಳ್ಳಿಯಲ್ಲಿ ಜನಿಸಿದರು. ಪದವೀಧರರಾಗಿ, ಕಾನೂನಿನ ಸ್ನಾತಕೋತ್ತರ ಪದವೀಧರರಾಗಿ ಸ್ವಾತಂತ್ರ ಸಂಗ್ರಾಮದ ಸಮಯದಿಂದಲೂ ರಾಜಕೀಯದಲ್ಲಿದ್ದ ಪಿ ವಿ ನರಸಿಂಹರಾಯರು ಆಂಧ್ರಪ್ರದೇಶದಲ್ಲಿ ಹಲವಾರು ರಾಜಕೀಯ ಸ್ಥಾನಗಳಲ್ಲಿದ್ದು ಕೆಲವು ಕಾಲ ಮುಖ್ಯಮಂತ್ರಿಗಳೂ ಆಗಿದ್ದರು. ಆಂಧ್ರಪ್ರದೇಶದಲ್ಲಿ ಭೂಸುಧಾರಣಾ ಕಾನೂನುಗಳನ್ನು ಅತ್ಯಂತ ಪ್ರಶಸ್ತವಾಗಿ ನೆರವೇರಿಸಿದ ಕೀರ್ತಿ ನರಸಿಂಹರಾಯರದು.

ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸರ್ಕಾರದಲ್ಲಿ ಗೃಹ ಖಾತೆ, ರಕ್ಷಣಾ ಖಾತೆ, ವಿದೇಶಾಂಗ ಖಾತೆ ಮತ್ತು ಕೈಗಾರಿಕಾ ಖಾತೆಗಳನ್ನು ನಿರ್ವಹಿಸಿದ ಪಿ ವಿ ನರಸಿಂಹ ರಾವ್ ರಾಜಕಾರಣದಲ್ಲಿ ಚಾಣಾಕ್ಷರೆಂದೇ ಪ್ರಖ್ಯಾತರು. ರಾಜೀವ್ ಗಾಂಧಿ ಅವರ ಸಂಪುಟದಿಂದ ಮೊದಲುಗೊಂಡಂತೆ ಕಾಂಗ್ರೆಸ್ಸಿನ ಲೈಸೆನ್ಸ್ ರಾಜ್ ಪದ್ಧತಿಗೆ ಇತಿಶ್ರೀ ಹಾಡಲು ಪ್ರಾರಂಭ ಮಾಡಿದ ಕೀರ್ತಿ ಕೂಡಾ ಪಿ ವಿ ನರಸಿಂಹರಾವ್ ಅವರಿಗೆ ಸೇರುತ್ತದೆ.

ನರಸಿಂಹರಾವ್ ಅವರು ಪ್ರಧಾನಿ ಆಗಿದ್ದ ಸಮಯದಲ್ಲಿ ದೇಶ ಹಲವಾರು ಗಂಭೀರ ಪರಿಸ್ಥಿತಿಗಳನ್ನು ಎದುರಿಸುತ್ತಿತ್ತು. ಆರ್ಥಿಕ ಸ್ಥಿತಿ ಅಧೋಗತಿ ತಲುಪಿತ್ತು. ಈ ಸಂದರ್ಭದಲ್ಲಿ ರಾಜಕೀಯೇತರ ವ್ಯಕ್ತಿಯಾದ ಮನಮೋಹನ್ ಸಿಂಗ್ ಅವರನ್ನು ಹಣಕಾಸು ಮಂತ್ರಿಯಾಗಿ ಮತ್ತು ಮಾಂಟೆಕ್ ಅಹ್ಲುವಾಲಿಯಾ ಅವರನ್ನು ಹಣಕಾಸು ಕಾರ್ಯದರ್ಶಿಯನ್ನಾಗಿ ತಂದು ತಮ್ಮ ಮುಖ್ಯ ದೃಷ್ಟಿ ರಾಜಕೀಯವಲ್ಲ ದೇಶದ ಅಗತ್ಯತೆಗಳ ನಿರ್ವಹಣೆ ಎಂಬುದನ್ನು ತೋರಿಸಿಕೊಟ್ಟರು. ಭಾರತವು ಮುಕ್ತ ಮಾರುಕಟ್ಟೆಗೆ ಮುಖಮಾಡುವಂತಹ ಕಾರ್ಯಕ್ರಮಕ್ಕೆ ಇಂಬುಕೊಟ್ಟು ತಮ್ಮ ಆಡಳಿತಾವಧಿಯಲ್ಲಿ ದೇಶದ ಆರ್ಥಿಕ ಪ್ರಗತಿ ಔನ್ನತ್ಯದ ಹಾದಿಯಲ್ಲಿ ನಡೆಯುವುದನ್ನು ನಿರಂತರವಾಗಿ ಕಾಯ್ದುಕೊಂಡದ್ದಲ್ಲದೆ ಭಾರತೀಯ ಆರ್ಥಿಕತೆಗೊಂದು ಹೊಸ ಮಾರ್ಗಸೂಚಿಯನ್ನೇ ರೂಪಿಸಿದರು. ವಿಶ್ವಸಂಸ್ಥೆಯಲ್ಲಿ ಭಾರತದ ವಿಚಾರಗಳನ್ನು ಉತ್ತಮವಾಗಿ ಪ್ರತಿಪಾದಿಸಬಲ್ಲ ವ್ಯಕ್ತಿಯ ಅವಶ್ಯಕತೆಯಿದ್ದಾಗ ಅವರು ಅದಕ್ಕಾಗಿ ಆರಿಸಿದ್ದು ತಮ್ಮ ವಿರೋಧಪಕ್ಷದ ಮುತ್ಸದ್ಧಿಯಾದ ಅಟಲ್ ಬಿಹಾರಿ ವಾಜಪೇಯಿ ಅವರನ್ನು. ತಮ್ಮ ಅಧಿಕಾರ ಮುಗಿದು ಬಿ ಜೆ ಪಿ ನೇತೃತ್ವದ ಸರ್ಕಾರ ಬಂದಾಗ ಪರಮಾಣು ಪರೀಕ್ಷಣೆಗಳಿಗೆ ಸಕಲವೂ ಸಿದ್ಧವಾಗಿದೆ ಅದನ್ನು ಆಗಗೊಳಿಸಿ ಎಂದು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲಹೆ ನೀಡಿದವರೂ ಪಿ. ವಿ. ನರಸಿಂಹ ರಾವ್ ಅವರೇ ಎಂದು ವಾಜಪೇಯಿ ಉಲ್ಲೇಖಿಸಿದ್ದಾರೆ. ಹೀಗೆ ನರಸಿಂಹರಾವ್ ಪಕ್ಷ ರಾಜಕೀಯಕ್ಕೂ ಮಿಗಿಲಾದ ಒಬ್ಬ ಸುಸಂಸ್ಕೃತ ರಾಜಕಾರಣಿ.

ನರಸಿಂಹರಾವ್ ಅವರ ಸಾಂಸ್ಕೃತಿಕ ಶ್ರೀಮಂತಿಕೆ ಎಷ್ಟು ಮಹತ್ವಪೂರ್ಣವಾದದ್ದೆಂದರೆ ಅವರಿಗೆ ತೆಲುಗಿನಲ್ಲಿ ಎಷ್ಟು ಪ್ರಭುತ್ವವಿತ್ತೋ ಅಂತದ್ದೇ ಪ್ರಭುತ್ವ ಮರಾಠಿ ಭಾಷೆಯಲ್ಲಿತ್ತು. ಹಿಂದಿ, ಉರ್ದು, ಒರಿಯಾ, ಬೆಂಗಾಲಿ, ಗುಜರಾಥಿ, ತಮಿಳು ಇಂಗ್ಲಿಷ್, ಫ್ರೆಂಚ್, ಅರಾಬಿಕ್, ಸ್ಪಾನಿಶ್, ಜರ್ಮನ್, ಗ್ರೀಕ್, ಲ್ಯಾಟಿನ್, ಪರ್ಷಿಯನ್ ಹೀಗೆ ಹದಿನೇಳು ಭಾಷೆಗಳಲ್ಲಿ ಉತ್ತಮವಾಗಿ ಸಂಭಾಷಿಸುವ ಸಾಮರ್ಥ್ಯವಿತ್ತು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಂದ ಸಂದರ್ಭದಲ್ಲಿ ಆ ಪ್ರಶಸ್ತಿ ಆಯ್ಕೆ ಸಮಿತಿ ಆಧ್ಯಕ್ಷತೆಯನ್ನು ಪಿ ವಿ ನರಸಿಂಹ ರಾವ್ ಅವರು ವಹಿಸಿದ್ದು ಆ ಸಮಯದಲ್ಲಿ ಪಿ. ವಿ. ಎನ್ ಅವರು ಮಾಸ್ತಿ ಅವರ ಕುರಿತು ನುಡಿದ ನಿರ್ಣಯಾತ್ಮಕ ಮಾತುಗಳನ್ನು ಡಾ. ಹಾ ಮಾ ನಾಯಕರು ತಮ್ಮ ಅಂಕಣದಲ್ಲಿ ಸುಂದರವಾಗಿ ಬರೆದಿದ್ದಾರೆ.

ಪಿ ವಿ ನರಸಿಂಹ ರಾಯರ ಕಾಲದಲ್ಲಿ ಭಾರತ ಆರ್ಥಿಕ ದಿವಾಳಿತನದಿಂದ ಮೇಲೆದ್ದು ಆರ್ಥಿಕ ಪ್ರಗತಿಯ ಕಡೆಗೆ ಸ್ಪಷ್ಟವಾಗಿ ಮುನ್ನಡೆಯಿತು ಎಂಬುದು ಹೌದಾದರೂ ದೇಶದಲ್ಲಿ ಹಲವಾರು ಸಮಸ್ಯೆಗಳು ಕೂಡಾ ತಲೆ ಎತ್ತಿದವು. ಟಾಡಾ ಕಾಯಿದೆಯ ಅನ್ವಯ ಕೂಡಾ ಈ ಕಾಲದಲ್ಲೇ ಮೂಡಿದ್ದು. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡಿದ್ದು ಕೂಡಾ ಇದೇ ಸಮಯದಲ್ಲಿ. ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ತನ್ನ ಪ್ರಾಬಲ್ಯ ಕಳೆದುಕೊಳ್ಳತೊಡಗಿ ವಿರೋಧಪಕ್ಷವಾದ ಬಿ ಜೆ ಪಿ ಪ್ರಾಬಲ್ಯಕ್ಕೆ ಬಂದದ್ದು ಪಿ ವಿ ನರಸಿಂಹ ರಾಯರ ಕಾಲದಲ್ಲಿ. ಎಲ್ಲ ಕಾಲದಲ್ಲಿರುವಂತೆ ಭ್ರಷ್ಟಾಚಾರ ಹಲವು ನಿಟ್ಟಿನಲ್ಲಿ ಬಹಿರಂಗವಾಗಿ ತಲೆ ಎತ್ತಿತು. ಇದರಲ್ಲಿ ರಾಯರ ಹೆಸರೂ ಕೂಡಾ ಪ್ರಸ್ತಾಪವಾಗಿತ್ತು. ಸುಪ್ರೀಂ ಕೋರ್ಟಿನಲ್ಲಿ ರಾವ್ ನಿರ್ದೋಷಿ ಎಂದು ತೀರ್ಪು ಹೊರಹೊಮ್ಮಿತು.

ಇವೆಲ್ಲದರ ನಡುವೆ ಪಿ ವಿ ನರಸಿಂಹರಾವ್ ಅವರಲ್ಲಿನ ಒಂದು ಮಹತ್ವದ ಗುಣ ಎಂದರೆ ಅವರು ಯಾವುದೇ ಸ್ಥಾನದಲ್ಲಿರಲಿ. ಮಾತನಾಡಿದ್ದೇ ಇಲ್ಲ ಎನ್ನುವಷ್ಟು ಕಡಿಮೆ. ಅವರ ಬಗ್ಗೆ ಗಂಭೀರ ಆರೋಪಗಳು ಬಂದಾಗಲೂ ಅದಕ್ಕೆ ಪ್ರತಿಕ್ರಿಯಿಸದಿದ್ದವರು ರಾವ್. ಮುಂದೆ ಇಂಥಹ ರಾಜಕಾರಣಿಯನ್ನು ತನ್ನವರೇ ಅಲ್ಲ ಎಂಬಷ್ಟು ವಿಚಿತ್ರವಾಗಿ ಸೋನಿಯಾ ಗಾಂಧಿ ಅವರ ಕಾಂಗ್ರೆಸ್ ನಡೆಸಿಕೊಂಡದ್ದು ಈಗ ಇತಿಹಾಸ.

ಬಹುಭಾಷಾ ವಿದ್ವಾಂಸರಾಗಿದ್ದ ಪಿ ವಿ ನರಸಿಂಹ ರಾವ್ ಅವರು ಜ್ಞಾನಪೀಠ ಪುರಸ್ಕೃತ ತೆಲುಗು ಲೇಖಕ ವಿಶ್ವನಾಥ ಸತ್ಯನಾರಾಯಣರ ಕಾದಂಬರಿ “ವೇಯಿ ಪದಗಾಲು” ಎಂಬ ಗ್ರಂಥವನ್ನು ಹಿಂದಿ ಭಾಷೆಯಲ್ಲಿ “ಸಹಸ್ರ ಫಣ್” ಹೆಸರಿನಲ್ಲಿ ಭಾಷಾಂತರಿಸಿದ್ದಾರೆ.

ಸಾಮಾನ್ಯವಾಗಿ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸದಿದ್ದ ನರಸಿಂಹರಾವ್ ಅವರಿಗೆ ಸುದ್ದಿ ಮಾಧ್ಯಮದವರು ಇಟ್ಟ ಅಡ್ಡಹೆಸರು “ಚಾಣಕ್ಯ”! ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ರಾವ್ ಭಾರತೀಯ ರಾಜಕೀಯದ ಬಗೆಗೆ “ದ ಇನ್‌ಸೈಡರ್” ಎಂಬ ಇಂಗ್ಲಿಷ್ ಕಾದಂಬರಿಯನ್ನು ಬರೆದರು.

ಹೃದಯಾಘಾತಕ್ಕೆ ಒಳಗಾದ ರಾವ್ 2004ರ
ಡಿಸೆಂಬರ್ 23ರಂದು ನಿಧನರಾದರು. ಒಬ್ಬ ಮಹತ್ವದ ರಾಜಕಾರಣಿ, ಆಡಳಿತಗಾರ, ಸಾಂಸ್ಕೃತಿಕ ಪ್ರತಿನಿಧಿ ಈ ಲೋಕ

LEAVE A REPLY

Please enter your comment!
Please enter your name here