ಸ್ವಚ್ಛತಾ ಸಿಬ್ಬಂದಿಗಳ ಸೇವೆ ಶ್ಲಾಘನೀಯ: ಜಿಲ್ಲಾಧಿಕಾರಿ ಎಸ್.ಅಶ್ವಥಿ

0
89

ಮಂಡ್ಯ.ಜೂ.14 : ಕೋವಿಡ್-19 ಸಂದರ್ಭದಲ್ಲಿ ಸತತವಾಗಿ ಹಗಲಿರುಳೆನ್ನೆದೆ ದುಡಿಯುತ್ತಿರುವ ವೈದ್ಯರು, ದಾದಿಯರ ಜೊತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸ್ವಚ್ಛತಾ ಸಿಬ್ಬಂದಿಗಳ ಸೇವೆ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಹೇಳಿದರು.
ಮಲಬಾರ್ ಚಾರಿಟೇಬಲ್ ಟ್ರಸ್ಟ್ ಹಾಗೂ ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಮಿಮ್ಸ್ ನ ಸ್ವಚ್ಛತಾ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಛತಾ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 1 ವರ್ಷದಿಂದ ಕೋವಿಡ್ ನಿಂದಾಗಿ ಜಿಲ್ಲೆಯ ಪ್ರತಿ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು ಸ್ವಚ್ಚತಾ ಸಿಬ್ಬಂದಿಗಳು ಒಟ್ಟಾಗಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ ಎಂದರು. ಇನ್ನು ಕೋವಿಡ್ ನ ಎರಡನೇ ಅಲೆಯಲ್ಲಿ ಪ್ರಕರಣಗಳು ಹೆಚ್ಚಿದ್ದು, ಆಕ್ಸಿಜನ್ ಬೆಡ್ ಗಳು, ಲಸಿಕೆ, ಒದಗಿಸುವುದರ ಜೊತೆ ಅಧಿಕಾರಿಗಳು, ವೈದ್ಯರು, ಸ್ವಚ್ಚತಾ ಸಿಬ್ಬಂದಿಗಳ ಮೇಲೆ ಬಹಳ ಒತ್ತಡವಿತ್ತು, ಈ ಸಮಯದಲ್ಲಿ ಪ್ರತಿಯೊಬ್ಬರು ಹಗಲು ರಾತ್ರಿ ಕೆಲಸ ನಿರ್ವಹಿಸಿದ್ದಾರೆ ಎಂದರು.
ಈ ಕೆಲಸ ನಿರ್ವಹಿಸುವವರಿಗೆ ಕಳೆದ 1 ವರ್ಷದಿಂದ ಹೆರಿಗೆ ವಾರ್ಡ್ ನಲ್ಲಿರುವ ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ಊಟವನ್ನು ಕೊಡುತ್ತಿರುವ ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಇವರ ಕೆಲಸ ಮಾದರಿ ಎಂದರು ಹಾಗೂ ಪರಿಸರ ಸಂಸ್ಥೆ,ಮಲಬಾರ್ ಸಂಸ್ಥೆ ಯವರು ಮಿಮ್ಸ್ ಅಸ್ಪತ್ರೆಯಲ್ಲಿರುವ 105 ಸ್ವಚ್ಚತಾ ಸಿಬ್ಬಂದಿಗಳಿಗೆ ಆಹಾರ್ ಕಿಟ್ ವಿತರಣೆ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ಕೋವಿಡ್- 19 ,2 ನೇ ಅಲೆ ವ್ಯಾಪಕವಾಗಿ ಹರಡಿರುವ ಸಂದರ್ಭದಲ್ಲಿ ಸಹಕರಿಸಿದ್ದಕ್ಕೆ ಜಿಲ್ಲಾಡಳಿತದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಮುಂದಿನ ದಿನಗಳಲ್ಲೂ ಉತ್ತಮ ರೀತಿಯಲ್ಲಿ ಸಹಕರಿಸುತ್ತೀರಿ ಎಂಬ ನಿರೀಕ್ಷೆ ಇದೆ ಎಂದರು.
ಈ ಸಂದರ್ಭದಲ್ಲಿ ಮಂಡ್ಯದ ಬ್ಯಾಂಕ್ ಆಫ್ ಬರೋಡದ ಪ್ರಾದೇಶಿಕ ವ್ಯವಸ್ಥಾಪಕರಾದ ಕಪಿಲೇಶ್ ಕೆ.ಆರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕ ಆನಂದ ಸಿ.ಹೆಗ್ಗಡೆ, ಮಿಮ್ಸ್ ನ ನಿರ್ದೇಶಕ ಹೆಚ್ ಆರ್ ಹರೀಶ್, ಮಿಮ್ಸ್ ಪ್ರಾಂಶುಪಾಲರಾದ ಕೆ.ಎಂ ಶಿವಕುಮಾರ್, ಮಲಬಾರ್ ಗೋಲ್ಡ್ ನ ವ್ಯವಸ್ಥಾಪಕರಾದ ದಿಲೀಪ ಹೆಗಡೆ, ಪರಿಸರ ಸಂಸ್ಥೆಯ ಮಂಗಲ ಎಂ ಯೋಗೀಶ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here