ಭಾರತದಲ್ಲಿ ವಾಟ್ಸ್‌ಆ್ಯಪ್‌ ಬ್ಯಾನ್‌ಗಾಗಿ ಹಲವರಿಂದ ಒತ್ತಾಯ!

0
101

ಇತ್ತೀಚಿಗೆ ಈ ವಿಷಯು ಕೇರಳದಲ್ಲಿ ಭಾರಿ ಸುದ್ದಿ ಮಾಡಿದೆ. ಅದುವೇ ಭಾರತದಲ್ಲಿ ವಾಟ್ಸ್‌ಆ್ಯಪ್‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕೇರಳ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಾಗಿದ್ದು, ಭಾರತದಲ್ಲಿ ಕಾನೂನುಬದ್ಧ ಅಧಿಕಾರಿಗಳೊಂದಿಗೆ ಸಹಕರಿಸಲು ಸಿದ್ಧರಿಲ್ಲದಿದ್ದರೆ ವಾಟ್ಸ್‌ಆ್ಯಪ್‌ ಕಾರ್ಯಾಚರಣೆ ಮತ್ತು ಬಳಕೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿತ್ತು. ಕಳೆದ ಕೆಲವು ತಿಂಗಳುಗಳಿಂದ ವಾಟ್ಸ್‌ಆ್ಯಪ್‌ ತನ್ನ ಗೌಪ್ಯತೆ ನೀತಿಯ ಬಗ್ಗೆ ವಿವಾದಗಳಿಗೆ ಗುರಿಯಾಗಿದೆ ಮತ್ತು ಅನೇಕ ಜನರು ಈ ವಿಚಾರವನ್ನು ಒಪ್ಪಿಕೊಂಡಿಲ್ಲ. ಅಂತಹ ಜನರ ಮೇಲೆ ಕ್ರಮ ಕೈಗೊಳಲು ವಾಟ್ಸ್​ಆ್ಯಪ್​ ಸಜ್ಜು ಮಾಡುತ್ತಿದೆ. ಇದು ಬಳಕೆದಾರರ ಕೋಪಕ್ಕೆ ಕಾರಣವಾಯಿತು. ಇದರಿಂದ ಬೇಸತ್ತ ಜನ ವಾಟ್ಸ್‌ಆ್ಯಪ್‌ನಿಂದ ಬೇರೆ ಇತರೆ ಮೆಸೇಜಿಂಗ್ ಆ್ಯಪ್‌ಗಳತ್ತ ಹೋಗಲು ಆರಂಭಿಸಿದರು. ಇದನ್ನು ಗಮನಿಸಿದ ಅಧಿಕಾರಿಗಳು ವಾಟ್ಸ್‌ಆ್ಯಪ್‌ ನೀತಿ ಕುರಿತು ಕೆಲವು ವಿನಂತಿಗಳನ್ನು ಮುಂದಿಟ್ಟರು.

ಇತ್ತೀಚಿಗೆ ಈ ವಿಷಯು ಕೇರಳದಲ್ಲಿ ಭಾರಿ ಸುದ್ದಿ ಮಾಡಿದೆ. ಅದುವೇ ಭಾರತದಲ್ಲಿ ವಾಟ್ಸ್‌ಆ್ಯಪ್‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕೇರಳ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಾಗಿದ್ದು, ಭಾರತದಲ್ಲಿ ಕಾನೂನುಬದ್ಧ ಅಧಿಕಾರಿಗಳೊಂದಿಗೆ ಸಹಕರಿಸಲು ಸಿದ್ಧರಿಲ್ಲದಿದ್ದರೆ ವಾಟ್ಸ್‌ಆ್ಯಪ್‌ ಕಾರ್ಯಾಚರಣೆ ಮತ್ತು ಬಳಕೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿತ್ತು. ಮನವಿಯನ್ನು ಕೇರಳದ ಇಡುಕ್ಕಿ ಜಿಲ್ಲೆಯ ಸಾಫ್ಟ್‌ವೇರ್ ಎಂಜಿನಿಯರ್ ಕೆ.ಜಿ. ಓಮನಕುಟ್ಟನ್ ಸಲ್ಲಿಸಿದ್ದಾರೆ. ಆ ಮನವಿಯಲ್ಲಿ “ವಾಟ್ಸ್‌ಆ್ಯಪ್‌ ಸ್ವತಃ ಬಳಕೆದಾರರ ಗೌಪ್ಯತೆಯನ್ನು ಉಲ್ಲಂಘಿಸುತ್ತದೆ. ಇದು ಸಂವಿಧಾನದ 21 ಲೇಖನ ಅಡಿಯಲ್ಲಿ ಖಾತರಿಪಡಿಸಿದ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ” ಎಂದು ಹೇಳಲಾಗಿದೆ. ಪಠ್ಯ, ಚಿತ್ರಗಳು ಮತ್ತು ವಿಡಿಯೋಗಳ ರೂಪದಲ್ಲಿ ಸುಳ್ಳು ಮಾಹಿತಿಯನ್ನು ವ್ಯಾಪಕವಾಗಿ ಹರಡಲಾಗುತ್ತಿದೆ ಮತ್ತು ಪ್ರಸಾರ ಮಾಡಲಾಗುತ್ತಿದೆ ಮತ್ತು ವಿವಿಧ ರಾಜಕೀಯ ಪಕ್ಷಗಳ ಅನೇಕ ಪ್ರಸಿದ್ಧ ವ್ಯಕ್ತಿಗಳನ್ನು ಹತ್ಯೆ ಮಾಡಲು ಇಂತಹ ಮಾಹಿತಿಯನ್ನು ಬಳಸಲಾಗುತ್ತದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.ಇದು ರಾಜಕೀಯ ನಾಯಕರಲ್ಲಿ ಅತಂಕವನ್ನು ಸೃಷ್ಟಿಸಿದೆ. ಹಾಗೆಯೇ ಎಎನ್‌ಐ ವಿನಂತಿಯನ್ನು ಉಲ್ಲೇಖಿಸಿ, “ಅಪ್ಲಿಕೇಶನ್ ತನ್ನ ತಂತ್ರಜ್ಞಾನವನ್ನು ಬದಲಾಯಿಸಲು ಇಷ್ಟವಿಲ್ಲದಿದ್ದರೆ ಮತ್ತು ಸರ್ಕಾರದೊಂದಿಗೆ ಸಹಕರಿಸದಿದ್ದರೆ, ಅದನ್ನು ದೇಶದಲ್ಲಿ ಕಾರ್ಯನಿರ್ವಹಿಸಲು ಅನುಮತಿಸಬಾರದು. ಈ ಹಿಂದೆ ಕಾನೂನು ಹಾಗೂ ನೀತಿಯನ್ನು ಉಲ್ಲಂಘಿಸಿದ ಆನೇಕ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ವಿರುದ್ಧ ಕೇಂದ್ರವು ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಬಳಸದಂತೆ ನಿಷೇಧ ಹೇರಿದೆ. ಹಾಗೆಯೇ ಈ ಆ್ಯಪ್‌ ನಮ್ಮ ಕಾನೂನು ಹಾಗೂ ನೀತಿಯನ್ನು ಉಲಘಿಸಲು ಬಿಡಬಾರದು ಅದರ ಮೇಲೆ ಕ್ರಮಕೈಗೊಳ್ಳಿ ಎಂದು ಮನವಿಯಲ್ಲಿ ಹೇಳಲಾಗಿದೆ.

ಆದರೆ, ಎಎನ್‌ಐ ಪ್ರಕಾರ ಮುಖ್ಯ ನ್ಯಾಯಮೂರ್ತಿ ಎಸ್. ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರು ಅರ್ಜಿಯನ್ನು ತಿರಸ್ಕರಿಸಿದ್ದಾರೆ.ವಾಟ್ಸ್‌ಆ್ಯಪ್‌ನ ಸಂದೇಶಗಳನ್ನು ಬಳಕೆದಾರರು ಒಳ್ಳೆಯ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆಯೇ ಮತ್ತು ಅದನ್ನು ಸಾಕ್ಷಿಯಾಗಿ ಬಳಸಲಾಗಿದೆಯೇ ಎಂದು ತೀರ್ಮಾನಿಸುವುದು ತನಿಖಾ ಸಂಸ್ಥೆ ಮತ್ತು ನ್ಯಾಯಾಲಯದ ಮೇಲಿದೆ. ನಾವು ಈ ರೀತಿಯ ಅರ್ಜಿಗಳನ್ನು ಪುರಸ್ಕರಿಸಲು ಸಾಧ್ಯವಿಲ್ಲ. ಹೀಗಾಗಿ, ವಾಟ್ಸ್‌ಆ್ಯಪ್‌ ನಿಷೇಧದ ಕುರಿತ ಅರ್ಜಿಯನ್ನು ತಿರಸ್ಕರಿಸುತ್ತಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.

LEAVE A REPLY

Please enter your comment!
Please enter your name here