ಕೊಟ್ಟೂರು ಕೆರೆಗಳಿಗೆ ನೀರು ಹರಿಸಲು ಸರ್ಕಾರಕ್ಕೆ ಕೆ.ಎಸ್. ಈಶ್ವರ ಗೌಡ ಒತ್ತಾಯ!

0
1063

ವಿಜಯನಗರ:28: ಕೊಟ್ಟೂರು ಕೆರೆಗೆ ಒಂದೂವರೆ ಕಿ.ಮೀ. ದೂರದಲ್ಲಿ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಪೈಪ್ ಲೈನ್ ಹಾದು ಹೋಗಿದ್ದು, ಇಲ್ಲೊಂದು ಜಾಕ್‌ವೆಲ್ ಸ್ಥಾಪಿಸಿ ಕೊಟ್ಟೂರು ಸೇರಿದಂತೆ ತಾಲೂಕಿನ ಎರಡು ಕೆರೆಗೆ ನೀರು ಹರಿಸಬೇಕೆಂದು ದಿ. ಕೆ.ಎಸ್. ಈಶ್ವರಗೌಡ್ರು ಸ್ಮಾರಕ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಈಶ್ವರ ಗೌಡ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದಲ್ಲಿ ಗುರುವಾರ ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕುರಿತು ಬುಧವಾರ ಸುಮಾರು 25 ಜನ ರೈತರನ್ನು ಒಳಗೊಂಡ ನಿಯೋಗ ಬೆಂಗಳೂರಿನಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಬೇಟಿಯಾಗಿ, ಕೊಟ್ಟೂರಿನಿಂದ ಒಂದೂವರೆ ಕಿ.ಮೀ. ದೂರದಲ್ಲಿ ಹಾದು ಹೋಗಿರುವ ಪೈಪ್ ಲೈಪ್ ಲೈನ್ ನಿಂದ ಕೊಟ್ಟೂರು ಕೆರೆಗೆ ಸುಲಭದಲ್ಲಿ ನೀರು ಹರಿಸುವ ಬಗ್ಗೆ ವಿವರಿಸಿದ್ದು, ಇದಕ್ಕೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಇಲ್ಲಿ ಹಾದು ಹೋಗಿರುವ ಪೈಪ್ ಲೈನ್‌ನಿಂದ ಕೇವಲ 5 ಕೋಟಿ ರೂ. ವೆಚ್ಚದಲ್ಲಿ ಕೊಟ್ಟೂರು, ಲೋಟ್ಟನಕೇರಿ, ತಿಮ್ಮಲಾಪುರ ಕೆರೆಗೆ ನೀರು ತುಂಬಿಸಬಹುದು. ಇದಕ್ಕೆ ಕೇವಲ 0.35 ಟಿ.ಎಂ.ಸಿ. ಅಲ್ಪನೀರು ಸಾಕು ಎಂದು ವಿವರಿಸಿದರು.

ಕೂಡ್ಲಿಗಿ ತಾಲೂಕು ಕೆರೆಗಳಿಗೆ ನೀರು ಹರಿಸಲು ರಾಜವಾಳದಿಂದ ಕೊಟ್ಟೂರುಗೆ 70 ಕಿ.ಮೀ. ಬೃಹತ್ ಪೈಪ್ ಲೈನ್ ಅಳವಡಿಸಲಾಗಿದೆ.
ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ 17 ಕೆರೆಗಳಿಗೂ ನೀರು ತುಂಬಿಸಲು ಇದೇ ಮಾರ್ಗವಾಗಿ ಮತ್ತೊಮ್ಮೆ ಪೈಪ್ ಲೈನ್ ಅಳವಡಿಸಬೇಕು. ಇದಕ್ಕೆ 380 ಕೋಟಿ ರೂ. ವೆಚ್ಚವಾಗಲಿದೆ ಎಂದರು.
ಇದೊಂದು ಅವೈಜ್ಞಾನಿಕ ಯೋಜನೆ, ಸಾರ್ವಜನಿಕರ ಹಣವನ್ನು ವಿನಾಕಾರಣ ಹೇಗೆ ವ್ಯರ್ಥವಾಗಲಿದೆ ಎಂಬುದನ್ನು ಯೋಜನೆಯ ನಕ್ಷೆಯೊಂದಿಗೆ ಕೆ.ಎಸ್. ಈಶ್ವರಗೌಡ ವಿವರಿಸಿದರು.
ಇದರ ಬದಲು ಈಗಾಗಲೇ ಕೂಡ್ಲಿಗಿ ಕೆರೆಗಳಿಗೆ ನೀರು ತುಂಬಿಸಲು ಅಳವಡಿಸಿರುವ ಪೈಪ್ ಲೈನ್ ಬಳಸಿಕೊಂಡು ಕೇವಲ 5 ಕೋಟಿ ರೂ. ವೆಚ್ಚದಲ್ಲಿ ಹಗರಿಬೊಮ್ಮಹಳ್ಳಿ ವಿಧಾನಸಭಾ ಕ್ಷೇತ್ರದ 17 ಕೆರೆಗಳಿಗೂ ನೀರು ತುಂಬಿಸಬುದು. ಇದರಿಂದ ಸರ್ಕಾರಕ್ಕೆ 375 ಕೋಟಿ ರೂ. ಉಳಿತಾಯವಾಗಲಿದೆ ಎಂದರು.
ಕೇವಲ 5 ಕೋಟಿ ರು. ವೆಚ್ಚದಲ್ಲಿ ಇಡೀ ಹಗರಿಬೊಮ್ಮಹಳ್ಳಿ ವಿಧಾನ ಸಭಾ ಕ್ಷೇತ್ರದ 17 ಕೆರೆಗಳಿಗೆ ನೀರು ತುಂಬಿಸುವ ಮುಕ್ತಾಯವಾಗುವ ಯೋಜನೆಗೆ 380 ಕೋಟಿ ರೂ. ಯಾಕೆ ವೆಚ್ಚಮಾಡಬೇಕೆಂದನ್ನು ಸಚಿವ ಗೋವಿಂದಕಾರಜೋಳ ಅವರಿಗೆ ಮನದಟ್ಟು ಮಾಡಿ ವಿವರಿಸಿರುವುದಾಗಿ ಹೇಳಿದರು.

ಮೇ 11, 12 ರಂದು ಪುನ: ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಕಂಡು ಈ ಯೋಜನೆ ಸುಲಭದ ಮಾರ್ಗವನ್ನು ಮನದಟ್ಟುಮಾಡಿಕೊಡುವುದಾಗಿ ತಿಳಿಸಿದರು.
ಕೊಟ್ಟೂರು ಕೆರೆ ಸೇರಿದಂತೆ ಹಗರಿಬೊಮ್ಮಹಳ್ಳಿ ವಿಧಾನ ಸಭಾ ಕ್ಷೇತ್ರದ 17 ಕೆರೆಗಳಿಗೆ ನೀರು ತುಂಬಿಸಲು 380 ಕೋಟಿ ರೂ. ವ್ಯರ್ಥವಾಗಲಿದೆ. ಇದರ ಹಿಂದಿರುವ ಮರ್ಮವನ್ನು ನಮ್ಮ ಟ್ರಸ್ಟ್ ಮೂಲಕ ಕೊಟ್ಟೂರು ಸೇರಿದಂತೆ ಹಗರಿಬೊಮ್ಮಹಳ್ಳಿ ವಿಧಾನ ಸಭಾಕ್ಷೇತ್ರದ ಜನತೆಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.
ಇಲ್ಲಿ ಹಾದು ಹೋಗಿರುವ ಪೈಪ್ ಲೈನ್ ಮೂಲಕ ಕೊಟ್ಟೂರು ತಾಲೂಕಿನ ಮೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ತಕ್ಷಣ ಕೈಗೆತ್ತಿಕೊಳ್ಳಬೇಕು. ಇಲ್ಲವಾದಲ್ಲಿ ಜನಾಂದೋಲನದ ಮೂಲಕ ಬೀದಿಗಿಳಿದು ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಈ ಸಂಧರ್ಭದಲ್ಲಿ ಎಚ್ಚರಿಕೆಯನ್ನು ರವಾನಿಸಿದರು.

ಸಚಿವ ಗೋವಿಂದ ಕಾರಜೋಳರಲ್ಲಿಗೆ ಹಿರಿಯ ವಕೀಲ ಎಂ.ಎಂ.ಜೆ ಸ್ವರೂಪಾನಂದ, ಕಲ್ಲೇಶಪ್ಪ, ತಿಮ್ಮಲಾಪುರ ಚನ್ನಬಸವನಗೌಡ, ಬೋರವೆಲ್ ತಿಪ್ಪೇಸ್ವಾಮಿ, ಸಿದ್ದಯ್ಯ, ಅಜ್ಜನಗೌಡ, ವೀರೇಶಗೌಡ, ನಾಗರಾಜ್ ಗೌಡ, ದೇವೇಂದ್ರಗೌಡ, ಅಳವಂಡಿ ಕೊಟ್ರೇಶ, ಹರಪನಹಳ್ಳಿ ನಾಗರಾಜ್, ಬಸವರಾಜ್, ಅಶೋಕ, ಹೂಗಾರ್ ನಾಗರಾಜ್, ಪ್ರಕಾಶ, ಟಿ.ವಿ. ವೀರೇಶಗೌಡ, ಮಹಾಂತೇಶ ನಿಯೋಗದಲ್ಲದ್ದರು

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here