ಸೂಪರ್​ಸ್ಟಾರ್ ಸೂಪರ್ ರಜನೀಕಾಂತ್​ ಯುಎಸ್​ನಲ್ಲಿ ಈಗ ಏನು ಮಾಡ್ತಿದ್ದಾರೆ? ಇಲ್ಲಿದೆ ವಿವರ

0
115

ರಜನೀಕಾಂತ್​ ಹಾಗೂ ಪತ್ನಿ ಲತಾ, ಮಗಳು ಐಶ್ವರ್ಯಾ ಮತ್ತು ಅಳಿಯ ಧನುಷ್ ಹಾಗೂ ಈ ದಂಪತಿಯ ಪುತ್ರರು​ ಜೂ.19ರಂದು ಚೆನ್ನೈ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದರು. ಅಂದು ದುಬೈ ಮೂಲಕ ಯುಎಸ್​ಗೆ ತೆರಳಿದ್ದಾರೆ. ಇನ್ನೂ ಕೆಲವು ತಿಂಗಳಗಳ ಕಾಲ ಈ ಕುಟುಂಬ ಯುಎಸ್​​ನಲ್ಲಿಯೇ ಇರಲಿದೆ. ಪದೇಪದೇ ಅಮೆರಿಕಕ್ಕೆ ಹೋಗುವ ರಜನೀಕಾಂತ್​ಗೆ ಅಲ್ಲಿಯೂ ಕೂಡ ದೊಡ್ಡ ಅಭಿಮಾನಿ ಬಳಗವಿದೆ. ಈ ಬಾರಿ ಹೋದಾಗ ರಜನೀಕಾಂತ್​ ಪಶ್ಚಿಮ ವರ್ಜೀನಿಯಾಕ್ಕೆ ಭೇಟಿ ಕೊಟ್ಟು ಅಲ್ಲಿರುವ ತಮ್ಮ ಅಭಿಮಾನಿಗಳೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ಫೋಟೋಕ್ಕೆ ಪೋಸ್​ ಕೊಟ್ಟಿದ್ದಾರೆ. ಖ್ಯಾತ ಗೀತರಚನೆಕಾರ ವೈರಮುತ್ತು ರಜನೀಕಾಂತ್​ಗೆ ಫೋನ್​ ಮಾಡಿ ಆರೋಗ್ಯ ವಿಚಾರಿಸಿದ್ದಾಗಿ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಜನೀಕಾಂತ್​ ಅವರ ಆರೋಗ್ಯ ತಪಾಸಣೆ ನಡೆಯುತ್ತಿದೆ. ಅವರು ಇನ್ನೇನು ಕೆಲವೇ ದಿನಗಳಲ್ಲಿ ಭಾರತಕ್ಕೆ ವಾಪಸ್ ಆಗುತ್ತಾರೆ ಎಂದೂ ತಿಳಿಸಿದ್ದಾರೆ. ರಜನೀಕಾಂತ್​ ಅಮೆರಿಕದಿಂದ ವಾಪಸ್​ ಆಗುತ್ತಿದ್ದಂತೆ ಮತ್ತೆ ತಮ್ಮ ಮುಂದಿನ ಸಿನಿಮಾ ಅಣ್ಣಾತೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಸಿರುಥೈ ಸಿವಾ ನಿರ್ದೇಶನ ಮಾಡುತ್ತಿದ್ದು, ನಯನತಾರಾ, ಕೀರ್ತಿ ಸುರೇಶ್​, ಖುಷ್ಬು, ಮೀನಾ, ಪ್ರಕಾಶ್​ ರಾಜ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here