ಸಿನಿಮಾ ಮೂಲಕ ಜೀವಂತವಾಗಿರುವ ಕಲಾವಿದ ಟಿ.ಎನ್ ಬಾಲಕೃಷ್ಣರ ಪುಣ್ಯತಿಥಿ

0
106

ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ಮಹಾನ್​ ಕಲಾವಿದರಲ್ಲಿ ಟಿ.ಎನ್​ ಬಾಲಕೃಷ್ಣ ಕೂಡಾ ಒಬ್ಬರು. ಕೇವಲ ನಟರಾಗಿ ಒಂದೇ ಅಲ್ಲದೇ ನಿರ್ಮಾಪಕರಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡವರು. ಸುಮಾರು 510ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಸ್ಯ ಚಟಾಕಿ ಹಾರಿಸುತ್ತಾ, ಗಾಂಭೀರ್ಯದೊಂದಿಗೆ ಖಳನಾಯಕನಾಗಿ, ಪೋಷಕ ಪಾತ್ರದೊಡನೆ ಮಿಂಚಿ ಯಾವ ಪಾತ್ರಕ್ಕೂ ಸೈ ಎನ್ನುತ್ತಾ ಕನ್ನಡಿಗರ ಮನ ಗೆದ್ದ ಕಲಾವಿದನ್ನು ಇಂದು ನೆನೆಯಲೇಬೇಕು. ನಮ್ಮ ಜತೆಗೆ ಇಲ್ಲದಿದ್ದರೂ ಸಿನಿಮಾಗಳ ಮೂಲಕವಾಗಿ ಯಾವಾಗಲೂ ಜೀವಂತವಾಗಿರುತ್ತಾರೆ ಟಿ.ಎನ್​ ಬಾಲಕೃಷ್ಣ.

ಬಾಲಕೃಷ್ಣ ಅವರು 1996 ನವೆಂಬರ್​ 2ರಂದು ಜನಿಸಿದರು. ಇವರ ತಾಯಿ ತಂದೆ ದಿನಗೂಲಿ ಕೆಲಸಗಾರರು. ಇದ್ದಕ್ಕಿದ್ದಂತೆಯೇ ತಂದೆ ಅನಾರೋಗ್ಯದಿಂದ ಬಳಲುತ್ತಿರುವಾಗ ತಾಯಿ ಬಿಕ್ಷೆ ಬೇಡುವ ಪರಿಸ್ಥಿತಿ ಎದುರಾಯಿತು. ತುತ್ತು ಅನ್ನಕ್ಕೆ ಕಷ್ಟಪಡುವ ಪರಿಸ್ಥಿತಿ ಎದುರಾಗಿತ್ತು. ಆದರೆ ಜೀವನ ನಡೆಸುವುದು ವಿಪರೀತ ಕಷ್ವಾಗಿ ಬಿಟ್ಟಿತು. ಹುಟ್ಟಿದ ಊರಿನ ವ್ಯಾಪಾರಿಯೊಬ್ಬರ ಉಪ ಪತ್ನಿಗೆ ಬಾಲಕೃಷ್ಣರನ್ನು ಮಾರಿ ಹಣ ಸಂಪಾದಿಸಿದಳು. ಸಾಕು ತಾಯಿ ಬಾಲಕೃಷ್ಣರನ್ನು ಶಾಲೆಗೆ ಸೇರಿಸಿ ವಿದ್ಯಾಭ್ಯಾಸ ನೀಡಿದರು.

ದುರಾದೃಷ್ಟವಶಾತ್​ ಕಪಾಳಕ್ಕೆ ಬಿದ್ದ ಏಟಿನಿಂದಾಗಿ ಕಿವಿ ಕಿವುಡಾಯಿತು. ಆದರೆ ಬಾಲಕೃಷ್ಣ ಅವರಿಗೆ ನಾಟಕ ಕಲಿಯುವ ಹುಮ್ಮಸ್ಸು. ನಾಟಕ್ಕೆ ಸೇರಿಕೊಂಡ ಬಳಿಕ ರಂಗಭೂಮಿ ಕಲಾವಿದರಾಗಿ ಹೊರಹೊಮ್ಮಿದರು. ಅಲ್ಲಿಂದ ಅಭಿನಯದ ಹಾದಿ ಹಿಡಿದು ಕಲಾವಿದರಾಗಿ ಜನ- ಮನ ಗೆಲ್ಲುತ್ತಾ ಸಾಗಿದರು. ಸುಮಾರು 50ಕ್ಕೂ ಹೆಚ್ಚು ನಾಟಕಗಳನ್ನು ಬರೆದರು. ಅವರು ಮೊದಲು ಅಭಿನಯಿಸಿದ ನಾಟಕ ‘ಕೃಷ್ಣಲೀಲಾ’.

ಸಿನಿಮಾ ಕ್ಷೇತ್ರ:
ರಾಧಾರಮಣ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಕಣ್ತೆರೆದು ನೋಡು, ಸಂಪತ್ತಿಗೆ ಸವಾಲ್​, ತ್ರಿಮೂರ್ತಿ, ಗಮಧದ ಗುಡಿ, ಭಾಗ್ಯದ ಲಕ್ಷ್ಮೀ ಬಾರಮ್ಮ, ಬಂಗಾರದ ಮನುಷ್ಯ ಹೀಗೆ 510ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನ ಬಳಗವನ್ನು ಸಂಪಾದಿಸಿದ್ದಾರೆ. ಹಗಲಿರುಳು ಶ್ರಮ ಪಟ್ಟು ದುಡಿದು, ಕನ್ನಡಿಗರಿಗೆ ಮನರಂಜನೆ ನೀಡುತ್ತಾ ಬಂದಿದ್ದ ಅಪ್ರತಿಮ ಕಲಾವಿದ ಟಿ.ಎನ್​ ಬಾಲಕೃಷ್ಣ ಅವರನ್ನು ಇಂದು ಸ್ಮರಿಸಲೇಬೇಕು. ಕ್ಯಾನ್ಸರ್​ ರೋಗದಿಂದ ಬಳಲುತ್ತಿದ್ದ ಟಿ.ಎನ್​ ಬಾಲಕೃಷ್ಣ ಅವರು 1995 ಜುಲೈ 19ರಂದು ಕೊನೆಯುಸಿರೆಳೆದರು.

LEAVE A REPLY

Please enter your comment!
Please enter your name here