ಬಾಲಿವುಡ್ ನಲ್ಲಿ ಆಕ್ಷನ್ ಕಟ್ ಹೇಳಲಿರುವ ಕನ್ನಡಿಗ ನಿರ್ದೇಶಕ ಕಂ ನಿರ್ಮಾಪಕ ಶಶಿಧರ್ ಕೆ.ಎಂ.

0
339

ಕನ್ನಡ ಚಿತ್ರರಂಗ ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗಕ್ಕೆ ಚಿನ್ನದ ಮೊಟ್ಟೆ ಇಡುವ
ಇಂಡಸ್ಟ್ರಿಯಾಗಿದೆ ಎಂದು ಹೇಳಬಹುದು. ಬಾಲಿವುಡ್ ನ ಬಾದ್ ಷಾ ಗಳ ಸಿನಿಮಾಗಳು ಓಡದೆ ಮೂಲೆ ಸೇರುತ್ತಿರುವಾಗ ಕನ್ನಡ ಚಿತ್ರರಂಗದಿಂದ ಬರುವ ಸಿನಿಮಾಗಳು ದಕ್ಷಿಣಭಾರತದಲ್ಲಿ ಮಾತ್ರವಲ್ಲದೆ ಬಾಲಿವುಡ್ ಮಂದಿಗೂ ಹಬ್ಬದ ಊಟವನ್ನೆ ಬಡಿಸಿ ಮನೊರಂಜನೆಯನ್ನು ನೀಡಿ ಗಲ್ಲಪೆಟ್ಟಿಗೆಯಲ್ಲಿ ದಾಖಲೆಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದಕ್ಕೆ ತಕ್ಕ ಉದಾಹರಣೆ ಕೆ.ಜಿ.ಎಫ್ ಮತ್ತು 777 ಚಾರ್ಲಿ ಸಿನಿಮಾಗಳು ಈಗಾಗಲೇ ವಿಕ್ರಾಂತ್ ರೋಣ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುವ ಸಂಧರ್ಭದಲ್ಲಿ ಕನ್ನಡ ಚಿತ್ರರಂದಿಂದ ಬಾಲಿವುಡ್ ಗೆ ಮತ್ತೊಂದು ಚಿತ್ರ ರಿಲೀಸ್ ಗೂ ಮುನ್ನವೆ ಹಿಂದಿ ರಿಮೇಕ್ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಹಿಂದಿಯ ರಿಮೇಕ್ ಚಿತ್ರಕ್ಕೂ ಇವರೆ ನಿರ್ದೇಶಕರು ಎನ್ನುವುದು ಮತ್ತೊಂದು ಸಮಚಾರ.

ಅಷ್ಟಕ್ಕೂ ಆ ಚಿತ್ರ ಯಾವುದು ಅಂದುಕೊಂಡಿರ? ಮೊನ್ನೆ ತಾನೆ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ಟ್ರೈಲರ್ ಬಿಡುಗಡೆ ಮಾಡಿ ಕನ್ನಡಿಗರ ಮನೆಮಾತಗಿರುವ ಸಿನಿಮಾ “ಶುಗರ್ ಲೆಸ್”. ಎಸ್,ಶುಗರ್ ಲೆಸ್ ಸಿನಿಮಾ ಈಗಾಗಲೇ ಟ್ರೈಲರ್ ನಿಂದ ಸದ್ದು ಮಾಡುತ್ತಿದ್ದು ರಿಲೀಸ್ ಗೂ ಮುನ್ನವೆ ಹಿಂದಿಗೆ ರಿಮೇಕ್ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದು ಶುಗರ್ ಲೆಸ್ ಚಿತ್ರವನ್ನ ಮೊದಲ ಬಾರಿಗೆ ನಿರ್ದೇಶನ ಮಾಡಿ ನಿರ್ಮಾಣ ಮಾಡಿರುವ ಶಶಿಧರ್ ಕೆ.ಎಂ.ಅವರೆ ಹಿಂದಿಗೂ ಆಕ್ಷನ್ ಕಟ್ ಹೇಳುತ್ತಿರುವುದು ಕನ್ನಡಿಗರಿಗೆ ಮತ್ತೊಂದು ಖುಷಿ ವಿಚಾರ ಅಂತಾನೆ ಹೇಳಬಹುದು.

ಹಿಂದಿಯ ಬ್ಲಾಕ್ ಪಾಂಥರ್ ಮೂವಿ ಮುಖ್ಯಸ್ಥರಾದ ಶಿವ ಆರ್ಯನ್ ಅವರು ಶುಗರ್ ಲೆಸ್ ಸಿನಿಮಾ ಟ್ರೈಲರ್ ಬಿಡುಗಡೆ ದಿನವೇ ಹಿಂದಿ ರಿಮೇಕ್ ರೈಟ್ಸ್ ಮತ್ತು ಶುಗರ್ ಲೆಸ್ ಚಿತ್ರದ ನಿರ್ದೇಶಕರೆ ಹಿಂದಿಗೂ ನಿರ್ದೇಶನ ಮಾಡುತ್ತಾರೆ ಎಂದು ಅಧಿಕೃತ ವಾಗಿ ಅನೌನ್ಸ್ ಮಾಡಿದರು.

ಶುಗರ್ ಲೆಸ್ ಚಿತ್ರಕ್ಕೆ ಶಶಿಧರ ಕೆ.ಎಂ.ಅವರು ಮೊದಲ ಭಾರಿಗೆ ಆಕ್ಷನ್ ಕಟ್ ಹೇಳಿದ್ದು ಅಲ್ಲದೆ ಚಿತ್ರಕ್ಕೆ ಬಂಡವಾಳವನ್ನು ಹಾಕಿದ್ದಾರೆ. ಸಹ‌ ನಿರ್ಮಾಪಕರಾಗಿ ವಿಜಯಲಕ್ಷ್ಮಿ ಕೃಷ್ಣೇಗೌಡ ಜೊತೆಗೂಡಿ, ದಿವ್ಯ ಶಶಿಧರ್ ಮತ್ತು ರಘು ಸಿಂಗಂ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.ಲವಿತ್ ಅವರ ಕ್ಯಾಮರಾ ವರ್ಕ್, ಅನೂಪ್ ಸೀಳಿನ್ ಅವರ ಸಂಗೀತ,ಗುರು ಕಶ್ಯಪ್ ಅವರ ಸಂಭಾಷಣೆ, ಡಾ.ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಸೇರಿದಂತೆ ಹಲವಾರು ತಂತ್ರಜ್ಞರು ಚಿತ್ರದಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಚಿತ್ರದ ನಾಯಕರಾಗಿ ಪೃಥ್ವಿ ಅಂಬರ್, ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್, ಪೋಷಕ ಪಾತ್ರಗಳಲ್ಲಿ ದತ್ತಣ,ಹೊನ್ನವಳ್ಳಿ ಕೃಷ್ಣ, ಎಸ್. ನಾರಯಾಣ್, ನವೀನ್ ಪಡಿಲ್, ಪದ್ಮಜ ರಾವ್, ರಘು ರಮಣಕೊಪ್ಪ ,ಗಿರೀಶ್ ಜತ್ತಿ , ಹಾಸ್ಯನಟ ಧರ್ಮಣ್ಣ ಕಡೂರ್, ಸೇರಿದಂತೆ ಇತೆರ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಶುಗರ್ ಲೆಸ್ ಚಿತ್ರವನ್ನ ಅಭಿಜಿತ್ ಎಂಟರ್ ಪ್ರೈಸಸ್ ವಿತರಣಾ ಜವಾಬ್ದಾರಿಯನ್ನ ಹೊತ್ತಿದ್ದು, ಶುಗರ್ ಲೆಸ್ ಚಿತ್ರವು ಇದೇ ಜುಲೈ 8 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

LEAVE A REPLY

Please enter your comment!
Please enter your name here