ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ವತಿಯಿಂದ ಜೂ 12ರಂದು ರಾಜ್ಯವ್ಯಾಪಿ ಡಿ.ಸಿ ಕಛೇರಿಗಳ ಮುಂದೆ ಪ್ರತಿಭಟನೆ.

0
143

ವರದಿ:-ಮಹೇಶ್
ಬಳ್ಳಾರಿ:ಜುಲೈ.07.ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ವತಿಯಿಂದ ಬಳ್ಳಾರಿಯ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಯಿತು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಜೆ.ಸತ್ಯಬಾಬು, ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಕಾಮ್ರೇಡ್ ಆರ್.ಸೋಮಶೇಖರ್ ಗೌಡ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಹಾಗು ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷರಾದ ಕಾಮ್ರೇಡ್ ಎ.ದೇವದಾಸ್, ಜಿಲ್ಲಾ ಸಮಿತಿ ಸದಸ್ಯ ಕಾಮ್ರೇಡ್ ಸುರೇಶ್.ಜಿ, ಕಾಮ್ರೇಡ್ ಅಜ್ಜಿ ಶ್ರೀನಿವಾಸ್ ಪತ್ರಿಕಾ ಗೋಷ್ಠಿಯಲ್ಲಿದ್ದರು.

ಕಟ್ಟಡ ಕಾರ್ಮಿಕ ಸಂಘಗಳು ಮತ್ತು ಕೇಂದ್ರ ಕಾರ್ಮಿಕ ಸಂಘಗಳ ಮೂಲಕವೇ ನೈಜ ಫಲಾನುಭವಿಗಳಿಗೆ ರೇಷನ್ ಕಿಟ್ ವಿತರಿಸಲು ಆಗ್ರಹಿಸಿ.

ಕೋವಿಡ್ ಫರಿಹಾರ ರೂ 10 ಸಾವಿರಕ್ಕಾಗಿ ಹಾಗು ಗೃಹ ನಿರ್ಮಾಣಕ್ಕೆ ಸಹಾಯಧನ, ಸಂಪೂರ್ಣ ವೈದ್ಯಕೀಯ ವೆಚ್ಚ ಪಾವತಿ ಹಾಗು ಬಾಕಿ ಸೌಲಭ್ಯಗಳ ವಿಲೇವಾರಿಗಾಗಿ ಒತ್ತಾಯಿಸಿ.

ಕ್ಯಾಲೆಂಡರ್ ಮುಂದ್ರಣ, ತಂತ್ರಾಂಶ ಅಳವಡಿಕೆ, ಟೂಲ್ ಕಿಟ್, ಅಂಬುಲನ್ಸ್ ಕರೀದಿ, ಸೇಪ್ಟಿ ಕಿಟ್, ಹಾಗು ಆಹಾರ ಕಿಟ್ ಗಳ, ಕರೀದಿ ಕುರಿತಾದ ದಾಖಲೆಗಳನ್ನು ಕಾರ್ಮಿಕ ಸಂಘಗಳಿಗೆ ನೀಡಲು ಆಗ್ರಹಿಸಿ ಮತ್ತು ಮಂಡಳಿ ನಿಧಿಯನ್ನು ಕಟ್ಟಡ ಮತ್ತು ಇತರೆ ನಿರ್ಮಾಣಗಳ ಬಳಕೆ ತಡೆಗಾಗಿ.

ಸಿಮೆಂಟ್, ಕಬ್ಬಿಣ, ಬಣ್ಣ, ಮರುಳು ಮೊದಲಾದ ಕಟ್ಟಡ ಸಾಮಾಗ್ರಿ ಬೆಲೆಗಳ ನಿಯಂತ್ರಣಕ್ಕಾಗಿ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಇಳಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿ.

ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಆಹಾರ ಕಿಟ್ ಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಮತ್ತು ಶಾಸಕರಿಗೆ ನೀಡುತ್ತಿರುವುದನ್ನು ಖಂಡಿಸಿ.

ಈ ಮೇಲಿನ ಬೇಡಿಕೆಗಳಿಗಾಗಿ ಆಗ್ರಹಿಸಿ ಜುಲೈ 12 ರಂದು ಬಳ್ಳಾರಿಯ ಡಿ.ಸಿ ಕಛೇರಿ ಮುಂದೆ ಪ್ರತಿಭಟನೆ ನಡೆಯಲಿದೆ.

LEAVE A REPLY

Please enter your comment!
Please enter your name here