ಶಾಲೆಗಳ ಪುನರಾಂಭದ ಸುಳಿವು ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

0
195

ಕೊರೊನಾ ಸೋಂಕಿನಿಂದಾಗಿ ಕಳೆದ ಒದೂವರೆ ವರ್ಷದಿಂದ ಶಾಲೆಗಳು ಪ್ರಾರಂಭವಾಗದೆ ಮಕ್ಕಳು ಮನೆಯಲ್ಲೇ ಉಳಿಯುವಂತಾಗಿದೆ. ಶಿಕ್ಷಣ ಎಂಬುದು ಕೈಗೆಟುಕದಂತಾಗಿದೆ. ಈ ಮಧ್ಯೆ, ಕೊರೊನಾ ಮೂರನೆ ಅಲೆ ಹಾವಳಿ ಎದುರಿಗೇ ಧುತ್ತನೆ ಎದುರಾಗಿದೆ. ಆದರೂ ಮಕ್ಕಳ ಶಾಲೆ ಪುನರಾರಂಭದ ಬಗ್ಗೆ ಆಗಾಗ್ಗೆ ಮಾತುಗಳು ಕೇಳೀಬರುತ್ತಿವೆ. ಈ ಬಾರಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಕ್ಟೋಬರ್ ಬಳಿಕ ಶಾಲೆಗಳ ಪುನರಾಂಭದ ಸುಳಿವು ನೀಡಿದ್ದಾರೆ.

ಎಸ್​ಎಸ್​ಎಲ್​ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಶಾಲೆಗಳ ಭೇಟಿ ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು ಶಾಲೆ ಆರಂಭಿಸುವ ಬಗ್ಗೆ ಅಕ್ಟೋಬರ್​​ನಲ್ಲಿ ತೀರ್ಮಾನಿಸ್ತೇವೆ ಎಂದಿದ್ದಾರೆ.

ತಜ್ಞರು, ಪೋಷಕರು, ಶಿಕ್ಷಕರ ಜೊತೆ ಸಭೆ ಮಾಡಲಾಗಿದೆ. ಆರೋಗ್ಯ ಇಲಾಖೆಯ ಸಹಮತ ಕೇಳುತ್ತಿದ್ದೇವೆ. ಶಾಲೆಗಳನ್ನು ಯಾವಾಗ ಪ್ರಾರಂಭ ಮಾಡಬೇಕು, ಯಾವ ರೀತಿ ಆರಂಭ ಮಾಡಬೇಕೆಂದು ತೀರ್ಮಾನಿಸ್ತೇವೆ. ಈ ಕುರಿತು ಅಕ್ಟೋಬರ್ ಮೊದಲ ವಾರದಲ್ಲಿ ತೀರ್ಮಾನ ಮಾಡಲಾಗುವುದು ಎಂದು ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here