ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಇದೀಗ ಬಣ್ಣದ ಲೋಕಕ್ಕೆ ಎಂಟ್ರಿ

0
168

ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್​ ಅವರ ಮಗಳು ಅಲ್ಲು ಅರ್ಹಾ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್​ಗಳ ಮೂಲಕ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದಾರೆ. ಹೀಗಿರುವಾಗಲೇ ಈ ಸ್ಟಾರ್​ ಕಿಡ್​ಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಹ ಸಿಕ್ಕಿದೆ. ಹೌದು, ಸ್ಟೈಲಿಶ್​ ಪ್ರಿನ್ಸೆಸ್​ ಈಗ ಸಮಂತಾ ಅಕ್ಕಿನೇನಿ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.

ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಅವರ ಸ್ಟೈಲಿಶ್​ ಪ್ರಿನ್ಸೆಸ್​ ಈಗ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಪ್ರತಿಭೆ ಈಗ ಬಣ್ಣದ ಲೋಕಕ್ಕೆ ಕಾಲಿಡುತ್ತಿದೆ. ಅಲ್ಲು ರಾಮಲಿಂಗಯ್ಯ ಅವರ ಮರಿ ಮೊಮ್ಮಗಳಾದ ಅಲ್ಲು ಅರ್ಹಾ ಈಗ ತೆಲುಗು ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ.

ಗುಣಶೇಖರ್​ ಅವರ ಶಾಕುಂತಲಂ ಚಿತ್ರದಲ್ಲಿ ಸಮಂತಾ ಅಕ್ಕಿನೇನಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಅಲ್ಲು ಅರ್ಹಾ. ಈ ಸಂತಸದ ವಿಷಯವನ್ನು ಅಲ್ಲು ಅರ್ಜುನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶಾಕುಂತಲಂ ಸಿನಿಮಾದಲ್ಲಿ ಅಲ್ಲು ಅರ್ಹಾ ರಾಜಕುಮಾರ ಭರತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಸಮಂತಾ ಅವರ ಜೊತೆ ಅಲ್ಲು ಅರ್ಹಾ 10 ದಿನಗಳ ವರೆಗೆ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ.

LEAVE A REPLY

Please enter your comment!
Please enter your name here