ಸಂಡೂರು ಧ್ಯಾನ ತರಬೇತಿ ಕೇಂದ್ರದಿಂದ ಮಾಸ್ಕ್ ಸ್ಯಾನಿಟೈಸರ್ ವಿತರಣೆ

0
206

ಹಾಯ್ ಸಂಡೂರ್,ನ್ಯೂಸ್. ಸಂಡೂರು.ಜು:16 ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಯೋಧರಂತೆ ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ನಗರವನ್ನು ಸ್ವಚ್ಛವಾಗಿಡುವಲ್ಲಿ ಶ್ರಮಿಸುವ ಪುರಸಭೆಯಲ್ಲಿ ಕಾರ್ಯನಿರ್ವಹಿಸುವ ಕೋವಿಡ್ ವಾರಿಯರ್ಸ್, ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ರೀಪಲ್ ಆಫ್ ಚೇಂಜ್ ಫೌಂಡೇಶನ್, ಮತ್ತು ಹಾರ್ಟ್ ಫುಲ್ ನೆಸ್ ಇನ್ಸ್ಟೂಟ್( ಧ್ಯಾನ ತರಬೇತಿ ಕೇಂದ್ರ) ಸಂಡೂರು. ಇವರ ವತಿಯಿಂದ ಸುಮಾರು 8400 ಏನ್ -95 ಮಾಸ್ಕ್ ಗಳನ್ನು ವಿತರಿಸಲಾಯಿತು.

ನಂತರ ಮಾತನಾಡಿದ ಹಾರ್ಟ್ ಫುಲ್ ನೆಸ್ ಇನ್ಸ್ಟೂಟ್ ನ ಸ್ವಯಂಸೇವಕ ಪ್ರಶಾಂತ್ ಪಾಟೀಲ್ ದೇಶದಾದ್ಯಂತ ಕೊರೋನಾ ಸಂದಿಗ್ಧ ಸಮಯದಲ್ಲಿ ಹಲವಾರು ಸಂಬಂಧಗಳ ಕೊಂಡಿ ಕಳಚಿ ಹೋಗಿದ್ದು, ಅನೇಕರು ತಮ್ಮ ಆಪ್ತರನ್ನು ಕಳೆದುಕೊಂಡರೇ ಮಕ್ಕಳು ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಕೊರೊನಾ ರೋಗಕ್ಕೆ ಭಯಪಡುವ ಅಗತ್ಯವಿಲ್ಲ ಸರ್ಕಾರ ನಿಗದಿಗೊಳಿಸಿರುವ ಕೊರಾನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಾವೆಲ್ಲರೂ ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆಲ್ಲೋಣ ಎಂದರು

ಈ ಸಂಧರ್ಭದಲ್ಲಿ ಪುರಸಭೆಯ ಅಧ್ಯಕ್ಷೆ ಅನಿತಾ ವಸಂತಕುಮಾರ್. ಉಪಾಧ್ಯಕ್ಷ ವೀರೇಶ್. ಪುರಸಭೆ ಕಾರ್ಯನಿರ್ವಹಣಾ ಅಧಿಕಾರಿ ಇಮಾಂಸಾಬ್. ಪುರಸಭಾ ಸದಸ್ಯರಾದ ಸುರೇಶ್. ಬಾಬು. ಹರ್ಷ.ಧ್ಯಾನ ತರಬೇತಿ ಕೇಂದ್ರದ ವಿಶ್ವನಾಥ್ ಗೌಡ.ಮುಂತಾದ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here