ಪೋಸ್ಟರ್ ಗಳಿಂದಲೇ ಗಮನ ಸೆಳೆಯುತ್ತಿರುವ ‘ನಿಂಗ’ ಸಿನಿಮಾ

0
510

ಗಣೇಶ ಚತುರ್ಥಿ ಹಬ್ಬದಂದು ‘ನಿಂಗ’ ಚಿತ್ರದ ಪೋಸ್ಟರ್ ಗಳು ಬಿಡುಗಡೆಯಾಗಿದ್ದವು. ವಿಶೇಷವೆಂದರೆ, ಒಂದಕ್ಕಿಂತ ಒಂದು ವಿಭಿನ್ನ ರೀತಿಯ ಪೋಸ್ಟರ್ ಗಳು ಆಕರ್ಷಿಸುವಂತಿದ್ದು, ಚಿತ್ರದ ಬಗ್ಗೆ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾದವು.

ಹಳ್ಳಿ ಹುಡುಗನ ಪ್ರೀತಿಯ ಸೆಂಟಿಮೆಂಟ್ , ನಗರೀಕರಣದ ಪ್ರಭಾವ ಜೊತೆಗೆ ಹಾರರ್ ಕಥಾವಸ್ತು ಇರುವ ‘ನಿಂಗ’ ಚಿತ್ರದಲ್ಲಿ ಮೂರು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ ಸಂಡೂರಿನ ಯುವ ಪ್ರತಿಭೆ ಅರ್ಜಿತ್..


ಅರ್ಜಿತ್ ಪ್ರೊಡಕ್ಷನ್ಸ್ ಲಾಂಛನದಲ್ಲಿ, ನಾಯಕ ನಟರಾದ ಅರ್ಜಿತ್ ರವರೇ ನಿರ್ಮಿಸಿರುವ ಈ ಚಿತ್ರದಲ್ಲಿ, ಹಿರಿಯ ಕಲಾವಿದರ ಜೊತೆಗೆ ಸ್ಥಳೀಯ ಹೊಸ ಪ್ರತಿಭೆಗಳಿಗೆ ಕೂಡ ಅವಕಾಶ ನೀಡಲಾಗಿದೆ.
“ಬಹಳ ದಿನಗಳ ನಂತರ ಕಷ್ಟಪಟ್ಟು ಹಳ್ಳಿ ಹುಡುಗನ ಸೆಂಟಿಮೆಂಟ್ ಮತ್ತು ಹಾರರ್ ಚಿತ್ರಕಥೆಯೊಂದಿಗೆ ಮೂರು ವಿಭಿನ್ನ ಗೆಟಪ್ ಗಳಲ್ಲಿ ಅಭಿನಯಿಸಿ, ಸ್ನೇಹಿತರ ಸಹಕಾರದೊಂದಿಗೆ ಸಿನಿಮಾವನ್ನು ನಿರ್ಮಿಸಿ ಬಿಡುಗಡೆ ಮಾಡುವ ಧೈರ್ಯವನ್ನು ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ನನ್ನದು ದ್ವಿಪಾತ್ರ ಅಭಿನಯವಾಗಿದ್ದು, ಮಾಸ್ ಹಾಗೂ ಕ್ಲಾಸ್ ಆಗಿ ಮೂಡಿ ಬಂದಿದೆ. ನಿಮಗೆಲ್ಲಾ ಇಷ್ಟವಾಗುತ್ತದೆ ನಂಬಿಕೆ ನನ್ನದು, ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ” ಎನ್ನುತ್ತಾರೆ ನಟ ಅರ್ಜಿತ್.

ನಾಯಕನ ತಂದೆ ಪಾತ್ರದಲ್ಲಿ ಹಿರಿಯ ನಟ ರಮೇಶ್ ಭಟ್ ಹಾಗೂ ಸುಧಾ ಬೆಳವಾಡಿ ತಾಯಿ ಪಾತ್ರದಲ್ಲಿ ಹಾಗೂ ಖಳನಾಯಕರ ಪಾತ್ರದಲ್ಲಿ ಬೆಳ್ಳಿ ವೆಂಕಟೇಶ್ ಪ್ರಸಾದ್ ಮಲ್ಲೇಶ್ ಮೈಸೂರು, ಅಶೋಕ್ ರಾವ್ ಅಭಿನಯಿಸಿದ್ದಾರೆ.
ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಸೇರಿದಂತೆ ಅನೇಕ ಚಿತ್ರ ನಿರ್ದೇಶಕರ ಬಳಿ ದುಡಿದ ಅನುಭವವಿರುವ ಭೈರವ ಅವರು ‘ನಿಂಗ’ ಚಿತ್ರದ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದು, ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ರಚಿಸಿದ್ದಾರೆ.


ಇನ್ನು ಚಿತ್ರಕ್ಕೆ ನಾಯಕಿಯರಾಗಿ ಸುಪ್ರಿತಾ ಹಾಗೂ ಕಾವ್ಯಾ ಅಭಿನಯಿಸಿದ್ದು, ಚಿತ್ರದಲ್ಲಿ 5 ಹಾಡುಗಳಿದ್ದು, ಗಣೇಶ್ ನಾರಾಯಣ್ ಸಂಗೀತ ಒದಗಿಸಿದ್ದಾರೆ ಹಾಗೂ 4 ಫೈಟಿಂಗ್ ದೃಶ್ಯಗಳಿದ್ದು, ಸಾಹಸ ನಿರ್ದೇಶಕರಾಗಿ ಡಿಫರೆಂಟ್ ಡ್ಯಾನಿ ಅಶೋಕ್ ಮಾಸ್ಟರ್ ಸೈಲೆಂಟ್ ವೇಲು ಚಿತ್ರೀಕರಿಸಿದ್ದಾರೆ.
ಒಟ್ಟಾರೆ, ‘ನಿಂಗ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ತಾಜಾತನದಿಂದ ಕೂಡಿದ ಪೋಸ್ಟರ್ ಗಳ ಮೂಲಕ ಗಮನ ಸೆಳೆಯುತ್ತಿದೆ. ಸದ್ಯದಲ್ಲಿಯೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾಗಲಿವೆ.

LEAVE A REPLY

Please enter your comment!
Please enter your name here